ಉಡುಪಿ ಕಾಲೇಜಿನ ಹಿಜಾಬ್ ವಿಚಾರ: ಹಿಂದೆ ಯಾವತ್ತೂ ಇರದ ಸಮಸ್ಯೆ ಈ ವರ್ಷ ಆರಂಭವಾಗಿದೆ ಎಂದರು ಶಿಕ್ಷಣ ಸಚಿವ ಬಿಸಿ ನಾಗೇಶ
ಅದೇ ಸಮುದಾಯದ ನೂರಕ್ಕೂ ಹೆಚ್ಚು ಮಕ್ಕಳು ಅದೇ ಕಾಲೇಜಿನಲ್ಲಿ ಓದುತ್ತಿದ್ದು ಅವರಿಗೆ ಯಾವುದೇ ಸಮಸ್ಯೆಯಿಲ್ಲ. ಅವರು ಹಿಜಾಬ್ ಇಲ್ಲದೆ ಕಾಲೇಜಿಗೆ ಬರುತ್ತಾರೆ. ಅದು ಬೇಕು ಎಂದು ಪಟ್ಟುಹಿಡಿದ ಕೆಲ ಮಕ್ಕಳ ಪೋಷಕರೊಂದಿಗೆ ಮಾತುಕತೆ ನಡೆಸಿದ ನಂತರ ಅವರಲ್ಲಿ ಕೆಲವರು, ಹಿಜಾಬ್ ಧರಿಸದೆ ಕಾಲೇಜಿಗೆ ಬರಲು ಸಮ್ಮತಿಸಿದರು. ಈಗ ಕೆಲವೇ ಕೆಲವರು ಮಾತ್ರ ಪಟ್ಟು ಮುಂದುವರಿಸಿದ್ದಾರೆ ಎಂದು ಸಚಿವರು ಹೇಳಿದರು.
ಇವು ನಿಜಕ್ಕೂ ಗೊಂದಲ ಮತ್ತು ಕಿರಿಕಿರಿ ಉಂಟುಮಾಡುವ ವಿಷಯ ಮಾರಾಯ್ರೇ. ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ (PU College) ಕೆಲ ವಿದ್ಯಾರ್ಥಿನಿಯರು ಆಫ್ಲೈನ್ (offline) ತರಗತಿಗಳಿಗೆ ಹಾಜರಾಗುವಾಗ ತಮಗೆ ಹಿಜಾಬ್ ಧರಿಸುವ ಅವಕಾಶ ನೀಡಬೇಕೆಂದು ಇಟ್ಟಿರುವ ಬೇಡಿಕೆ ವಿವಾದದ ರೂಪ ತಳೆಯುತ್ತಿದ್ದೆ. ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಅವರು ಬುಧವಾರ ಬೆಂಗಳೂರಿನಲ್ಲಿ ಒಂದಷ್ಟು ವಿಷಯಗಳನ್ನು ತಿಳಿಗೊಳಿಸಿದರು. ಹಿಂದೆ ಯಾವತ್ತೂ ಉದ್ಭವಿಸಿದ ಸಮಸ್ಯೆ ಈ ವರ್ಷದ ಜನೆವರಿಯಲ್ಲಿ ಶುರುವಿಟ್ಟುಕೊಂಡಿದೆ. ದಶಕಗಳ ಹಿಂದೆಯೇ ಶಾಲೆಗೆ ಬರುವ ಮಕ್ಕಳಲ್ಲಿ ಮೇಲು-ಕೀಳು ತಾರತಮ್ಯ ಹುಟ್ಟಬಾರದೆಂಬ ಉದ್ದೇಶದಿಂದ ಸಮವಸ್ತ್ರಗಳನ್ನು ಧರಿಸುವುದು ಕಡ್ಡಾಯ ಮಾಡಲಾಯಿತು. ಈಗ ಕೆಲ ಮಕ್ಕಳು ಹಿಜಾಬ್ ಅವಕಾಶ ಕೋರಿರುವ ಕಾಲೇಜಿನಲ್ಲಿ 1885 ರಿಂದ ಅಂದಿನ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (ಎಸ್ ಡಿ ಎಮ್ ಸಿ) ನೀಡಿದ ಸಲಹೆ ಮೇರೆಗೆ ಯೂನಿಫಾರ್ಮ್ ಜಾರಿಗೆ ಬಂದಿದೆ ಎಂದು ಸಚಿವರು ಹೇಳಿದರು.
ಅದೇ ಸಮುದಾಯದ ನೂರಕ್ಕೂ ಹೆಚ್ಚು ಮಕ್ಕಳು ಅದೇ ಕಾಲೇಜಿನಲ್ಲಿ ಓದುತ್ತಿದ್ದು ಅವರಿಗೆ ಯಾವುದೇ ಸಮಸ್ಯೆಯಿಲ್ಲ. ಅವರು ಹಿಜಾಬ್ ಇಲ್ಲದೆ ಕಾಲೇಜಿಗೆ ಬರುತ್ತಾರೆ. ಅದು ಬೇಕು ಎಂದು ಪಟ್ಟುಹಿಡಿದ ಕೆಲ ಮಕ್ಕಳ ಪೋಷಕರೊಂದಿಗೆ ಮಾತುಕತೆ ನಡೆಸಿದ ನಂತರ ಅವರಲ್ಲಿ ಕೆಲವರು, ಹಿಜಾಬ್ ಧರಿಸದೆ ಕಾಲೇಜಿಗೆ ಬರಲು ಸಮ್ಮತಿಸಿದರು. ಈಗ ಕೆಲವೇ ಕೆಲವರು ಮಾತ್ರ ಪಟ್ಟು ಮುಂದುವರಿಸಿದ್ದಾರೆ ಎಂದು ಸಚಿವರು ಹೇಳಿದರು.
ಎಸ್ ಡಿ ಎಮ್ ಸಿಗೆ ಶಾಲಾ ಕಾಲೇಜುಗಳ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ತಲೆಹಾಕಬೇಕು, ಸಮವಸ್ತ್ರ ಬಗ್ಗೆ ನಿಯಮಗಳನ್ನು ಬದಲಾಯಿಸುವ ಅಧಿಕಾರ ಅದಕ್ಕಿಲ್ಲ ಎನ್ನುವುದನ್ನು ಸಚಿವ ನಾಗೇಶ ಸ್ಪಷ್ಟಪಡಿಸಿದರು.
ಯೂನಿಫಾರ್ಮ್ ಮತ್ತು ಹಿಜಾಬ್ ಮೊದಲಾದ ಸಂಗತಿಗಳನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಎಲ್ಲ ಆಯಾಮಗಳನ್ನು ಗಣನೆಗೆ ತೆಗೆದುಕೊಂಡು ಸಾಧಕ-ಬಾಧಕಗಳನ್ನು ಅವಲೋಕಿಸಿ ಸರ್ಕಾರಕ್ಕೆ ಒಂದು ವರದಿಯನ್ನು ಸಲ್ಲಿಸಲಿದೆ. ಅಲ್ಲಿಯವರೆಗೆ ಯಥಾಸ್ಥತಿಯನ್ನು ಮುಂದುವರಿಸಿಕೊಂಡು ಹೋಗಲು ತಿಳಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ ಹೇಳಿದರು.