ದುರ್ಗಾಷ್ಟಮಿಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡಿ

Updated on: Sep 30, 2025 | 7:10 AM

ಸೆಪ್ಟೆಂಬರ್ 30 ರ ದಿನ ಭವಿಷ್ಯ: ಈ ದಿನದ ರಾಹುಕಾಲ 3 ಗಂಟೆ 10 ನಿಮಿಷದಿಂದ 4ಗಂಟೆ 40 ನಿಮಿಷದ ತನಕ ಇರಲಿದೆ. ಹಾಗೆಯೇ ಸರ್ವಸಿದ್ಧಿ ಕಾಲ ಸಂಕಲ್ಪ ಕಾಲ ಶುಭಕಾಲ 12ಗಂಟೆ9 ನಿಮಿಷದಿಂದ 1ಗಂಟೆ 39 ನಿಮಿಷದ ತನಕ ಇರಲಿದ್ದು, ಸುಬ್ರಹ್ಮಣ್ಯನ ಲಹರಿಗಳು ಇರುವ ಈ ದಿನದ ಭವಿಷ್ಯ ಇಲ್ಲಿದೆ.

ಇಂದು ಸೆಪ್ಟೆಂಬರ್ 30, ಮಂಗಳವಾರ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಆಶ್ವೀಜ ಮಾಸ, ಶರದೃತು, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಪೂರ್ವಾಷಾಢ ನಕ್ಷತ್ರ ಇದ್ದು, ರವಿ ಕನ್ಯಾರಾಶಿಯಲ್ಲಿ ಹಾಗೂ ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ ಮಾಡುವ ದಿನ. ಇಂದು ಅಷ್ಟಮಿ ತಿಥಿ (ದುರ್ಗಾಷ್ಟಮಿ) ಇದ್ದು, ಇದನ್ನು ಜೀವ ದಯಾಷ್ಟಮಿ ಎಂದೂ ಕರೆಯುತ್ತಾರೆ. ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Published on: Sep 30, 2025 07:06 AM
Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More