AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನುಗ್ಗೆಕಾಯಿ, ನುಗ್ಗೆಸೊಪ್ಪು ತಿನ್ನೋದ್ರಿಂದ ಏನೆಲ್ಲಾ ಉಪಯೋಗ? ಆಹಾರ ತಜ್ಞೆ ಹೇಳಿದ್ದೇನು?

ನುಗ್ಗೆಕಾಯಿ, ನುಗ್ಗೆಸೊಪ್ಪು ತಿನ್ನೋದ್ರಿಂದ ಏನೆಲ್ಲಾ ಉಪಯೋಗ? ಆಹಾರ ತಜ್ಞೆ ಹೇಳಿದ್ದೇನು?

ಭಾವನಾ ಹೆಗಡೆ
|

Updated on: Dec 03, 2025 | 2:44 PM

Share

ಚಳಿಗಾಲದ ಆರಂಭದೊಂದಿಗೆ ತರಕಾರಿಗಳ ಬೆಲೆ ಏರಿಕೆ ಜನಸಾಮಾನ್ಯರಿಗೆ ಮತ್ತಷ್ಟು ಕಿರಿಕಿರಿ ಉಂಟುಮಾಡಿದೆ. ನುಗ್ಗೆಕಾಯಿ ಕೆಜಿಗೆ 300 ರಿಂದ 500 ರೂಪಾಯಿ ತಲುಪಿದ್ದು, ಜನರು ಅದರ ಸೇವನೆಯನ್ನೇ ನಿಲ್ಲಿಸುವ ಪರಿಸ್ಥಿತಿಗೆ ತಲುಪಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಹಾರ ತಜ್ಞೆ ಪಾವನ, ಬೆಲೆ ಏರಿಕೆ ಕಾರಣಕ್ಕೆ ತರಕಾರಿಗಳನ್ನು ದೂರವಿಡುವುದು ನಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು ಎಂದಿದ್ದಾರೆ.

ಬೆಂಗಳೂರು, ಡಿಸೆಂಬರ್ 03: ಚಳಿಗಾಲದ ಆರಂಭದೊಂದಿಗೆ ತರಕಾರಿಗಳ ಬೆಲೆ ಏರಿಕೆ ಜನಸಾಮಾನ್ಯರಿಗೆ ಮತ್ತಷ್ಟು ಕಿರಿಕಿರಿ ಉಂಟುಮಾಡಿದೆ. ನುಗ್ಗೆಕಾಯಿ ಕೆಜಿಗೆ 300 ರಿಂದ 500 ರೂಪಾಯಿ ತಲುಪಿದ್ದು, ಜನರು ಅದರ ಸೇವನೆಯನ್ನೇ ನಿಲ್ಲಿಸುವ ಪರಿಸ್ಥಿತಿಗೆ ತಲುಪಿದ್ದಾರೆ. ಈ ಬಗ್ಗೆ ಮಾತನಾಡಿರುವ ಬೆಂಗಳೂರಿನ ಆಹಾರ ತಜ್ಞೆ ಪಾವನ, ಬೆಲೆ ಏರಿಕೆ ಕಾರಣಕ್ಕೆ ತರಕಾರಿಗಳನ್ನು ದೂರವಿಡುವುದು ನಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು ಎಂದಿದ್ದಾರೆ.

ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು ಪ್ರಕೃತಿಯಿಂದ ದೊರೆಯುವ ಒಂದು ಉತ್ತಮ ಆಹಾರವಾಗಿದ್ದು, ವಿಟಮಿನ್ ಎ, ಇ, ಕೆ, ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ಫೈಬರ್‌ಗಳಿಂದ ಸಮೃದ್ಧವಾಗಿರುವ ಇದು ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಹೃದಯದ ಆರೋಗ್ಯ, ರಕ್ತಹೀನತೆ ನಿವಾರಣೆ, ರಕ್ತದೊತ್ತಡ ನಿಯಂತ್ರಣ ಮತ್ತು ಮೂಳೆಗಳ ಬಲವರ್ಧನೆಗೆ ಇದು ಸಹಕಾರಿ. ವಾರಕ್ಕೆ ಮೂರರಿಂದ ನಾಲ್ಕು ಬಾರಿ ಇದನ್ನು ಸೂಪ್, ಪಲ್ಯ ಅಥವಾ ಸಾಂಬಾರ್ ರೂಪದಲ್ಲಿ ಸೇವಿಸಬಹುದು. ಜಂಕ್ ಫುಡ್‌ಗಳಿಗೆ ಖರ್ಚು ಮಾಡುವ ಹಣವನ್ನು ಆರೋಗ್ಯಕರ ನುಗ್ಗೆಕಾಯಿಗೆ ಖರ್ಚು ಮಾಡುವುದು ಉತ್ತಮ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.