‘ಪರಿಣಾಮ ನೆಟ್ಟಗಿರಲ್ಲ’; ಕಾಲ್ಕೆರೆದು ಜಗಳಕ್ಕೆ ಬಂದ ವಿನಯ್ಗೆ ಪ್ರತಾಪ್ ಖಡಕ್ ಎಚ್ಚರಿಕೆ
ಪ್ರತಾಪ್ ಅವರು ಬದಲಾಗುವುದಾಗಿ ಸುದೀಪ್ ಎದುರು ಪ್ರಾಮಿಸ್ ಮಾಡಿದ್ದರು. ಈ ಮಾತನ್ನು ಉಳಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ.
ಯಾರಾದರೂ ಏನಾದರೂ ಹೇಳಿದರೆ, ಆರೋಪ ಮಾಡಿದರೆ ಡ್ರೋನ್ ಪ್ರತಾಪ್ ಅವರು ಅಷ್ಟಾಗಿ ರಿಯಾಕ್ಟ್ ಮಾಡೋಕೆ ಹೋಗುತ್ತಿರಲಿಲ್ಲ. ಆದರೆ, ಅವರು ಬದಲಾಗುವುದಾಗಿ ಸುದೀಪ್ (Sudeep) ಎದುರು ಪ್ರಾಮಿಸ್ ಮಾಡಿದ್ದರು. ಈ ಮಾತನ್ನು ಉಳಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ‘ಡ್ರೋನ್ ಪ್ರತಾಪ್ ನಾಟಕ ಮಾಡಿಕೊಂಡು, ಎಲ್ಲರಿಗೆ ಬೂದಿ ಎರಚಿಕೊಂಡು ಇದ್ದಾನೆ’ ಎಂದರು ವಿನಯ್. ಅಲ್ಲದೆ ಏಕವಚನದಲ್ಲಿ ಪ್ರತಾಪ್ನ ಸಂಬೋಧಿಸಿದರು. ಇದು ಪ್ರತಾಪ್ಗೆ ಕೋಪ ತರಿಸಿದೆ. ‘ನೀವು ಹೇಳಿದ್ದೆಲ್ಲ ಹೇಳಿಸಿಕೊಂಡು ಇರೋಕೆ ಆಗಲ್ಲ. ಪರಿಣಾಮ ನೆಟ್ಟಗೆ ಇರಲ್ಲ’ ಎಂದಿದ್ದಾರೆ ಪ್ರತಾಪ್. ಇಂದು (ಜನವರಿ 8) ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ