ಪಟೇಲ್ ಸಂಪುಟದಲ್ಲಿ ನಾನು ಉಪ ಮುಖ್ಯಮಂತ್ರಿಯಾಗಿದ್ದರೆ, ಕತ್ತಿ ಲೋಕೋಪಯೋಗಿ ಸಚಿವರಾಗಿದ್ದರು: ಸಿದ್ದರಾಮಯ್ಯ
ಹಿಂದೆ ಜೆ ಹೆಚ್ ಪಟೇಲ್ ಅವರ ಮಂತ್ರಿಮಂಡಲದಲ್ಲಿ ತಾನು ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವನಾಗಿದ್ದರೆ ಕತ್ತಿ ಲೋಕೋಪಯೋಗಿ ಸಚಿವರಾಗಿದ್ದರು ಎಂದು ಸಿದ್ದರಾಮಯ್ಯ ಆ ದಿನಗಳನ್ನು ನೆನಪಿಸಿಕೊಂಡರು.
ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಅಗಲಿದ ಬಿಜೆಪಿ ನಾಯಕ ಮತ್ತು ಸಚಿವರಾಗಿದ್ದ ಉಮೇಶ್ ಕತ್ತಿ ಅವರಿಗೆ ಅಂತಿಮ ನಮನ ಸಲ್ಲಿಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕತ್ತಿ ನೇರ ಸ್ವಭಾವದ ವ್ಯಕ್ತಿ, ಸ್ನೇಹಜೀವಿಯಾಗಿದ್ದರಲ್ಲದೆ ತಮಾಷೆಯಾಗಿ ಮಾತಾಡುತ್ತಿದ್ದರು ಎಂದು ಹೇಳಿದರು. ಹಿಂದೆ ಜೆ ಹೆಚ್ ಪಟೇಲ್ ಅವರ ಮಂತ್ರಿಮಂಡಲದಲ್ಲಿ ತಾನು ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವನಾಗಿದ್ದರೆ ಕತ್ತಿ ಲೋಕೋಪಯೋಗಿ ಸಚಿವರಾಗಿದ್ದರು ಎಂದು ಸಿದ್ದರಾಮಯ್ಯ ಆ ದಿನಗಳನ್ನು ನೆನಪಿಸಿಕೊಂಡರು.