ಡ್ರೋನ್ ಪ್ರತಾಪ್ ಆಟದ ವೈಖರಿ ಬಗ್ಗೆ ಮನೆಯವರಿಗೆ ಶುರುವಾಗಿದೆ ಆತಂಕ
ಬಿಗ್ ಬಾಸ್ನಲ್ಲಿ ಡ್ರೋನ್ ಪ್ರತಾಪ್ ಅವರು ಆರಂಭದಲ್ಲಿ ಡಲ್ ಆಗಿದ್ದರು. ಈಗ ಅವರು ನಿಜವಾದ ಆಟ ತೋರಿಸೋಕೆ ಆರಂಭಿಸಿದ್ದಾರೆ. ಬುದ್ಧಿ ಖರ್ಚು ಮಾಡಿ ಮಹಿಳಾ ಸ್ಪರ್ಧಿಗಳನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ. ಇದನ್ನು ನೋಡಿ ವಿನಯ್ ಗೌಡ, ತುಕಾಲಿ ಸಂತೋಷ್ಗೆ ಚಿಂತೆ ಕಾಡೋಕೆ ಶುರು ಆದಂತಿದೆ..
ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಬಿಗ್ ಬಾಸ್ (Bigg Boss) ಶೋನಲ್ಲಿ ಡ್ರೋನ್ ಪ್ರತಾಪ್ ಅವರು ಆರಂಭದಲ್ಲಿ ಡಲ್ ಆಗಿದ್ದರು. ಈಗ ಅವರು ನಿಜವಾದ ಆಟ ತೋರಿಸೋಕೆ ಆರಂಭಿಸಿದ್ದಾರೆ. ಬುದ್ಧಿ ಖರ್ಚು ಮಾಡಿ ಮಹಿಳಾ ಸ್ಪರ್ಧಿಗಳನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ. ಇದನ್ನು ನೋಡಿ ವಿನಯ್ ಗೌಡ, ತುಕಾಲಿ ಸಂತೋಷ್ಗೆ ಚಿಂತೆ ಕಾಡೋಕೆ ಶುರು ಆದಂತಿದೆ. ಹೀಗಾಗಿ, ಪ್ರತಾಪ್ ಆಟದ ವೈಖರಿ ಬಗ್ಗೆ ಸಂತೋಷ್ (Santosh) ಆತಂಕ ಹೊರ ಹಾಕಿದ್ದಾರೆ. ‘ಅವನಿಗೆ ಯಾಕೆ ಅಷ್ಟೊಂದು ಭಯ ಬೀಳ್ತೀರಾ? ಅವನು ಓರ್ವ ಸಾಮಾನ್ಯ ಕಂಟೆಸ್ಟಂಟ್ ಅಷ್ಟೇ. ಅವನ ಆಟ ಅವನು ಆಡ್ತಾ ಇದಾನೆ. ಜನರು ಪ್ರೀತಿಸುವವರು ಕೊನೆಯ ತನಕ ಇರ್ತಾರೆ’ ಎಂದಿದ್ದಾರೆ ವಿನಯ್. ಜಿಯೋ ಸಿನಿಮಾದಲ್ಲಿ 24 ಗಂಟೆ ಕಾರ್ಯಕ್ರಮ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ