AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯ ಎಂಟ್ರಿ ಯಾವಾಗ? ಉತ್ತರಿಸಿದ ‘ದುನಿಯಾ’ ವಿಜಯ್

ರಾಜಕೀಯ ಎಂಟ್ರಿ ಯಾವಾಗ? ಉತ್ತರಿಸಿದ ‘ದುನಿಯಾ’ ವಿಜಯ್

Mangala RR
| Edited By: |

Updated on: May 06, 2026 | 3:32 PM

Share

ತಮಿಳುನಾಡಿನಲ್ಲಿ ವಿಜಯ್ ಅವರು ಗೆದ್ದು ಬೀಗಿದ್ದಾರೆ. ಅವರ ಗೆಲುವಿನ ಬೆನ್ನಲ್ಲೇ ಹೀರೋಗಳು ಚುನಾವಣೆಗೆ ಕಾಲಿಡಬೇಕು ಎಂಬ ಮಾತುಗಳು ಕೇಳಿ ಬಂದವು. ಈ ಬಗ್ಗೆ ವಿಜಯ್ ಮಾತನಾಡಿದ್ದಾರೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಅವರು ಹೇಳಿದ್ದರು. ಅವರಿಗೆ ಸದ್ಯಕ್ಕೆ ಸಿನಿಮಾಗೆ ಬರೋ ಆಲೋಚನೆ ಇದೆ.

ದಳಪತಿ ವಿಜಯ್ ಅವರು ಟಿವಿಕೆ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಗೆಲುವಿನ ಬಗ್ಗೆ ಹಾಗೂ ರಾಜಕೀಯ ಎಂಟ್ರಿ ಬಗ್ಗೆ ವಿಜಯ್ ಮಾತನಾಡಿದ್ದಾರೆ. ‘ನನ್ನ ಹೆಸರೂ ವಿಜಯ್, ಅವರ ಹೆಸರೂ ವಿಜಯ್. ಈ ಕಾರಣಕ್ಕೆ ಖುಷಿ ಇದೆ. ತಮಿಳುನಾಡಿನಲ್ಲಿ ಆದ ಬದಲಾವಣೆ ಎಲ್ಲ ಕಡೆಗಳಲ್ಲೂ ಆಗಬೇಕು’ ಎಂದರು. ರಾಜಕೀಯ ಎಂಟ್ರಿ ಯಾವಾಗ ಎಂದು ವಿಜಯ್ ಕೇಳಿದ ಪ್ರಶ್ನೆಗೆ ವಿಜಯ್ ಉತ್ತರಿಸಿದರು. ‘ಜೆಂಜಿಗಳು ಇದಕ್ಕೆ ಕಾರಣ. ಅವರು ಮನಸ್ಸು ಮಾಡಿದರೆ ಬದಲಾವಣೆ ತರುತ್ತಾರೆ’ ಎಂದರು. ರಾಜಕೀಯಕ್ಕೆ ಬರೋದಕ್ಕೆ ಈಗಲೇ ಆಲೋಚಿಸಿಲ್ಲ ಎಂದಿರೋ ಅವರು, ಟೈಮ್ ಬರಲಿ ಹೇಳುತ್ತೇನೆ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us