ಕೊರೋನಾವೈರಸ್​ನಂತೆ ಎಬೋಲಾ ವೈರಸ್ ಸಹ ರೂಪಾಂತರ ತಳೆದಿದೆ, ಪಶ್ಚಿಮ ಆಫ್ರಿಕಾನಲ್ಲಿ ರೂಪಾಂತರಿ ಎಬೋಲಾಗೆ ಒಬ್ಬ ಬಲಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 11, 2021 | 6:41 PM

ಹಿಂದೆ, ಎಬೋಲಾ ಹೆಸರಿನ ಮಾರಣಾಂತಿಕ ವೈರಸ್ ಮನುಕುಲವನ್ನು ಪೀಡಿಸಿದ್ದು ನಿಮಗೆ ನೆನಪಿದೆಯಲ್ವಾ? ಅದರಿಂದ ಮುಕ್ತಿ ಹೊಂದಿದ ನಂತರ ಬೇರೆ ವೈರಸ್ಗಳು ಒಂದಷ್ಟು ಸದ್ದು ಮಾಡಿದವರಾದರೂ ಕೊರೊನಾವೈರಸ್ನಷ್ಟು ಹಾಹಾಕಾರ, ಪ್ರಾಣಹಾನಿಯನ್ನು ಬೇರೆ ಯಾವುದೇ ವೈರಸ್ ಸೃಷ್ಟಿಸಲಿಲ್ಲ. ಕೊರೊನಾ ಪೀಡೆಗೆ ವ್ಯಾಕ್ಸಿನ್ ಕಂಡುಹಿಡಿದ ನಂತರ ಅದು ರೂಪಾಂತರಗೊಳ್ಳುತ್ತಿರುವುದು ಗೊತ್ತಿರುವ ವಿಷಯವೇ. ಆದರೆ, ಬಹಳ ದಿನಗಳ ಹಿಂದೆಯೇ ನಶಿಸಿ ಹೋಗಿರಬಹುದೆಂದುಕೊಂಡಿದ್ದ ಎಬೋಲಾ ವೈರಸ್ ರೂಪಾಂತರದೊಂದಿಗೆ (ಮಾರ್ಬರ್ಗ್) ದಕ್ಷಿಣ ಆಫ್ರಿಕಾ ಭಾಗದಲ್ಲಿ ಪ್ರತ್ಯಕ್ಷವಾಗಿದೆ. ಆಗಸ್ಟ್ 2ರಂದು ವ್ಯಕ್ತಿಯೊಬ್ಬ ಮಾರ್ಬರ್ಗ್ ಸೋಕಿನಿಂದ ಸತ್ತಿರುವುದನ್ನು ಮಂಗಳವಾರ […]

ಹಿಂದೆ, ಎಬೋಲಾ ಹೆಸರಿನ ಮಾರಣಾಂತಿಕ ವೈರಸ್ ಮನುಕುಲವನ್ನು ಪೀಡಿಸಿದ್ದು ನಿಮಗೆ ನೆನಪಿದೆಯಲ್ವಾ? ಅದರಿಂದ ಮುಕ್ತಿ ಹೊಂದಿದ ನಂತರ ಬೇರೆ ವೈರಸ್ಗಳು ಒಂದಷ್ಟು ಸದ್ದು ಮಾಡಿದವರಾದರೂ ಕೊರೊನಾವೈರಸ್ನಷ್ಟು ಹಾಹಾಕಾರ, ಪ್ರಾಣಹಾನಿಯನ್ನು ಬೇರೆ ಯಾವುದೇ ವೈರಸ್ ಸೃಷ್ಟಿಸಲಿಲ್ಲ. ಕೊರೊನಾ ಪೀಡೆಗೆ ವ್ಯಾಕ್ಸಿನ್ ಕಂಡುಹಿಡಿದ ನಂತರ ಅದು ರೂಪಾಂತರಗೊಳ್ಳುತ್ತಿರುವುದು ಗೊತ್ತಿರುವ ವಿಷಯವೇ. ಆದರೆ, ಬಹಳ ದಿನಗಳ ಹಿಂದೆಯೇ ನಶಿಸಿ ಹೋಗಿರಬಹುದೆಂದುಕೊಂಡಿದ್ದ ಎಬೋಲಾ ವೈರಸ್ ರೂಪಾಂತರದೊಂದಿಗೆ (ಮಾರ್ಬರ್ಗ್) ದಕ್ಷಿಣ ಆಫ್ರಿಕಾ ಭಾಗದಲ್ಲಿ ಪ್ರತ್ಯಕ್ಷವಾಗಿದೆ. ಆಗಸ್ಟ್ 2ರಂದು ವ್ಯಕ್ತಿಯೊಬ್ಬ ಮಾರ್ಬರ್ಗ್ ಸೋಕಿನಿಂದ ಸತ್ತಿರುವುದನ್ನು ಮಂಗಳವಾರ ಜಿನಿ ದೇಶದ ಸರ್ಕಾರ ಖಚಿತಪಡಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆ ವ್ಯಕ್ತಿಯ ದೇಹದಿಂದ ಸಂಗ್ರಹಿಸಲಾಗಿರುವ ಸ್ಯಾಂಪಲ್ನಲ್ಲಿ ಈ ಅಪಾಯಕಾರಿ ವೈರಸ್ ಪತ್ತೆಯಾಗಿದೆ.

ಮಾರ್ಬರ್ಗ್ ವೈರಸ್ ತೀವ್ರ ಸ್ವರೂಪದ ಸೋಂಕುಕಾರಿಯಾಗಿದ್ದು ಮರಣ ಪ್ರಮಾಣ ಶೇಕಡಾ 88ರಷ್ಟಿದೆ. ಕೋವಿಡ್ ವೈರಸ್ ಹಾಗೆ ಮಾರ್ಬರ್ಗ್ ಸೋಂಕು ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂದು ಹೇಳಲಾಗಿದೆ. ಸೋಂಕಿತನೊಂದಿಗೆ ನೇರ ಸಂಪರ್ಕ ಹೊಂದಿರುವ ವ್ಯಕ್ತಿಯ ದೇಹವನ್ನೂ ಈ ವೈರಸ್ ಹೊಕ್ಕುಬಿಡುತ್ತದೆ.

ಸೋಂಕಿತ ವ್ಯಕ್ತಿಯ ಸೀನು, ಕೆಮ್ಮು ಮತ್ತು ಅವನ ರಕ್ತ ಯಾವುದಾದರೂ ವಸ್ತುವಿನ ಮೇಲೆ ಬಿದ್ದು ಅದನ್ನು ಬೇರೆಯವರು ಮುಟ್ಟಿದರೆ ಸೋಂಕು ತಾಕಿಬಿಡುತ್ತದೆ ಎಂದು ಅಮೇರಿಕಾದ ರೋಗ ನಿಯಂತ್ರಣ ಮತ್ತು ನಿರೋಧ ಕೇಂದ್ರ (ಸಿಡಿಸಿ) ಹೇಳಿದೆ.

ಇದನ್ನೂ ಓದಿ: Viral Video: ನವಿಲಿಗೆ ಕೈಯಾರೆ ಕಾಳು ತಿನ್ನಿಸಿದ ತರಕಾರಿ ಮಾರುವ ಮಹಿಳೆ; ವೈರಲ್ ವಿಡಿಯೋಗೆ ಭಾರೀ ಮೆಚ್ಚುಗೆ