ಚನ್ನಪಟ್ಟಣದ ಡಿವೈಎಸ್ಪಿ ಸಮವಸ್ತ್ರ ಧರಿಸಿ ಹಾಡು ಹೇಳುತ್ತಾ ಕುಣಿದಿದ್ದು ಸುದ್ದಿಯಾಗುತ್ತಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 17, 2022 | 11:21 PM

ಅವರು ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದ ತಿಮ್ಮಪ್ಪ ಸ್ವಾಮಿ ಬೆಟ್ಟದಲ್ಲಿ ಹಾಡು ಹೇಳುತ್ತಾ ಕುಣಿಯುತ್ತಿದ್ದಾರೆ. ಅವರು ಸಮವಸ್ತ್ರ ಧರಿಸದೆ ಒಬ್ಬ ಸಾಮಾನ್ಯ ವ್ಯಕ್ತಿಯ ಹಾಗೆ ಬೆಟ್ಟದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ ಅವರ ಇದೇ ಕ್ರಿಯೆ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗುತಿತ್ತು.

ಸಮವಸ್ತ್ರ (uniform) ಯಾವುದೇ ಆಗಿರಲಿ ಅದಕ್ಕೊಂದು ಘನತೆ, ಗೌರವ ಇರುತ್ತದೆ. ಅದರಲ್ಲೂ ಖಾಕಿ ಸಮವಸ್ತ್ರ ವಿಷಯಕ್ಕೆ ಬಂದರೆ, ಅದಕ್ಕೆ ಘನತೆ ಗೌರವಗಳ ಜೊತೆ ಖಡಕ್ ತನ ಕೂಡ ಬಂದುಬಿಡುತ್ತದೆ. ಅದರರ್ಥ ಪೊಲೀಸ್ ಅಧಿಕಾರಿಗಳು (police officials) ಅಥವಾ ಈ ಇಲಾಖೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಧಾರ್ಮಿಕ (religious), ಸಾಂಸ್ಕೃತಿಕ (cultural) ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಅಂತೇನಲ್ಲ. ಅವರು ನಮ್ಮೆಲ್ಲರಂತೆ ಭಾಗಿಯಾಗಬಹುದು. ಈ ವಿಡಿಯೋನಲ್ಲಿ ಕೋ ಕೋ ಕೋ ಕೋಳಿಕೆ ರಂಗಾ ಅಂತ ಹಾಡು ಹೇಳುತ್ತಾ ಕುಣಿಯುತ್ತಿರುವವರು ರಾಮನಗರ ಜಿಲ್ಲೆ ಚನ್ನಪಟ್ಟಣ ಉಪವಿಭಾಗದ ಡಿವೈಎಸ್ಪಿ ಕೆ ರಮೇಶ್. ಒಂದಷ್ಟು ಪ್ರೇಕ್ಷಕರ ಮುಂದೆ ಅವರು ತಮ್ಮಲ್ಲಿ ಹುದುಗಿರುವ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ಹಿಂದೆ ಚನ್ನಪಟ್ಟಣದಲ್ಲಿ ಅವರು ಸಮವಸ್ತ್ರ ಧರಿಸಿಯೇ ಭಜನಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು ಟೀಕೆಗೆ ಗುರಿಯಾಗಿತ್ತು.

ಈ ಬಾರಿ ಅವರು ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದ ತಿಮ್ಮಪ್ಪ ಸ್ವಾಮಿ ಬೆಟ್ಟದಲ್ಲಿ ಹಾಡು ಹೇಳುತ್ತಾ ಕುಣಿಯುತ್ತಿದ್ದಾರೆ. ಅವರು ಸಮವಸ್ತ್ರ ಧರಿಸದೆ ಒಬ್ಬ ಸಾಮಾನ್ಯ ವ್ಯಕ್ತಿಯ ಹಾಗೆ ಬೆಟ್ಟದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ ಅವರ ಇದೇ ಕ್ರಿಯೆ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗುತಿತ್ತು.

ಹೀಗೆ ಒಬ್ಬ ಪೊಲೀಸ್ ಅಧಿಕಾರಿ ಸಮವಸ್ತ್ರ ಧರಿಸಿ ಧಾರ್ಮಿಕ ಇಲ್ಲವೇ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗಿಯಾಗಿ ಕುಣಿಯುವುದು ಮೊದಲ ನಿದರ್ಶನವೇನೂ ಅಲ್ಲ ಮತ್ತು ಕೊನೆಯದೂ ಅಲ್ಲ. ಇಲಾಖೆ ರಮೇಶ್ ಅವರಿಗೆ ಪ್ರಶ್ನೆ ಕೇಳಬಹುದು, ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಜನ ಮನಸ್ಸಿಗೆ ಖುಷಿ ನೀಡದ ಕಾಮೆಂಟ್ ಗಳನ್ನು ಮಾಡಬಹುದು. ಹಾಗಾಗಿ ಅವರು ಸ್ವಲ್ಪ ಎಚ್ಚರದಿಂದ ಇರಬೇಕು.

ಇದನ್ನೂ ಓದಿ:   Shocking Video: ಅಂಬೆಗಾಲಿಡುತ್ತಿದ್ದ 7 ತಿಂಗಳ ಮಗು ಮೇಲೆ ಹಾರಲು ಯತ್ನಿಸಿದ ಚಿರತೆ; ಮೈ ಜುಮ್ಮೆನಿಸುವ ವಿಡಿಯೋ ವೈರಲ್