ನನ್ನ ಗಂಡನ್ನ ಟಾರ್ಗೆಟ್ ಮಾಡ್ತಿದ್ದಾರೆ: ತುಕಾಲಿ ಸಂತು ಪತ್ನಿ ಚಿನ್ನಿ ಮಾತು

ನನ್ನ ಗಂಡನ್ನ ಟಾರ್ಗೆಟ್ ಮಾಡ್ತಿದ್ದಾರೆ: ತುಕಾಲಿ ಸಂತು ಪತ್ನಿ ಚಿನ್ನಿ ಮಾತು

ಮಂಜುನಾಥ ಸಿ.
|

Updated on: Oct 20, 2023 | 11:43 PM

Bigg Boss: ಮೊದಲ ವಾರದ ಬಳಿಕ ತುಕಾಲಿ ಸಂತೋಷ್ ವಿರುದ್ಧ ಮನೆಯ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ತುಕಾಲಿ ಸಂತು ಪತ್ನಿ ಮಾನಸ, ತುಕಾಲಿ ಸಂತು ಅವರನ್ನು ಬಿಗ್​ಬಾಸ್ ಮನೆಯಲ್ಲಿ ಟಾರ್ಗೆಟ್ ಮಾಡಲಾಗಿದೆ ಎಂದಿದ್ದಾರೆ.

ಬಿಗ್​ಬಾಸ್ (Bigg Boss) ಮನೆಯಲ್ಲಿ ಮೊದಲ ವಾರದ ಕೊನೆಯಲ್ಲಿ ಹಲವು ಸದಸ್ಯರು ತುಕಾಲಿ ಸಂತು ವಿರುದ್ಧ ತಿರುಗಿ ಬಿದ್ದಿದ್ದರು. ಸಂತು ಅವರು ಮಾಡುವ ಹಾಸ್ಯ ಸರಿಬರುತ್ತಿಲ್ಲ, ಅವರು ವ್ಯಂಗ್ಯ ಮಾಡುತ್ತಾರೆ, ಬೇಸರವಾಗುವಂತೆ ಹಾಸ್ಯ ಮಾಡುತ್ತಾರೆ ಎಂದೆಲ್ಲ ಹೇಳಿದ್ದರು. ನಟ ಸುದೀಪ್ ಸಹ ತುಕಾಲಿ ಸಂತು ಅವರ ಹಾಸ್ಯದ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡಿದ್ದರು. ಇದೀಗ ತುಕಾಲಿ ಸಂತು ಪತ್ನಿ ಮಾನಸ ಈ ಬಗ್ಗೆ ಮಾತನಾಡಿದ್ದು, ತುಕಾಲಿ ಸಂತು ಅವರನ್ನು ಟಾರ್ಗೆಟ್ ಮಾಡಿರುವುದು ಕಂಡು ಬಹಳ ಬೇಸರವಾಯ್ತು ಎಂದಿದ್ದಾರೆ. ಮಾತ್ರವಲ್ಲದೆ, ತುಕಾಲಿ ಸಂತು ಅವರು ತಪ್ಪು ಮಾಡಿದ್ದಾರೆ ಎಂದರೆ ಅವರಿಗೆ ತಿದ್ದುಕೊಳ್ಳಲು ಅವಕಾಶವನ್ನೂ ನೀಡಬೇಕು ಎಂದಿದ್ದಾರೆ. Tತುಕಾಲಿ ಸಂತು ಹಾಗೂ ಅವರ ಪತ್ನಿಯ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಬಿಗ್​ಬಾಸ್ ಮನೆಯಲ್ಲಿರುವ ತುಕಾಲಿ ಸಂತು ಆಗಾಗ್ಗೆ ತಮ್ಮ ಪತ್ನಿಯನ್ನುದ್ದೇಶಿಸಿ ಚಿನ್ನಿ-ಚಿನ್ನಿ ಎನ್ನುತ್ತಾ ಮಾತನಾಡುತ್ತಿರುತ್ತಾರೆ. ಹಬ್ಬ ಮಾಡು, ಪೂಜೆ ಮಾಡು ಎಂದೆಲ್ಲ ಬಿಗ್​ಬಾಸ್ ಮನೆಯಿಂದಲೇ ನಿರ್ದೇಶನ ನೀಡುತ್ತಿರುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ