ಹೊಸವರ್ಷದ ಮುನ್ನಾದಿನ ಬೇಲೂರಲ್ಲೊಂದು ಸಂಘದ ಉದ್ಘಾಟನೆ, ಕುಡುಕರ ಸಂಘ!
ಕುಡುಕರ ಸಂಘದ ಕಚೇರಿ ಉದ್ಘಾಟನೆಗೆ 8-10 ಜನ ಸೇರಿದ್ದರು. ಯಾರು ತಾನೆ ತಾನು ಕುಡುಕ ಅಂತ ಸಾರ್ವಜನಿಕವಾಗಿ ತೋರಿಸಿಕೊಂಡಾರು? ಭಾಷಣ ಮಾಡಿದವರಲ್ಲಿ ಒಬ್ಬರು ಒಂದೆರಡು ಪೆಗ್ ಏರಿಸಿಯೇ ಬಂದಿದ್ದರು ಅಂತ ಕಾಣುತ್ತೆ. ಮದ್ಯಪಾನ ಪ್ರಿಯರಿಗೆ ಪಾನಿಪ್ರಿಯರು ಅಂತ ಹೇಳುವ ಅವರು ಸರ್ಕಾರಗಳು ನಡೆಯೋದೇ ಕುಡುಕರಿಂದ ಅನ್ನುತ್ತಾರೆ.
ಹಾಸನ: ನಮ್ಮ ರಾಜ್ಯದಲ್ಲಿ ನೂರಾರು ಸಂಘಸಂಸ್ಥೆಗಳಿವೆ, ಆದರೆ ಕುಡುಕರಿಗಾಗಿ ಪ್ರತ್ಯೇಕವಾದ ಸಂಘವಿದೆಯೇ? ಜನ ಕುಡುಕರ ಸಂಘ ಅಂತ ತಮಾಷೆ ಮಾಡೋದು ನಿಜ, ಸಂಘ ಸ್ಥಾಪಿಸುವ ಹುಚ್ಚು ಸಾಹಸಕ್ಕೆ ಪ್ರಾಯಶಃ ಯಾರೂ ಕೈಹಾಕಿರಲಿಲ್ಲ. ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ತೋಟೇಶ್ ಹೆಸರಿನ ವ್ಯಕ್ತಿಯೊಬ್ಬರು ಕುಡುಕರ ಸಂಘವನ್ನು ಸ್ಥಾಪಿಸಿದ್ದಾರೆ ಮತ್ತು ಹೊಸವರ್ಷದ ಮುನ್ನಾದಿನವಾದ ಇಂದು ಸಂಘದ ಕಚೇರಿಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು. ಸಂಘದ ಸದಸ್ಯನಾಗಲು ಬೇಕಿರುವ ಏಕಮಾತ್ರ ಅರ್ಹತೆಯೆಂದರೆ, ಆಸಕ್ತನು ಮದ್ಯಾಸಕ್ತನಾಗಿರಬೇಕು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೈಸೂರಿನಲ್ಲಿ ನ್ಯೂ ಇಯರ್ಗೆ ಗೈಡ್ ಲೈನ್ಸ್ ಜಾರಿ: ಮಹಿಳೆ, ಮಕ್ಕಳ ಸುರಕ್ಷತೆಗೆ ಆದ್ಯತೆ, ಬೆಟ್ಟಕ್ಕೆ ಪ್ರವೇಶ ನಿರ್ಬಂಧ