ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ರಸ್ತೆಯಲ್ಲಿ ಎಳೆದೊಯ್ದ ಚಾಲಕ; ವಿಡಿಯೋ ವೈರಲ್

Updated on: Oct 17, 2024 | 7:50 PM

ಟ್ರಾಫಿಕ್ ಪೊಲೀಸ್ ನಂಬರ್ ಪ್ಲೇಟ್ ಇಲ್ಲದೆ ರಸ್ತೆಯಲ್ಲಿ ವೇಗವಾಗಿ ಬಂದ ಕಾರನ್ನು ನಿಲ್ಲಿಸಿದ್ದಕ್ಕೆ ಆ ಕಾರಿನ ಚಾಲಕ ಆ ಟ್ರಾಫಿಕ್ ಪೊಲೀಸ್​ನನ್ನು ಕಾರಿನ ಬಾನೆಟ್​ನಲ್ಲಿ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್​ಗೆ ಕಾರು ಡಿಕ್ಕಿ ಹೊಡೆದು ಅದೇ ಕಾರು ಅವರನ್ನು ನೂರು ಮೀಟರ್ ಎಳೆದೊಯ್ದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬುಧವಾರ ಕರ್ತವ್ಯ ನಿರತ ಟ್ರಾಫಿಕ್ ಕಾನ್‌ಸ್ಟೆಬಲ್ ಒಬ್ಬರನ್ನು ವೇಗವಾಗಿ ಕಾರಿನ ಬಾನೆಟ್ ಮೇಲೆ 100 ಮೀಟರ್ ಎಳೆದೊಯ್ದ ಘಟನೆ ನಡೆದಿದೆ. ಈ ಘಟನೆಯ ಭಯಾನಕ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವೇಗವನ್ನು ಕಡಿಮೆ ಮಾಡಲು ಚಾಲಕನನ್ನು ಕೇಳಿದಾಗ ವೇಗವಾಗಿ ಬಂದ ಕಾರು ಟ್ರಾಫಿಕ್ ಕಾನ್‌ಸ್ಟೆಬಲ್‌ಗೆ ಡಿಕ್ಕಿ ಹೊಡೆದಿರುವುದನ್ನು ಇದು ತೋರಿಸುತ್ತದೆ. ಇದರ ಬದಲಾಗಿ ಚಾಲಕ ಕಾರಿನ ವೇಗವನ್ನು ಹೆಚ್ಚಿಸಿ ಟ್ರಾಫಿಕ್ ಪೊಲೀಸನ್ನು ಕಾರಿನ ಬಾನೆಟ್ ಮೇಲೆ ಬೀಳಿಸಿಕೊಂಡು ಎಳೆದುಕೊಂಡು ಹೋಗಿದ್ದಾನೆ. ಇದರಿಂದ ಟ್ರಾಫಿಕ್ ಪೊಲೀಸ್ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ.

 

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us