AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ‘ಈಶಾನಿ ಅಧಿಕೃತವಾಗಿ ನನ್ನ ಗರ್ಲ್​ಫ್ರೆಂಡ್​’; ಬಿಗ್​ ಬಾಸ್​ ಮನೆಯಲ್ಲಿ ಮೈಕೆಲ್​ ಘೋಷಣೆ

ಮೈಕೆಲ್​ ಅಜಯ್​ ಅವರು ಈಶಾನಿಯನ್ನು ಗರ್ಲ್​ಫ್ರೆಂಡ್​ ಎಂದು ಹೇಳಿದ ಬಳಿಕ ಅದನ್ನು ಎಲ್ಲರಿಗೂ ಕೇಳುವಂತೆ ವಿನಯ್​ ಗೌಡ ಕೂಗಿ ಹೇಳಿದ್ದಾರೆ. ‘ಇಂದಿನಿಂದ ನನ್ನ ತಂಗಿ ಅಧಿಕೃತವಾಗಿ ಮೈಕೆಲ್​ಗೆ ಗರ್ಲ್​ಫ್ರೆಂಡ್​’ ಎಂದು ಅನೌನ್ಸ್​ ಮಾಡಿದ್ದಾರೆ. ಅಲ್ಲದೇ, ಈ ನಿರ್ಧಾರಕ್ಕೆ ಕಾರಣ ಏನು ಎಂದು ಮೈಕೆಲ್​ಗೆ ಪ್ರಶ್ನೆ ಕೇಳಲಾಯಿತು.

Bigg Boss Kannada: ‘ಈಶಾನಿ ಅಧಿಕೃತವಾಗಿ ನನ್ನ ಗರ್ಲ್​ಫ್ರೆಂಡ್​’; ಬಿಗ್​ ಬಾಸ್​ ಮನೆಯಲ್ಲಿ ಮೈಕೆಲ್​ ಘೋಷಣೆ
ಮೈಕೆಲ್​ ಅಜಯ್​, ಈಶಾನಿ
ಮದನ್​ ಕುಮಾರ್​
|

Updated on: Oct 23, 2023 | 10:53 PM

Share

ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಲವ್​ ಚಿಗುರಿದ ಅನೇಕ ನಿದರ್ಶನ ಇವೆ. ದೊಡ್ಮನೆಯಲ್ಲಿ ಪ್ರೀತಿ ಶುರುವಾಗಿ, ಅದು ಹಸೆಮಣೆವರೆಗೂ ಸಾಗಿ ಬಂದಿದ್ದೂ ಇದೆ. ಅದಕ್ಕೆ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರೇ ಉದಾಹರಣೆ. ಪ್ರತಿ ಬಿಗ್​ ಬಾಸ್​ ಶೋನಲ್ಲೂ ಲವ್​ ಸ್ಟೋರಿಗಳು ಹುಟ್ಟಿಕೊಳ್ಳುತ್ತವೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲೂ ಅದು ಮಂದುವರಿದಿದೆ. ಈ ಬಾರಿ ಮೈಕೆಲ್​ ಅಜಯ್​ (Michael Ajay) ಮತ್ತು ಈಶಾನಿ (Eshani) ಅವರು ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇದನ್ನು ಅವರು ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಘೋಷಣೆ ಮಾಡುತ್ತಿದ್ದಂತೆಯೇ ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೂ ಸಂಭ್ರಮಿಸಿದ್ದಾರೆ.

ಈ ಶೋನಲ್ಲಿ ಎಲ್ಲ ವಯಸ್ಸಿನ ಸ್ಪರ್ಧಿಗಳು ಇರುತ್ತಾರೆ. ಅದಕ್ಕೆ ತಕ್ಕಂತೆ ಕೆಲವು ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ವಿನಯ್​ ಗೌಡ ಅವರು ಸಿಂಗರ್​ ಈಶಾನಿಯನ್ನು ತಂಗಿ ಎಂದು ಕರೆದಿದ್ದಾರೆ. ಅದೇ ರೀತಿ, ಮ್ಯೂಸಿಕ್​ನಲ್ಲಿ ಆಸಕ್ತಿ ಇರುವ ಈಶಾನಿ ಮತ್ತು ಮೈಕೆಲ್​ ಅಜಯ್ ನಡುವೆ ಲವ್​ ಚಿಗುರಿದೆ. ಇಷ್ಟು ದಿನ ಈ ವಿಚಾರ ಅಧಿಕೃತ ಆಗಿರಲಿಲ್ಲ. ಆದರೆ ಸೋಮವಾರದ (ಅಕ್ಟೋಬರ್​ 23) ಎಪಿಸೋಡ್​ನಲ್ಲಿ ಮೈಕೆಲ್​ ಅಜಯ್​ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ನೈಜೀರಿಯಾ ಕನ್ನಡಿಗ ಮೈಕೆಲ್​ ಅಜಯ್​; ಏನು ಇವರ ಹಿನ್ನೆಲೆ?

ಮೈಕೆಲ್​ ಅಜಯ್​ ಅವರು ಈಶಾನಿಯನ್ನು ಗರ್ಲ್​ಫ್ರೆಂಡ್​ ಎಂದು ಹೇಳಿದ ಬಳಿಕ ಅದನ್ನು ಎಲ್ಲರಿಗೂ ಕೇಳುವಂತೆ ವಿನಯ್​ ಗೌಡ ಕೂಗಿ ಹೇಳಿದ್ದಾರೆ. ‘ಇಂದಿನಿಂದ ನನ್ನ ತಂಗಿ ಅಧಿಕೃತವಾಗಿ ಮೈಕೆಲ್​ಗೆ ಗರ್ಲ್​ಫ್ರೆಂಡ್​’ ಎಂದು ಅನೌನ್ಸ್​ ಮಾಡಿದ್ದಾರೆ. ಅಲ್ಲದೇ, ಈ ನಿರ್ಧಾರಕ್ಕೆ ಕಾರಣ ಏನು ಎಂದು ಮೈಕೆಲ್​ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಮೈಕೆಲ್ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ. ‘ಸುಮ್ಮನೆ ಆ ಫೀಲ್​ ಬಂತು’ ಎಂದಿದ್ದಾರೆ ಮೈಕೆಲ್​.

ಇದನ್ನೂ ಓದಿ: ಕ್ಷಮೆ ಕೇಳಿದರೂ ತಪ್ಪಲಿಲ್ಲ ಕಠಿಣ ಶಿಕ್ಷೆ; ಬಿಗ್ ಬಾಸ್​ ಮನೆಯಲ್ಲಿ ಇವರು ಮಾಡಿದ ತಪ್ಪೇನು?

ಬಿಗ್​ ಬಾಸ್​ ಮನೆಯಲ್ಲಿ ಸಂಬಂಧಗಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಟಾಸ್ಕ್​ ವಿಚಾರ ಬಂದಾಗ ಎಲ್ಲ ಸಂಬಂಧಗಳನ್ನು ಬದಿಗಿಟ್ಟು ಹೋರಾಡಬೇಕಾಗುತ್ತದೆ. ನಾಮಿನೇಟ್​ ಮಾಡುವಾಗ ಮುಲಾಜು ಇಟ್ಟುಕೊಳ್ಳಲು ಆಗುವುದಿಲ್ಲ. ಪರಸ್ಪರ ಪ್ರೀತಿಸುವವರು ಬೇರೆ ಬೇರೆ ಟೀಮ್​ನಲ್ಲಿ ಸ್ಪರ್ಧೆಗೆ ಇಳಿದಾಗ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಇನ್ಮುಂದೆ ಈಶಾನಿ ಮತ್ತು ಮೈಕೆಲ್​ ಅವರು ಈ ಎಲ್ಲ ಸಂದರ್ಭಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ: ಎರಡು ಭಾಗವಾಯ್ತು ಬಿಗ್​ ಬಾಸ್​ ಮನೆ; ಟಾಸ್ಕ್​ ಮಾಡುತ್ತಾ ದ್ವೇಷ ಕಟ್ಟಿಕೊಂಡ ಸ್ಪರ್ಧಿಗಳು

ಬಿಗ್​ ಬಾಸ್​ ಮನೆಯಲ್ಲಿ ಮೂರನೇ ವಾರದ ಆಟ ನಡೆಯುತ್ತಿದೆ. ಈಗಾಗಲೇ ಸ್ನೇಕ್​ ಶ್ಯಾಮ್​, ಗೌರೀಶ್​ ಅಕ್ಕಿ ಎಲಿಮಿನೇಟ್​ ಆಗಿದ್ದಾರೆ. ಹುಲಿ ಉಗುರು ಹೊಂದಿದ್ದ ಆರೋಪದ ಮೇಲೆ ವರ್ತೂರು ಸಂತೋಷ್​ ಅವರು ಅರೆಸ್ಟ್​ ಆಗಿದ್ದರಿಂದ ಅವರ ಬಿಗ್​ ಬಾಸ್​ ಜರ್ನಿ ಕೂಡ ಅಂತ್ಯವಾಗಿದೆ. ಈ ಶೋ ‘ಕಲರ್ಸ್ ಕನ್ನಡ’ ಚಾನೆಲ್​ನಲ್ಲಿ ಪ್ರತಿ ರಾತ್ರಿ 9.30ಕ್ಕೆ ಪ್ರಸಾರ ಆಗತ್ತಿದೆ. ಜಿಯೋ ಸಿನಿಮಾ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ವೀಕ್ಷಣೆಗೆ ಲಭ್ಯವಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು