Loading video

ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ

|

Updated on: Sep 26, 2024 | 9:03 PM

ಕುಡಿದು ಮನೆಯವರಿಗೆ ಚಿತ್ರಹಿಂಸೆ ನೀಡುತ್ತಿದ್ದ ಮಗನಿಗೆ ಕುಡಿಯಬೇಡ ಎಂದು ಬುದ್ಧಿ ಹೇಳಲು ಬಂದ ತಂದೆಯ ತಲೆಗೆ ಆ ಮಗ ಇಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಬಳಿಕ ಅಪ್ಪನನ್ನು ಕೊಂದು ಅದು ಆತ್ಮಹತ್ಯೆ ಎಂದು ನಾಟಕವಾಡಿದ್ದಾನೆ.

ಗೋರಖ್​ಪುರ: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ತನ್ನ ಮಗ ಮದ್ಯಪಾನ ಮಾಡುವುದನ್ನು ತಡೆಯಲು ಹೋದ ತಂದೆಯ ತಲೆಗೆ ಮಗ ಇಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಕನ್ಹಯ್ಯಾ ತಿವಾರಿ ಎಂಬಾತ ತನ್ನ ತಂದೆ ಸತ್ಯ ಪ್ರಕಾಶ್ ತಿವಾರಿ ಮೇಲೆ 20ಕ್ಕೂ ಹೆಚ್ಚು ಬಾರಿ ಇಟ್ಟಿಗೆಯಿಂದ ಹಲ್ಲೆ ನಡೆಸಿ ನಂತರ ಅವರನ್ನು ಕೊಂದು, ಅದೊಂದು ಆತ್ಮಹತ್ಯೆ ಎಂದು ನಾಟಕವಾಡಿದ್ದಾನೆ. ಅಪ್ಪನ ಹೆಣವನ್ನು ಫ್ಯಾನ್​ಗೆ ನೇಣು ಹಾಕಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ