ಸೆಂಟ್ರಲ್ ಜೈಲಿನ ಬಳಿ ಬಂದ ಕುಡುಕನೊಬ್ಬ ದರ್ಶನ್ ರನ್ನು ನೋಡಲೇಬೇಕೆಂದು ಹಠ ಸಾಧಿಸಿದ!
ಇಲ್ಲಿ ಕಾವಲು ಕಾಯುತ್ತಿರುವ ಪೊಲೀಸರ ತಾಳ್ಮೆಯನ್ನು ಮೆಚ್ಚಲೇಬೇಕು ಮಾರಾಯ್ರೇ. ಕುಡುಕ ಪದೇಪದೆ ನಾನು ದರ್ಶನ್ ರನ್ನು ನೋಡಲೇ ಬೇಕು ಅಂತ ಬ್ಯಾರಿಕೇಡ್ ಬಳಿ ಬಂದಾಗಲೆಲ್ಲ ಅವರು ಸಿಟ್ಟಿಗೇಳದೆ ಸರಿ ಆಮೇಲೆ ಬಾ ಒಳಗೆ ಕಳಿಸ್ತೀವಿ ಅನ್ನುತ್ತಾರೆ.
ಆನೇಕಲ್ (ಬೆಂಗಳೂರು): ಈ ಪುಣ್ಯಾತ್ಮನೂ ಕೊಲೆ ಅರೋಪದಲ್ಲಿರುವ ಚಿತ್ರನಟ ದರ್ಶನ್ ಅಭಿಮಾನಿ. ತನ್ನ ಆರಾಧ್ಯದೈವ ಜೈಲಲ್ಲಿರುವ ಸಂಗತಿ ಸೊಂಟಕ್ಕೆ ಟವೆಲೊಂದನ್ನು ಸುತ್ತಿಕೊಂಡು ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿನವರೆಗೆ ಬಂದಿರುವ ಕುಡುಕಪ್ಪನಿಗ ಇವತ್ತು ಗೊತ್ತಾಗಿದೆ! ಚೆಕ್ ಪೋಸ್ಟ್ ನಲ್ಲಿರುವ ಪೊಲೀಸ್ ಸಿಬ್ಬಂದಿ ಕುಡುಕ ಅಭಿಮಾನಿಯನ್ನು ಸಾಗಹಾಕುವ ಪ್ರಯತ್ನ ಮಾಡುತ್ತಾರಾದರೂ ಅವನು ಪುನಃ ಅವರಲ್ಲಿಗೆ ಬಂದು ನಾನು ಡಿ ಬಾಸ್ ಅಭಿಮಾನಿ ಅವರನ್ನು ನೋಡಲೇಬೇಕು ಅನ್ನುತ್ತಾನೆ. ಇಲ್ಲಿ ಕಾವಲು ಕಾಯುತ್ತಿರುವ ಪೊಲೀಸರ ತಾಳ್ಮೆಯನ್ನು ಮೆಚ್ಚಲೇಬೇಕು ಮಾರಾಯ್ರೇ. ಕುಡುಕ ಪದೇಪದೆ ನಾನು ದರ್ಶನ್ ರನ್ನು ನೋಡಲೇ ಬೇಕು ಅಂತ ಬ್ಯಾರಿಕೇಡ್ ಬಳಿ ಬಂದಾಗಲೆಲ್ಲ ಅವರು ಸಿಟ್ಟಿಗೇಳದೆ ಸರಿ ಆಮೇಲೆ ಬಾ ಒಳಗೆ ಕಳಿಸ್ತೀವಿ ಅನ್ನುತ್ತಾರೆ. ಈ ಸರ್ಕಸ್ಸು ಸುಮಾರು ಹೊತ್ತಿನವರೆಗೆ ನಡೆಯುತ್ತದೆ. ಕುಡುಕನ ಹಠ ಮಾತ್ರ ಮುಗಿಯಲ್ಲ-ನಾನು ಮತ್ತು ದರ್ಶನ್ ಪ್ರಾಣ ಸ್ನೇಹಿತರು, ಅವರನ್ನು ನೋಡಲೇಬೇಕು ಅನ್ನುತ್ತಾ ರೋಡ್ ಮೇಲೆ ಕೂರುತ್ತಾನೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ