ಸಾವಿನೊಂದಿಗೆ ಹೋರಾಡಿದ ಆಕೆ ಬಾವಿಯಿಂದ ಸಜೀವಳಾಗಿ ಮೇಲೆ ಬಂದಿದ್ದು ಪವಾಡಕ್ಕಿಂತ ಕಮ್ಮಿಯಲ್ಲ!
ಜಾಲದಿಂದ ಹೊರಬಂದ ನಂತರ ಆ ಮಹಿಳೆಗೆ ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ. ಆಕೆ ಎಷ್ಟು ಅಧೀರಳಾಗಿದ್ದರು, ಅಘಾತಕ್ಕೊಳಗಾಗಿದ್ದರು ಅನ್ನೋದು ಗೊತ್ತಾಗುತ್ತದೆ.
ನಿಮಗಿಲ್ಲಿ ಕಾಣುತ್ತಿರುವ 50-ಅಡಿ ಆಳದ ಬಾವಿಯಲ್ಲಿ ಪ್ರಾಯಶ: ನೀರೆತ್ತಲು ಹೋಗಿದ್ದ ಮಹಿಳೆಯೊಬ್ಬರು ಅಕಸ್ಮಿಕವಾಗಿ ಅದರೊಳಗೆ ಬಿದ್ದರು. ಅಷ್ಟು ಆಳಕ್ಕೆ ಬಿದ್ದರೂ ಹೆದರದ ಮಹಿಳೆ ಕಾಪಾಡಿ ಎಂದು ಜೋರಾಗಿ ಅರಚಿದ್ದಾರೆ. ನೆರವು ಹೇಗೆ ಬಂದಿತು, ಎಲ್ಲಿಂದ ಬಂದೀತು ಅನ್ನೋದು ಅವರಿಗೆ ಗೊತ್ತಿರಲಿಲ್ಲ. ಆದರೆ ತಾನು ನಂಬಿದ ದೇವರ ಮೇಲೆ ಆಕೆಗೆ ವಿಶ್ವಾಸವಿತ್ತು. ಆಕೆಯ ನಂಬಿಕೆ ಹುಸಿ ಹೋಗಲಿಲ್ಲ. ದಾರಿಹೋಕರು ಆಕೆಯ ಕೂಗು ಕೇಳಿಸಿಕೊಂಡರು. ಬಾವಿಯೊಳಗೆ ಅವರು ಇಣುಕಿ ನೋಡಿದಾಗ ಆಕೆ ಸಾವು-ಬದುಕಿನೊಂದಿಗೆ ಹೋರಾಟ ನಡೆಸುತ್ತಿರುವುದು ಕಾಣಿಸಿತು. ಕೂಡಲೇ ಅವರು ಅಗ್ನಿಶಾಮಕ ದಳಕ್ಕೆ ಪೋನ್ ಮಾಡಿ ವಿಷಯ ತಿಳಿಸಿದರು. ಈ ಘಟನೆ ನಡೆದಿದ್ದು ಕೇರಳದ ವಯ್ನಾಡ್ ಜಿಲ್ಲೆಯಲ್ಲಿ.
ಸ್ಥಳಕ್ಕೆ ದೌಡಾಯಿಸಿದ ಫೈರ್ ಬ್ರಿಗೇಡ್ನವರು ಒಂದು ದೊಡ್ಡ ಜಾಲ ಮತ್ತು ಹಗ್ಗದ ನೆರವಿನಿಂದ ಆಕೆಯನ್ನು ಮೇಲಕ್ಕೆಳೆಯುವಲ್ಲಿ ಸಫಲರಾದರು. ಇಲ್ಲಿರುವ ವಿಡಿಯೊನಲ್ಲಿ ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳೀಯರ ಸಹಾಯದಿಂದ ಮಹಿಳೆಯನ್ನು ಇಷ್ಟಿಷ್ಟಾಗಿ ಮೇಲಕ್ಕೆ ಎಳೆಯುತ್ತಿರುವುದು ಕಾಣುತ್ತಿದೆ. ಕೊನೆ ಭಾಗದಲ್ಲಿ ಆಕೆಯನ್ನು ಬಾವಿಯಿಂದ ಆಚೆ ಎಳೆಯುವುದು ಕಷ್ಟವಾಗುತ್ತಿದೆ. ಅದೂ ಸಹ ವಿಡಿಯೋನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಜಾಲದಿಂದ ಹೊರಬಂದ ನಂತರ ಆ ಮಹಿಳೆಗೆ ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ. ಆಕೆ ಎಷ್ಟು ಅಧೀರಳಾಗಿದ್ದರು, ಅಘಾತಕ್ಕೊಳಗಾಗಿದ್ದರು ಅನ್ನೋದು ಗೊತ್ತಾಗುತ್ತದೆ. ಆದರೆ, ಕತ್ತಲೆ ಕೂಪದಂತಿರುವ ಬಾವಿಯೊಳಗಿಂದ ಮೇಲಿನವರಿಗೆ ಕೇಳಿಸುವಂತೆ ಆಕೆ ಕೂಗಿದರಲ್ಲ, ಅವರ ಧೈರ್ಯ ಮತ್ತು ಸ್ಥೈರ್ಯ ಮೆಚ್ಚುವಂಥದ್ದು
ಇದನ್ನೂ ಓದಿ: ಮಗು ಹಾರುತಿದೆ ನೋಡಿದಿರಾ? ಮಗು ಹಾರುವ ವಿಡಿಯೋ ವೈರಲ್, ಅರ್ಧಕೋಟಿಗೂ ಹೆಚ್ಚು ಜನರ ವೀಕ್ಷಣೆ!
Published on: Aug 11, 2021 08:44 PM
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

