ತಡರಾತ್ರಿವರೆಗೆ ವಿರೇಂದ್ರ ಪಪ್ಪಿ ಮನೆಯಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸಿದ ಈಡಿ ಅಧಿಕಾರಿಗಳು

Updated on: Aug 23, 2025 | 10:55 AM

ವಿರೇಂದ್ರ ಪಪ್ಪಿ ಅವರಲ್ಲದೆ ಕಾಂಗ್ರೆಸ್ ನಾಯಕಿ ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಬಿಜೆಪಿಯ ಮುನಿರತ್ನ ನಾಯ್ಡು ವಿರುದ್ಧ ಸೋತಿದ್ದ ಕುಸುಮ ಹನುಮಂತರಾಯಪ್ಪ ಅವರ ಬೆಂಗಳೂರು ಮನೆಯ ಮೇಲೂ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರ ವ್ಯಾವಹಾರಿಕ ಸಂಬಂಧಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು.

ಚಿತ್ರದುರ್ಗ, ಆಗಸ್ಟ್ 23: ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆಸಿ ವಿರೇಂದ್ರ ಪಪ್ಪಿ ಮತ್ತು ಅವರ ಸಹೋದರ ಕೆಸಿ ನಾಗರಾಜ (KC Nagaraj) ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ದಾಳಿ ರಾತ್ರಿ 12:45 ಮುಗಿದಿದೆ. ನಾವು ವರದಿ ಮಾಡಿದ ಪ್ರಕಾರ ನಿನ್ನೆ ಬೆಳಗ್ಗೆ 5 ಗಂಟೆಗೆ ಈಡಿ ಅಧಿಕಾರಿಗಳು ಜಿಲ್ಲೆಯ ಚಳ್ಳಕೆರೆಯಲ್ಲಿರುವ ವಿರೇಂದ್ರ ಪಪ್ಪಿ ಮತ್ತು ಅವರ ಸಹೋದರನ ಮನೆ ಮೇಲೆ ದಾಳಿ ನಡೆಸಿ ದಾಖಲಾತಿಗಳ ಪರಿಶೀಲನೆ ನಡೆಸಿದ್ದರು. ವಿರೇಂದ್ರ ಅವರ ಚಳ್ಳಕೆರೆ, ಬೆಂಗಳೂರು ಮತ್ತು ಗೋವಾ ಸೇರಿದಂತೆ 17 ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆದಿತ್ತು. ಅಧಿಕಾರಿಗಳು ಬ್ಯಾಗುಗಳಲ್ಲಿ ಕಾಗದ ಪತ್ರಗಳನ್ನು ತೆಗೆದುಕೊಂಡು ಹೋಗಿತ್ತಿರುವುದು ದೃಶ್ಯಗಳಲ್ಲಿ ಗಮನಿಸಬಹುದು.

ಇದನ್ನೂ ಓದಿ:  ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗದಲ್ಲಿ ಕಾಂಗ್ರೆಸ್​ ಶಾಸಕ ಕೆಸಿ ವೀರೇಂದ್ರ ಮನೆ ಮೇಲೆ ಇ.ಡಿ ದಾಳಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ