AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBMP Polls: ಬೆಂಗಳೂರು ಅಭಿವೃದ್ಧಿ ಮತ್ತು ಬಿಬಿಎಮ್​ಪಿ ಚುನಾವಣೆ ಕುರಿತು ಸಂಸದರು ಮತ್ತು ಶಾಸಕರೊಂದಿಗೆ ಡಿಕೆ ಶಿವಕುಮಾರ್ ಚರ್ಚೆ

BBMP Polls: ಬೆಂಗಳೂರು ಅಭಿವೃದ್ಧಿ ಮತ್ತು ಬಿಬಿಎಮ್​ಪಿ ಚುನಾವಣೆ ಕುರಿತು ಸಂಸದರು ಮತ್ತು ಶಾಸಕರೊಂದಿಗೆ ಡಿಕೆ ಶಿವಕುಮಾರ್ ಚರ್ಚೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 05, 2023 | 2:27 PM

Share

ಸಭೆ ಆರಂಭಕ್ಕೆ ಮೊದಲು ಶಿವಕಮಾರ್ ತಡವಾಗಿ ಸ್ಥಳಕ್ಕೆ ಆಗಮಿಸಿದ್ದರಿಂದ ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಸಭಾಂಗಣದಿಂದ ಹೊರನಡೆದರು

ಬೆಂಗಳೂರು: ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ (BBMP Polls) ಕುರಿತು ಚರ್ಚಿಸಲು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ (DK Shivakumar) ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ (conference auditorium) ಇಂದು ಮಧ್ಯಾಹ್ನ ಸಭೆಯೊಂದನ್ನು ನಡೆಸಿದರು. ಸಭೆಯಲ್ಲಿ ಬೆಂಗಳೂರು ನಗರದ ಲೋಕ ಸಭಾ ಸದಸ್ಯರಲ್ಲದೆ ಶಾಸಕರು ಸಹ ಭಾಗವಹಿಸಿದ್ದರು. ಸಭೆ ಆರಂಭಕ್ಕೆ ಮೊದಲು ಶಿವಕಮಾರ್ ತಡವಾಗಿ ಸ್ಥಳಕ್ಕೆ ಆಗಮಿಸಿದ್ದರಿಂದ ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಸಭಾಂಗಣದಿಂದ ಹೊರನಡೆದರು. ನಂತರ ಅವರಲ್ಲಿ ಕೆಲವರನ್ನು ಮನವೊಲಿಸಿ ವಾಪಸ್ಸು ಕರೆತರಲಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ