Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL, ICC World Cup: ಶುಭ್​ಮನ್ ಗಿಲ್ ಜೊತೆ ಅಶ್ಲೀಲವಾಗಿ ನಡೆದುಕೊಂಡ ಭಾರತದ ಸ್ಟಾರ್ ಆಟಗಾರ: ವಿಡಿಯೋ ವೈರಲ್

IND vs SL, ICC World Cup: ಶುಭ್​ಮನ್ ಗಿಲ್ ಜೊತೆ ಅಶ್ಲೀಲವಾಗಿ ನಡೆದುಕೊಂಡ ಭಾರತದ ಸ್ಟಾರ್ ಆಟಗಾರ: ವಿಡಿಯೋ ವೈರಲ್

Vinay Bhat
|

Updated on: Oct 31, 2023 | 10:14 AM

Shubman Gill-Ishan Kishan: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಆಡಲಿದ್ದು, ಇದಕ್ಕಾಗಿ ಮುಂಬೈಗೆ ತಲುಪಿದೆ. ಆದರೆ, ವಿಮಾನ ನಿಲ್ದಾಣದಿಂದ ಇಳಿದು ಬಸ್​ಗೆ ಹತ್ತುವ ಮುನ್ನ ಶುಭ್​ಮನ್ ಗಿಲ್ ಜೊತೆ ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ (ICC ODI World Cup) ಸತತ ಆರು ಗೆಲುವು ಸಾಧಿಸಿ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಕ್ರಿಕೆಡ್ ತಂಡ ಇದೀಗ ತನ್ನ ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ಟೀಮ್ ಇಂಡಿಯಾ ತನ್ನ ಏಳನೇ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲಿದೆ. ಇದಕ್ಕಾಗಿ ರೋಹಿತ್ ಶರ್ಮಾ ಪಡೆ ಮುಂಬೈಗೆ ತಲುಪಿದೆ. ಕೋಚ್ ರಾಹುಲ್ ದ್ರಾವಿಡ್, ರೋಹಿತ್ ಜೊತೆ ಅವರ ಪತ್ನಿ ರಿತಿಕಾ, ಬುಮ್ರಾ, ಶುಭ್​ಮನ್ ಗಿಲ್, ಶಮಿ, ಕಿಶನ್ ಸೇರಿದಂತೆ ಎಲ್ಲ ಆಟಗಾರರು ಮುಂಬೈ ವಿಮಾನ ನಿಲ್ದಾಣದಿಂದ ಬಸ್ ಏರಿ ಹೋಟೇಲ್​ಗೆ ತೆರಳಿದರು. ಆದರೆ, ಬಸ್​ಗೆ ಹತ್ತುವ ಮುನ್ನ ಶುಭ್​ಮನ್ ಗಿಲ್ ಜೊತೆ ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ ಇಶಾನ್ ಕಿಶನ್ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಇದರಿಂದ ಗಿಲ್ ಒಂದು ಕ್ಷಣ ಕೋಪಗೊಂಡಂತೆ ಕಂಡಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಗಿಲ್-ಕಿಶನ್ ಉತ್ತಮ ಸ್ನೇಹಿತರಾಗಿದ್ದು, ಈರೀತಿಯ ಕೀಟಲೆ ಮಾಡುತ್ತಲೇ ಇರುತ್ತಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ