ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್

Updated on: May 14, 2025 | 12:01 PM

ಡ್ರೋನ್ ಪ್ರತಾಪ್ ಅವರು ‘ಬಿಗ್ ಬಾಸ್’ ಮೂಲಕ ಜನಪ್ರಿಯತೆ ಪಡೆದರು. ಆ ಬಳಿಕ ಅವರು ಸಾಕಷ್ಟು ಖ್ಯಾತಿ ಪಡೆದುಕೊಂಡರು. ಅವರ ಬಗ್ಗೆ ಇದ್ದ ನೆಗೆಟಿವ್ ಟಾಕ್ ಪಾಸಿಟಿವ್ ಆಗಿ ಬದಲಾಯಿತು. ಈಗ ನೆಚ್ಚಿನ ನಾಯಕಿಗಾಗಿ ಅವರು ಹರಕೆ ಹೊತ್ತುಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಡ್ರೋನ್ ಪ್ರತಾಪ್ (Drone Prathap) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ರನ್ನರ್ ಅಪ್. ಈಗ ಅವರು ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಇದ್ದಾರೆ. ಅವರಿಗೆ ಗಗನಾ ಜೊತೆಯಾಗಿದ್ದಾರೆ. ಗಗನಾ  ಅವರಿಗೆ ಚಿತ್ರರಂಗದಲ್ಲಿ ಇನ್ನಷ್ಟೇ ಅವಕಾಶ ಹಾಗೂ ಯಶಸ್ಸು ಸಿಗಬೇಕಿದೆ. ಈ ಕಾರಣಕ್ಕೆ ಡ್ರೋನ್ ಪ್ರತಾಪ್ ಅವರು ಹರಕೆ ಹೊತ್ತುಕೊಂಡಿದ್ದಾರೆ! ಈ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದನ್ನು ನೋಡಿ ಅನೇಕರಿಗೆ ಶಾಕ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: May 14, 2025 11:54 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More