ತಾಯಿ ಜೊತೆ ಫುಟ್​ಪಾತ್​ನಲ್ಲಿ ಮಲಗಿದ್ದ ತುಕಾಲಿ ಸಂತು; ಹಾಸ್ಯ ನಟನ ಬಾಳಲ್ಲಿ ಕಣ್ಣೀರ ಕಥೆ

‘ನಾನು ಬರುವವರೆಗೂ ನಮ್ಮ ಅಮ್ಮ ಜೀವ ಬಿಟ್ಟಿರಲಿಲ್ಲ. ಓಡಿ ಬಂದು ನೋಡಿದೆ. ಅಮ್ಮನ ಕಣ್ಣಲ್ಲಿ ನೀರು ಹರಿದುಹೋಯ್ತು’ ಎಂದು ತಮ್ಮ ನೋವಿನ ದಿನಗಳನ್ನು ತುಕಾಲಿ ಸಂತೋಷ್​ ಅವರು ನೆನಪು ಮಾಡಿಕೊಂಡಿದ್ದಾರೆ. ಅವರು ಹೇಳಿದ್ದನ್ನೆಲ್ಲ ಕೇಳಿ ಬಿಗ್​ ಬಾಸ್​ ಮನೆಯಲ್ಲಿರುವ ಇನ್ನುಳಿದ ಸದಸ್ಯರು ಕಂಬನಿ ಸುರಿಸಿದ್ದಾರೆ.

ತಾಯಿ ಜೊತೆ ಫುಟ್​ಪಾತ್​ನಲ್ಲಿ ಮಲಗಿದ್ದ ತುಕಾಲಿ ಸಂತು; ಹಾಸ್ಯ ನಟನ ಬಾಳಲ್ಲಿ ಕಣ್ಣೀರ ಕಥೆ
ತುಕಾಲಿ ಸಂತೋಷ್​, ನಮ್ರತಾ ಗೌಡ
Follow us
|

Updated on: Oct 23, 2023 | 6:34 PM

ಹಲವು ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳು ಬಿಗ್​ ಬಾಸ್ (Bigg Boss Kannada Season 10)​ ಮನೆಗೆ ಎಂಟ್ರಿ ನೀಡಿದ್ದಾರೆ. ಎಲ್ಲ ಸ್ಪರ್ಧಿಗಳಿಗೂ ಒಂದೊಂದು ಹಿನ್ನೆಲೆ ಇರುತ್ತದೆ. ಕೆಲವರ ಬದುಕಿನ ಕಹಾನಿ ತುಂಬ ಕರುಣಾಜನಕ ಆಗಿರುತ್ತದೆ. ಈಗ ಹಾಸ್ಯ ನಟ ತುಕಾಲಿ ಸಂತೋಷ್​ (Tukali Santosh) ಅವರು ತಮ್ಮ ಜೀವನದ ಕಷ್ಟದ ದಿನಗಳ ನೆನಪನ್ನು ಬಿಗ್​ ಬಾಸ್​ ಮನೆಯಲ್ಲಿ ಮೆಲುಕು ಹಾಕಿದ್ದಾರೆ. ತಾವು ಅನುಭವಿಸಿದ ಬಡತನವನ್ನು ಎಲ್ಲರ ಎದುರು ವಿವರಿಸಿದ್ದಾರೆ. ಸಂತೋಷ್​ ಅವರ ತಾಯಿಗೆ ಅನಾರೋಗ್ಯ ಕಾಡುತ್ತಿತ್ತು. ಅದರಿಂದಾಗಿ ಅವರು ಮೃತಪಟ್ಟರು. ತಾಯಿಯನ್ನು ನೆನೆದು ತುಕಾಲಿ ಸಂತು ಕಣ್ಣೀರು ಹಾಕಿದ್ದಾರೆ. ಅವರ ಜೀವನದ ಕಥೆ ಹೇಳಿ ಇನ್ನುಳಿದ ಸ್ಪರ್ಧಿಗಳು ಕೂಡ ಅತ್ತಿದ್ದಾರೆ. ಇಂಥ ಒಂದು ಎಮೋಷನಲ್​ ಘಟನೆಗೆ ಬಿಗ್ ಬಾಸ್​ (Bigg Boss Kannada) ಮನೆ ಸಾಕ್ಷಿ ಆಗಿದೆ. ಪ್ರತಿ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಈ ಶೋ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ದಿನದ 24 ಗಂಟೆಯೂ ಉಚಿತವಾಗಿ ನೋಡುವ ಅವಕಾಶ ಇದೆ.

ಪ್ರತಿ ಸೀಸನ್​ನಲ್ಲಿ ಇಂಥ ಸನ್ನಿವೇಶ ಎದುರಾಗುತ್ತದೆ. ನಗುನಗುತ್ತಾ, ಎಲ್ಲರೊಂದಿಗೆ ಬೆರೆಯುತ್ತಾ, ಟಾಸ್ಕ್​ಗಾಗಿ ಗುದ್ದಾಡುತ್ತಾ ಕಾಲ ಕಳೆಯುವ ಸ್ಪರ್ಧಿಗಳು ಒಮ್ಮೊಮ್ಮೆ ತಮ್ಮ ರಿಯಲ್​ ಕೈಫ್​ ಘಟನೆಗಳನ್ನು ನೆನಪಿಸಿಕೊಂಡು ಎಮೋಷನಲ್ ಆಗುತ್ತಾರೆ. ಈ ಸೀಸನ್​ನಲ್ಲೂ ಅದು ಮರುಕಳಿಸಿದೆ. ಎಲ್ಲರನ್ನೂ ತಮ್ಮ ಕಾಮಿಡಿ ಮೂಲಕ ನಗಿಸುವ ತುಕಾಲಿ ಸಂತೋಷ್​ ಅವರ ಬದುಕಿನಲ್ಲಿ ಟ್ರ್ಯಾಜಿಡಿ ನಡೆದಿತ್ತು. ಇಂದು ಸಂತು ಖ್ಯಾತಿ ಮತ್ತು ಹಣ ಗಳಿಸುತ್ತಿದ್ದಾರೆ. ಆದರೆ ಅದನ್ನು ನೋಡಿ ಖುಷಿಪಡಲು ತಾಯಿ ಇಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ.

ಇದನ್ನೂ ಓದಿ: ನನ್ನ ಗಂಡನ್ನ ಟಾರ್ಗೆಟ್ ಮಾಡ್ತಿದ್ದಾರೆ: ತುಕಾಲಿ ಸಂತು ಪತ್ನಿ ಚಿನ್ನಿ ಮಾತು

‘ನಮ್ಮ ಅಮ್ಮ ಮತ್ತು ನಾನು ಒಟ್ಟಿಗೆ ಫುಟ್​ಪಾತ್​ನಲ್ಲಿ ಮಲಗುತ್ತಿದ್ದೆವು. ತುಂಬ ಕಷ್ಟ ಇತ್ತು. ತಾಯಿಗೆ ಹುಷಾರಿರಲಿಲ್ಲ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬೇಕು ಅಂತ ನಾನು ಕಾರು ತೆಗೆದುಕೊಂಡು. ಅಮ್ಮ ಆ ಕಾರನ್ನು ಮುಟ್ಟಿ ‘ಕಾರು ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದುಬಿಟ್ಟೆಯಲ್ಲ. ನನ್ನನ್ನು ಉಳಿಸಿಕೊಳ್ಳುತ್ತೀಯ ಅಲ್ವಾ’ ಅಂತ ಕೇಳಿದ್ದರು. ಆದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ’ ಎಂದಿದ್ದಾರೆ ತುಕಾಲಿ ಸಂತೋಷ್​.

‘ನಾನು ಬರುವವರೆಗೂ ನಮ್ಮ ಅಮ್ಮ ಜೀವ ಬಿಟ್ಟಿರಲಿಲ್ಲ. ಓಡಿ ಬಂದು ನೋಡಿದೆ. ಅಮ್ಮನ ಕಣ್ಣಲ್ಲಿ ನೀರು ಹರಿದುಹೋಯ್ತು’ ಎಂದು ತಮ್ಮ ನೋವಿನ ದಿನಗಳನ್ನು ತುಕಾಲಿ ಸಂತೋಷ್​ ಅವರು ನೆನಪು ಮಾಡಿಕೊಂಡಿದ್ದಾರೆ. ಅವರು ಹೇಳಿದ್ದನ್ನೆಲ್ಲ ಕೇಳಿ ಮನೆಯ ಇತರೆ ಸದಸ್ಯರು ಕಂಬನಿ ಸುರಿಸಿದ್ದಾರೆ. ಇತ್ತೀಚೆಗೆ ಸಂತೋಷ್​ ಅವರ ಪತ್ನಿ ಮಾನಸಾ ಕೂಡ ಇದೇ ಘಟನೆಯ ಕುರಿತು ‘ಟಿವಿ9 ಕನ್ನಡ’ ಜೊತೆ ಮಾತನಾಡಿದ್ದರು. ‘ಸಂತೋಷ್​ ಮೊದಲೇ ಎಚ್ಚೆತ್ತುಕೊಂಡಿದ್ದರೆ ಅಮ್ಮನನ್ನು ಬದುಕಿಸಿಕೊಳ್ಳಬಹುದಿತ್ತು ಎನಿಸುತ್ತೆ. ನೋಡಿಕೊಳ್ಳುವವರು ಯಾರೂ ಇಲ್ಲದೇ ಆಸ್ಪತ್ರೆಗೆ ಸರಿಯಾಗಿ ತೋರಿಸುವುದಕ್ಕೆ ಆಗಲಿಲ್ಲ. ಸಂತು ಕಡೆಯಿಂದ ತಪ್ಪಾಗಿಹೋಯ್ತು. ಆ ಬಗ್ಗೆ ಈಗಲೂ ಕೊರಗು ಇದೆ’ ಎಂದು ಮಾನಸಾ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ