ದಸರಾ ಮಹೋತ್ಸವ 2024; ಈ ಸಲ ಯುವ ದಸರಾ ಮತ್ತು ದೀಪಾಲಂಕಾರ ಅವಧಿ ವಿಸ್ತರಿಸಲಾಗಿದೆ: ಹೆಚ್​ಸಿ ಮಹದೇವಪ್ಪ

|

Updated on: Aug 16, 2024 | 5:22 PM

ಆನೆಗಳನ್ನು 50 ಕಿಮೀ ಗಳಿಗಿಂತ ಹೆಚ್ಚು ದೂರ ನಡೆಸಬಾರದು ಎಂದು ಸರ್ವೋಚ್ಛ ಮತ್ತು ರಾಜ್ಯ ಉಚ್ಛ ನ್ಯಾಯಾಲಯಗಳು ಸೂಚಿಸಿರುವುದರಿಂದ ಎಂದಿನಂತೆ ಅವುಗಳನ್ನು ಹೂವಿನ ಹೊಸಳ್ಳಿಯಿಂದ ಟ್ರಕ್ ಗಳಲ್ಲೇ ಕರೆತರಲಾಗುವುದು ಎಂದು ಸಚಿವ ಮಹದೇವಪ್ಪ ಹೇಳಿದರು.

ಮೈಸೂರು: ಮೊನ್ನೆ ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದಂತೆ ಈ ಬಾರಿಯ ದಸರಾ ಮಹೋತ್ಸವ ಮತ್ತಷ್ಟು ವೈಭವ ಮತ್ತು ವಿಜೃಂಭಣೆಯಿಂದ ನಡೆಯಲಿದೆ. ಇಂದು ನಗರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹಾದೇವಪ್ಪ ಅವರು ದಸರಾ ಮಹೋತ್ಸವ-2024 ಉದ್ಘಾಟನೆ ಅಕ್ಟೋಬರ್ 3ರಂದು ಬೆಳಗ್ಗೆ 9.15 ರಿಂದ ಬೆಳಗ್ಗೆ 9.45 ನಡುವೆ ನಡೆಯಲಿದೆ, ಧಾರ್ಮಿಕ ನಂಬಿಕೆಗೆ ಆನುಗುಣವಾಗಿ ಈ ಸಮಯವನ್ನು ನಿಗದಿಪಡಿಲಾಗಿದೆ ಎಂದು ಹೇಳಿದರು. ಗಜಪಡೆಯನ್ನು ಅರಮನೆ ಆವರಣಕ್ಕೆ ಕರೆತರುವ ಕಾರ್ಯ ಆಗಸ್ಟ್ 21ರಂದು ಶುರುವಾಗಿ ಆಗಸ್ಟ್ 23 ಕ್ಕೆ ಸಂಪನ್ನಗೊಳ್ಳಲಿದೆ ಎಂದು ಹೇಳಿದ ಸಚಿವ ಈ ಬಾರಿ ದಸರಾ ಉತ್ಸವ ಉಸ್ತವಾರಿಗೆ 19 ಉಪ-ಸಮಿತಿಗಳನ್ನು ರಚಿಸಲಾಗಿದೆ ಎಂದರು. ಯುವ ದಸರಾ ಸಾಮಾನ್ಯವಾಗಿ ಮೂರು ದಿನಗಳಿಗೆ ಸೀಮಿತವಾಗಿರುತ್ತದೆ ಆದರೆ ಅದನ್ನು ಈ ಸಲ 7 ದಿನಗಳಿಗೆ ವಿಸ್ತರಿಸಲಾಗಿದೆ. ಹಾಗೆಯೇ, ಅರಮನೆಯ ದೀಪಾಲಂಕಾರವನ್ನು 21ದಿನಗಳಿಗೆ ವಿಸ್ತರಿಸಲಾಗಿದ್ದು ಅಕ್ಟೋಬರ್ 3ರಿಂದ 24 ರವರೆಗೆ ಅದನ್ನು ಜನ ಕಣ್ತುಂಬಿಕೊಳ್ಳಬಹುದು ಎಂದು ಮಹದೇವಪ್ಪ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹಾಜರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದಸರಾ ಮಹೋತ್ಸವ-2024: ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರದ ಸಂಕಲ್ಪ

Follow us on