‘ಊಟ ಇಲ್ಲದೇ ಕ್ಯಾರೆಟ್​ ತಿಂದ್ವಿ’: 24 ವರ್ಷಗಳ ಸ್ನೇಹ ಹಂಚಿಕೊಂಡ ವಿಜಿ-ಗಣಿ

‘ಊಟ ಇಲ್ಲದೇ ಕ್ಯಾರೆಟ್​ ತಿಂದ್ವಿ’: 24 ವರ್ಷಗಳ ಸ್ನೇಹ ಹಂಚಿಕೊಂಡ ವಿಜಿ-ಗಣಿ

ಮದನ್​ ಕುಮಾರ್​
|

Updated on: Aug 05, 2024 | 8:48 PM

‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ನಟಿಸಿರುವ ಗಣೇಶ್​ ಹಾಗೂ ‘ಭೀಮ’ ಸಿನಿಮಾವನ್ನು ನಿರ್ದೇಶಿಸಿ ನಟಿಸಿರುವ ದುನಿಯಾ ವಿಜಯ್​ ಅವರು ನೆನಪಿನ ಪುಟ ತೆರೆದಿದ್ದಾರೆ. ಕಳೆದ 24 ವರ್ಷಗಳ ಸ್ನೇಹದಲ್ಲಿ ಪರಸ್ಪರ ಜಗಳ ಮಾಡಿಕೊಂಡಿಲ್ಲ ಎಂದು ಗಣೇಶ್​-ವಿಜಿ ಹೇಳಿದ್ದಾರೆ. ಆರಂಭದಲ್ಲಿ ಬಹಳ ಕಷ್ಟದ ದಿನಗಳನ್ನು ಕಂಡಿದ್ದ ಅವರು ಅದನ್ನೆಲ್ಲ ನೆನಪು ಮಾಡಿಕೊಂಡಿದ್ದಾರೆ.

ನಟ ಗಣೇಶ್​ ಮತ್ತು ದುನಿಯಾ ವಿಜಯ್​ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇಬ್ಬರೂ ಕೂಡ ಕಷ್ಟದ ದಿನಗಳನ್ನು ನೋಡಿಕೊಂಡು ಬಂದವರು. ‘ಮುಂಗಾರು ಮಳೆ’ ಚಿತ್ರದ ಮೂಲಕ ಗಣೇಶ್​, ‘ದುನಿಯಾ’ ಸಿನಿಮಾ ಮೂಲಕ ವಿಜಿ ಅವರು ಸ್ಟಾರ್​ಗಳಾದರು. ಈಗ ವಿಜಿ ನಟನೆಯ ‘ಭೀಮ’ ಬಿಡುಗಡೆ ಆಗುತ್ತಿದೆ. ಗಣೇಶ್​ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಸಹ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಕೂಡ ತಮ್ಮ ಹಳೇ ದಿನಗಳನ್ನು ಮೆಲುಕು ಹಾಕಿದ್ದಾರೆ. ಊಟ ಇಲ್ಲದೇ ಇರುವಾಗ ಕ್ಯಾರೆಟ್​ ಕದ್ದು ತಿಂದಿದ್ದನ್ನು ಗಣೇಶ್​ ಮತ್ತು ವಿಜಯ್​ ಕುಮಾರ್​ ಅವರು ನೆನಪಿಸಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.