BBK 10: ತುಕಾಲಿ ಸಂತೋಷ್ ವೇಷ ನೋಡಿ ದೃಷ್ಟಿ ತೆಗೆಯೋಕೆ ಬಂದ ಮನೆ ಮಂದಿ; ಸೀರೆ ಉಡಿಸೋದು ಬಾಕಿ
Tukali Santhosh Comedy: ತುಕಾಲಿ ಸಂತೋಷ್ ಅವರು ಹುಡುಗಿ ರೀತಿಯಲ್ಲಿ ಗೆಟಪ್ ಬದಲಿಸಿಕೊಂಡಿದ್ದಾರೆ. ಅವರನ್ನು ನೋಡಿ ಮನೆ ಮಂದಿಯೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ. ಇಂಥ ತಮಾಷೆಯ ಪ್ರಸಂಗಗಳಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಕಾರ್ಯಕ್ರಮ ರಂಗೇರಿದೆ. ಟಾಸ್ಕ್ನ ನಡುವೆ ಈ ರೀತಿಯ ಮಸ್ತ್ ಮನರಂಜನೆ ಕೂಡ ಪ್ರೇಕ್ಷಕರಿಗೆ ಸಿಗುತ್ತಿದೆ.
ಹಾಸ್ಯ ನಟ ತುಕಾಲಿ ಸಂತೋಷ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ರಿಯಾಲಿಟಿ ಶೋನಲ್ಲಿ ಸಖತ್ ಮನರಂಜನೆ ನೀಡುತ್ತಿದ್ದಾರೆ. ಪ್ರತಿ ಸೀಸನ್ನಲ್ಲಿ ಸ್ಪರ್ಧಿಗಳು ಬಗೆಬಗೆಯ ವೇಷ ಹಾಕಿಕೊಂಡು ಎಂಟರ್ಟೇನ್ ಮಾಡಲು ಪ್ರಯತ್ನಿಸುತ್ತಾರೆ. ಈ ಬಾರಿ ತುಕಾಲಿ ಸಂತೋಷ್ (Tukali Santhosh) ಅವರು ಹುಡುಗಿ ರೀತಿಯಲ್ಲಿ ಗೆಟಪ್ ಬದಲಿಸಿಕೊಂಡಿದ್ದಾರೆ. ಅವರನ್ನು ನೋಡಿ ಮನೆ ಮಂದಿಯೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ. ‘ಮಗುಗೆ ದೃಷ್ಟಿ ಆಗುತ್ತದೆ’ ಎಂದು ಕೆಲವರು ಹೇಳಿದ್ದಾರೆ. ‘ಒಂದು ಸೀರೆ ಉಡಿಸೋಣವೇ’ ಎಂದು ಈಶಾನಿ ಕೇಳಿದ್ದಾರೆ. ಅಕ್ಟೋಬರ್ 30ರ ಸಂಚಿಕೆಯಲ್ಲಿ ಈ ಫನ್ನಿ ಘಟನೆ ನೋಡಬಹುದು. ‘ಕಲರ್ಸ್ ಕನ್ನಡ’ದಲ್ಲಿ ಪ್ರತಿ ರಾತ್ರಿ 9.30ಕ್ಕೆ ಬಿಗ್ ಬಾಸ್ (Bigg Boss Kannada) ಶೋ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos