ಡ್ರೋಣ್ ಕೆಮೆರಾಗಳ ಮೂಲಕವೂ ಸೆರೆಯಾದವು ಮಳೆ ಸೃಷ್ಟಿಸುತ್ತಿರುವ ಅನಾಹುತಗಳು!
ನೀರು ರಸ್ತೆಯ ಎರಡೂ ಪಕ್ಕಗಳಲ್ಲಿರುವ ಅಡಕೆ ಮತ್ತು ತೆಂಗಿನ ತೋಟಗಳಿಗೆ ನುಗ್ಗಿದೆ. ಭಾರಿ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ ಎಂದು ತೆಂಗು ಮತ್ತು ಅಡಕೆ ಬೆಳೆಗಾರರು ಹೇಳುತ್ತಿದ್ದಾರೆ.
ಡ್ರೋಣ್ಗಳು ನಮಗೆ ನಾನಾ ವಿಧಗಳಲ್ಲಿ ನೆರವಾಗುತ್ತಿವೆ. ಅದಕ್ಕೊಂದು ಉದಾಹರಣೆ ಅಂದರೆ ನಿಮಗಿಲ್ಲಿ ಕಾಣುತ್ತಿರುವ ವಿಹಂಗಮ ದೃಶ್ಯ. ಡ್ರೋಣ್ನಲ್ಲಿ ಕೆಮೆರಾವನ್ನು ಅಳವಡಿಸಿ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಅಂದಹಾಗೆ, ಈ ದೃಶ್ಯದಲ್ಲಿ ಕಾಣುತ್ತಿರೋದು ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ. ಜಿಲ್ಲೆಯಲ್ಲಿ ಮಳೆ ಸೃಷ್ಟಿಸಿರುವ ತೊಂದರೆಗಳನ್ನು ತೋರಿಸಲು ಇದನ್ನು ಶೂಟ್ ಮಾಡಲಾಗಿದೆ. ನಿಮಗೆ ಕಾಣುತ್ತಿರುವ ರಸ್ತೆ ಬೆಂಗಳೂರು-ಶಿವಮೊಗ್ಗ ಹೆದ್ದಾರಿ ಆಗಿದೆ. ರಸ್ತೆಯ ಇಕ್ಕೆಲಗಳಲ್ಲಿ ನೀರು ಹರಿದು ಅವು ಕೆರೆಗಳೇನೋ ಅನಿಸುತ್ತಿದೆ. ನೀರು ಎರಡೂ ಪಕ್ಕಗಳಲ್ಲಿರುವ ಅಡಕೆ ಮತ್ತು ತೆಂಗಿನ ತೋಟಗಳಿಗೆ ನುಗ್ಗಿದೆ. ಭಾರಿ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ ಎಂದು ತೆಂಗು ಮತ್ತು ಅಡಕೆ ಬೆಳೆಗಾರರು ಹೇಳುತ್ತಿದ್ದಾರೆ. ರಾಜ್ಯದ ರೈತರೆಲ್ಲ ಇದೇ ಮಾತನ್ನು ಹೇಳುತ್ತಿದ್ದಾರೆ ಮತ್ತು ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬಂಗಾಳ ಕೊಲ್ಲಿ ಮೇಲೆ ಉಂಟಾಗಿರುವ ವಾಯುಭಾರ ಕುಸಿತದಿಂದ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಕರ್ನಾಟಕದಲ್ಲಿ ಬಿಡಿ, ಮಳೆಗಾಲ ಶುರುವಾದಾಗಿನಿಂದ ಅದು ಸುರಿಯುವುದು ನಿಂತಿಲ್ಲ. ಅಸಲಿಗೆ ವಾಯಭಾರ ಕುಸಿತವಾಗಿರದಿದ್ದರೂ ರಾಜ್ಯದಲ್ಲಿ ಮಳೆಯಾಗಿತ್ತಿತ್ತು.
ಪಕ್ಕದ ಆಂಧ್ರ ಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಸ್ಚಲ್ಪ ಉತ್ತಮವೆಂದೇ ಹೇಳಬೇಕು. ನಮ್ಮಲ್ಲಿ ಸಾವು ನೋವು ಸಂಭವಿಸಿಲ್ಲ. ಆದರೆ ಆಂಧ್ರಪ್ರದೇಶ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿ ಪ್ರಕಾರ ಇದುವರೆಗೆ ಅಲ್ಲಿ 20 ಜನ ಮರಣಿಸಿದ್ದಾರೆ ಮತ್ತು ಸುಮಾರು 30ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಬಲೂನ್ ಸ್ಲೈಡ್‌ನಲ್ಲಿ ರಮೇಶ್ ಕತ್ತಿ ಎಂಜಾಯ್‌ಮೆಂಟ್ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ