‘ದ್ವಾಪರ..’ ಸಿನಿಮಾ ಹಾಡಿದ ಜಸ್ಕರಣ್ ಸಿಂಗ್ ಒರಿಜಿನಲ್ ಧ್ವನಿ ಹೇಗಿದೆ ನೋಡಿ
ಇದು ರೀಲ್ಸ್ ಯುಗ. ಯಾವುದೇ ಸಾಂಗ್ ಹಿಟ್ ಆದರೂ ಅದನ್ನು ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಈಗ ‘ದ್ವಾಪರ..’ ಹಾಡಿನಲ್ಲಿ ಬರುವ ಕೆಲವು ಸಾಲುಗಳು ರೀಲ್ಸ್ನಲ್ಲಿ ಬಳಕೆ ಮಾಡಲಾಗಿದೆ. ಹೀಗಾಗಿ, ಈ ಹಾಡಿನಿಂದ ಸಿನಿಮಾಗೆ ಭರ್ಜರಿ ಮೈಲೇಜ್ ಸಿಕ್ಕಿದೆ.
ಬೆಂಗಳೂರಿನ ಜಿಟಿ ಮಾಲ್ನಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಡೆದಿದೆ. ಆಗಸ್ಟ್ 15ರಂದು ಈ ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ನಟ ಗಣೇಶ್ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ‘ದ್ವಾಪರ..’ ಹಾಡು ಸೂಪರ್ ಹಿಟ್ ಆಗಿದೆ. ಈ ಹಾಡನ್ನು ಹಾಡಿದ್ದು ಜಸ್ಕರಣ್ ಸಿಂಗ್. ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅವರು ಈ ಹಾಡಿನ ಬಗ್ಗೆ ಮಾತನಾಡಿದ್ದಾರೆ. ‘ನನಗೆ ಖುಷಿ ಇದೆ. ನನಗೆ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ. ನನಗೆ ಖುಷಿ ಇದೆ. ಇದು ದೊಡ್ಡ ಹಿಟ್ ಆಗಿದೆ’ ಎಂದಿದ್ದಾರೆ ಅವರು. ‘ದ್ವಾಪರ..’ ಹಾಡು ಯೂಟ್ಯೂಬ್ನಲ್ಲಿ ಕೋಟಿ ಬಾರಿ ವೀಕ್ಷಣೆ ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos