ಬಿಜೆಪಿ ಸರ್ಕಾರದ ವಿರುದ್ದ 40% ಭ್ರಷ್ಟಾಚಾರದ ಆರೋಪ ಬಂದಾಗ ಈಡಿ, ಸಿಬಿಐ ಎಲ್ಲಿದ್ದವು? ಮೊಹಮ್ಮದ್ ನಲಪಾಡ್

|

Updated on: Jul 12, 2024 | 5:45 PM

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮ ಗೋಷ್ಠಿ ನಡೆಸುವ ಅಧಿಕಾರ ಅಪ್ರಬುದ್ಧರಿಗೂ ನೀಡಿರುವರೇ? ಈ ವಿಡಿಯೋ ನೋಡಿದರೆ ನಮ್ಮ ಪ್ರಶ್ನೆ ಅವರಿಗೆ ಅರ್ಥವಾಗುತ್ತದೆ. ಮೊಹಮ್ಮದ್ ನಲಪಾಡ್ ಗೆ ರಾಜ್ಯ ರಾಜಕಾರಣದ ಬಗ್ಗೆ ಮಾಹಿತಿಯ ಕೊರತೆ ಇದೆ, ಇಂಥವರನ್ನು ಪತ್ರಕರ್ತರ ಮುಂದೆ ಕೂರಿಸಿದರೆ ಎಡವಟ್ಟುಗಳಾಗುವ ಸಾಧ್ಯತೆಯೇ ಹೆಚ್ಚು.

ಹುಬ್ಬಳ್ಳಿ: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ 40 ಪರ್ಸೆಂಟ್ ಸರ್ಕಾರ ಎಂದು ಕುಖ್ಯಾತಿ ಹೊಂದಿದ್ದ ಬಿಜೆಪಿಯ ನಾಯಕರು ಮಾಡುವ ಅರೋಪಗಳಿಗೆ ಹುರುಳಿಲ್ಲ, ಅದು 40 ಪರ್ಸೆಂಟ್ ಸರ್ಕಾರ ಅಂತ ಹೇಳಿದ್ದು ಕಾಂಗ್ರೆಸ್ ಅಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹೇಳಿದ ಮಾತಿದು ಎಂದರು. ಕೆಂಪಣ್ಣ ಅವರು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿರುವುದಕ್ಕೆ ಏನಾದರೂ ದಾಖಲೆಯಿದೆಯಾ ಎಂದು ಪ್ರಶ್ನಿಸಿದ ನಲಪಾಡ್, ಬಿಜೆಪಿ ಸರ್ಕಾರದ ವಿರುದ್ಧ ಅರೋಪಗಳು ಬಂದಾಗ ಬಸವರಾಜ ಬೊಮ್ಮಾಯಿ, ಅರ್ ಅಶೋಕ್, ವಿಜಯೇಂದ್ರ ಮೊದಲಾದವರೆಲ್ಲ ಎಲ್ಲಿದ್ದರು? ಎಂದು ಕೇಳಿದರು. ಬಿಎಸ್ ಯಡಿಯೂರಪ್ಪನವರು ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಡಿನೋಟಿಫೈ ಪ್ರಕರಣದಲ್ಲಿ ಜೈಲಿಗೆ ಹೊಗಿದ್ದರು ಎಂದು ನಲಪಾಡ್ ಹೇಳಿದಾಗ ಅವರ ಪಕ್ಕದಲ್ಲಿದ್ದವರೊಬ್ಬರು ಅವರದ್ದೇ ಸರ್ಕಾರದಲ್ಲಿದ್ದಾಗ ಅಂತ ತಿದ್ದುತ್ತಾರೆ! ಯಡಿಯೂರಪ್ಪ, ವಿಜಯೇಂದ್ರ ಮೊದಲಾದವರೆಲ್ಲ ಸತ್ಯ ಹರಿಶ್ಚಂದ್ರನ ವಂಶತಸ್ಥರೇ ಎನ್ನುವ ನಲಪಾಡ್ ಬಿಜೆಪಿ ನಾಯಕರ ವಿರುದ್ಧ ಆರೋಪಗಳು ಕೇಳಿ ಬಂದಾಗ ಈಡಿ, ಸಿಬಿಐ ಮೊದಲಾದ ಏಜೆನ್ಸಿಗಳು ನಿದ್ದೆ ಮಾಡುತ್ತಿದ್ದವೇ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ತುಂಬಿದ ಸಭೆಯಲ್ಲಿ ಶಿವಕುಮಾರ್ ತನ್ನನ್ನು ಗದರುತ್ತಾರೆ ಅಂತ ಮೊಹಮ್ಮದ್ ನಲಪಾಡ್ ಭಾವಿಸಿರಲಿಲ್ಲವೇನೋ?

Published On - 5:43 pm, Fri, 12 July 24

Follow us on