AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ: 24 ಗಂಟೆ ಕಳೆದ್ರೂ ಮುಗಿಯದ ಶೋಧ

ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ: 24 ಗಂಟೆ ಕಳೆದ್ರೂ ಮುಗಿಯದ ಶೋಧ

Sahadev Mane
| Edited By: |

Updated on: Jun 25, 2026 | 10:09 AM

Share

ಮುಖ್ಯಾಂಶಗಳು

  • ಸತೀಶ್ ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ
  • 24 ಗಂಟೆಗಳು ಕಳೆದರೂ ಮುಗಿಯದ ಶೋಧ ಕಾರ್ಯ
  • ಅಕ್ರಮ ಆಸ್ತಿ ಗಳಿಕೆ ತನಿಖೆಯ ಭಾಗವಾಗಿ ನಡೆದ ಇಡಿ ದಾಳಿ

ಸತೀಶ್ ಜಾರಕಿಹೊಳಿ ಅವರ ಭಾವಮೈದ, ಬೆಳಗಾವಿ ಅಬಕಾರಿ ಅಧಿಕಾರಿ ಮಂಜುನಾಥ್ ಅವರ ಮನೆ ಮತ್ತು 10 ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ. ಸತತ 25 ಗಂಟೆಗಳ ಕಾಲ ನಡೆದ ಶೋಧದಲ್ಲಿ ಬೇನಾಮಿ ಬಾರ್ ದಾಖಲೆಗಳು, ಅಕ್ರಮ ಆಸ್ತಿ, ಚಿನ್ನಾಭರಣಗಳು ಪತ್ತೆಯಾಗಿವೆ. ಗೋವಾಕ್ಕೂ ತನಿಖೆ ವಿಸ್ತರಿಸಿದ್ದು, ಹವಾಲಾ ಹಣ ವರ್ಗಾವಣೆ ಶಂಕೆ ವ್ಯಕ್ತವಾಗಿದೆ.

ಬೆಳಗಾವಿ, ಜೂನ್ 25: ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಭಾವಮೈದ ಮತ್ತು ಬೆಳಗಾವಿಯ ಅಬಕಾರಿ ಇಲಾಖೆಯ ಹೆಚ್ಚುವರಿ ಉಪ ಆಯುಕ್ತ ಮಂಜುನಾಥ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ 24 ಗಂಟೆಗಳು ಕಳೆದರೂ ಶೋಧ ಕಾರ್ಯ ಮುಂದುವರಿದಿದೆ. ಬುಧವಾರ ಬೆಳಗ್ಗೆ 5:30ಕ್ಕೆ ಪ್ರಾರಂಭವಾದ ಈ ದಾಳಿ ಇವತ್ತು ಬೆಳಗ್ಗೆ 6 ಗಂಟೆಯವರೆಗೆ, ಅಂದರೆ ಸತತ 25 ಗಂಟೆಗಳ ಕಾಲ ಮುಂದುವರಿದಿದೆ.

ಬೆಳಗಾವಿಯ ಟಿವಿ ಸೆಂಟರ್‌ನಲ್ಲಿರುವ ಮಂಜುನಾಥ್ ಮನೆ ಸೇರಿದಂತೆ ರಾಜ್ಯದ ಒಟ್ಟು 10 ಸ್ಥಳಗಳಲ್ಲಿ ಈ ಏಕಕಾಲಿಕ ಕಾರ್ಯಾಚರಣೆ ನಡೆದಿದೆ. ಈ ಸ್ಥಳಗಳಲ್ಲಿ ಬೆಳಗಾವಿಯಲ್ಲಿ ಆರು, ದಾವಣಗೆರೆ ಮತ್ತು ಮೈಸೂರಿನಂತಹ ನಗರಗಳೂ ಸೇರಿವೆ. ದಾಳಿಯ ವೇಳೆ, ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು, ಬೇನಾಮಿ ಬಾರ್ ಪರವಾನಗಿಗಳು, ಅಕ್ರಮ ಆಸ್ತಿ ಪತ್ರಗಳು ಮತ್ತು ಚಿನ್ನಾಭರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಮಂಜುನಾಥ್ ಅವರ ಪತ್ನಿಯನ್ನೂ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಮತ್ತು ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us