ತೇಜಸ್ವಿ ಸೂರ್ಯ ಬುದ್ಧಿವಂತ, ದೊಡ್ಡ ನಾಯಕ: ಡಿಸಿಎಂ ಡಿಕೆಶಿ ವ್ಯಂಗ್ಯ
BJP ಸಂಸದ ತೇಜಸ್ವಿ ಸೂರ್ಯ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ತೇಜಸ್ವಿ ಸೂರ್ಯ ಅತಿ ಬುದ್ಧಿವಂತ, ದೊಡ್ಡ ನಾಯಕ ಎಂದು ಡಿಕೆಶಿ ಹೇಳಿದ್ದಾರೆ. ತೇಜಸ್ವಿ ಸೂರ್ಯ ವಿಮಾನದ ಎಮರ್ಜೆನ್ಸಿ ಡೋರ್ ಓಪನ್ ಮಾಡಿದ್ದ. ಅಮೆರಿಕದಲ್ಲಿ ಟ್ರಂಪ್ ಭೇಟಿ ಮಾಡುವುದಕ್ಕೆ ಹೋಗಿ ಉಗಿಸಿಕೊಂಡಿದ್ದ ಎಂದಿದ್ದಾರೆ.
ಬೆಂಗಳೂರು, ನವೆಂಬರ್ 02: ಶಾಸಕ ರಾಮಮೂರ್ತಿ, ಸಂಸದ ತೇಜಸ್ವಿ ಸೂರ್ಯಗೆ ಧಮ್ಕಿ ಹಾಕಲಾಗಿದೆ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಆರೋಪ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕ ರಾಮಮೂರ್ತಿಗೆ ಏಕೆ ಧಮ್ಕಿ ಹಾಕಲಿ, ಅವನು ನಮ್ಮ ಹುಡುಗ. ತೇಜಸ್ವಿ ಸೂರ್ಯ ಅತಿ ಬುದ್ಧಿವಂತ, ದೊಡ್ಡ ನಾಯಕ ಎಂದು ಡಿಕೆಶಿ ಹೇಳಿದ್ದಾರೆ. ತೇಜಸ್ವಿ ಸೂರ್ಯ ವಿಮಾನದ ಎಮರ್ಜೆನ್ಸಿ ಡೋರ್ ಓಪನ್ ಮಾಡಿದ್ದ. ಅಮೆರಿಕದಲ್ಲಿ ಟ್ರಂಪ್ ಭೇಟಿ ಮಾಡುವುದಕ್ಕೆ ಹೋಗಿ ಉಗಿಸಿಕೊಂಡಿದ್ದ. ಸಂಸದ ತೇಜಸ್ವಿ ಸೂರ್ಯ ಕಾರು ಬೇಡ ಅಂತ ಹೇಳುತ್ತಾರೆ. ಆದರೆ ಮದುವೆಗೆ ಕಾರ್ಡ್ ಕೊಡೋಕೆ ಬಂದು ಕಾರು ಬುಕ್ ಮಾಡಿದ್ದಾನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

