ಚಂದ್ರದ್ರೋಣ ಪರ್ವತಕ್ಕೆ ಡ್ರೋನ್ ಕಣ್ಗಾವಲು: ಬೆಂಕಿಯಿಂದ ಅರಣ್ಯ ನಾಶ ತಡೆಗೆ ಕ್ರಮ
ಪಶ್ಚಿಮಘಟ್ಟದ ಚಂದ್ರದ್ರೋಣ ಪರ್ವತ ಸಾಲಿನ ಶೋಲಾ ಹುಲ್ಲುಗಾವಲು ಪ್ರದೇಶದಲ್ಲಿ ಮಂಗಳವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗಿಸಿ ಉರಿದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ ಗಾಳಿಕೆರೆ ಭಾಗದ 6 ಕಡೆ ಬೆಂಕಿ ಹೊತ್ತಿಕೊಂಡು ಅರಣ್ಯ ಸಂಪತ್ತು ನಾಶವಾಗಿದೆ.
ಚಿಕ್ಕಮಗಳೂರು, ಫೆಬ್ರವರಿ 26: ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಇದರಿಂದ ನೂರಾರು ಎಕರೆಯ ಶೋಲಾ ಅರಣ್ಯ ಭಸ್ಮವಾಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ ಗಾಳಿಕೆರೆ ಭಾಗದ 6 ಕಡೆ ಬೆಂಕಿ ಹಚ್ಚಲಾಗಿದೆ. ಕಿಡಿಗೇಡಿಗಳು ಇಟ್ಟ ಬೆಂಕಿಗೆ ಇಡೀ ಗುಡ್ಡವೇ ಉರಿದುಹೋಗಿದೆ.
ಇದೀಗ, ಕಿಡಿಗೇಡಿಗಳ ಕೃತ್ಯ ತಡೆಯಲು ಅರಣ್ಯ ಇಲಾಖೆ ಡ್ರೋನ್ ಮೊರೆ ಹೋಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಡ್ರೋನ್ ಮೂಲಕ ಅರಣ್ಯ ಇಲಾಖೆ ಕಣ್ಣಿಟ್ಟಿದೆ. ಕಳೆದ ಒಂದು ವಾದದಿಂದ ನಿರಂತರವಾಗಿ ಬೆಂಕಿ ಕಾಣಿಸಿಕೊಳ್ತಿದ್ದು, ಎಫ್ಐಆರ್ ದಾಖಲಾದರೂ ಕಿಡಿಗೇಡಿಗಳ ಕೃತ್ಯ ಮುಂದುವರೆದಿದೆ.
Latest Videos