ಮಾನವನಿಗೆ ಇಗೊ ಒಳ್ಳೆಯದಲ್ಲ, ಸತ್ತಾಗ ಅವನಲ್ಲಿದ್ದ ಒಳ್ಳೆಯ ಗುಣಗಳಿಂದ ಜನರು ನೆನಸುತ್ತಾರೆ: ಡಾ ಸೌಜನ್ಯ ವಶಿಷ್ಠ
ಇಗೋ ಇರುವ ವ್ಯಕ್ತಿ ಸೆಲ್ಫ್-ಸೆಂಟ್ರಿಕ್ ಆಗಿರುತ್ತಾನೆ. ನಾನು, ನನ್ನದು, ನನ್ನಿಂದ-ಹೀಗೆ ಅವನ ಯೋಚನೆ ಮತ್ತು ಅವನ ಸುತ್ತವೇ ಗಿರಕಿ ಹೊಡೆಯುತ್ತಿರುತ್ತದೆ. ತಾನೇ ಎಲ್ಲ, ತನ್ನಿಂದಲೇ ಎಲ್ಲ ಅಂತ ಅವನು ಭಾವಿಸಿರುತ್ತಾನೆ.
ನಮ್ಮಲ್ಲಿ ಒಳ್ಳೆ ಗುಣಗಳ ಜೊತೆ ಕೆಟ್ಟ ಗುಣಗಳು ಸಹ ಇರುತ್ತವೆ. ಬರೀ ಒಳ್ಳೆಯ ಗುಣಗಳು ಮಾತ್ರ ಇದ್ದರೆ ಜನ ನಮ್ಮನ್ನು ಒಳ್ಳೆಯವನು ಇಲ್ಲವೇ ಗುಣವಂತ ಎಂದು ಕರೆಯುತ್ತಾರೆ. ಹಾಗೆಯೇ ಬರೀ ಕೆಟ್ಟ ಗುಣಗಳಿದ್ದರೆ, ಕೆಟ್ಟವನು ಇಲ್ಲವೇ ದುಷ್ಟ ಅಂತ ಕರೆಯುತ್ತಾರೆ. ನಮ್ಮಲ್ಲಿರಬಹುದಾದ ಕೆಟ್ಟ ಗುಣಗಳಲ್ಲಿ ಇಗೋ (ego) ಸಹ ಒಂದು ಹಾಗೂ ಬಹಳ ಕೆಟ್ಟದ್ದು ಎಂದಯ ಮನಶಾಸ್ತ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ. ಇಗೋಗೆ ಕನ್ನಡದಲ್ಲಿ ಹಲವು ಸಮನಾರ್ಥಕ ಪದಗಳಿವೆ. ದುರಹಂಕಾರ, ದುರಭಿಮಾನ, ಒಣಪ್ರತಿಷ್ಠೆ, ಒಣಹೆಮ್ಮೆ, ಗರ್ವ, ಅಹಂಕಾರ ಆಡು ಬಾಷೆಯಲ್ಲಿ ಹೇಳುವುದಾದರೆ ಕೊಬ್ಬು, ಚರ್ಬಿ ಅಂತೆಲ್ಲ ಪದಗಳಿವೆ. ಅರ್ಥಗಳು ಹಲವಿರಬಹುದು; ಆದರೆ ಇಗೋ ಇರುವ ಮಾನವ ಒಳ್ಳೆಯವೆನೆನಿಸಿಕೊಳ್ಳಲಾರ ಯಾಕೆಂದರೆ ಅದು ಇರುವ ಕಡೆ ಪ್ರೀತಿ, ವಿಶ್ವಾಸ ಇರೋದಿಲ್ಲ ಅಂತ ಸೌಜನ್ಯ ಹೇಳುತ್ತಾರೆ.
ಇಗೋ ಇರುವ ವ್ಯಕ್ತಿ ಸೆಲ್ಫ್-ಸೆಂಟ್ರಿಕ್ ಆಗಿರುತ್ತಾನೆ. ನಾನು, ನನ್ನದು, ನನ್ನಿಂದ-ಹೀಗೆ ಅವನ ಯೋಚನೆ ಮತ್ತು ಅವನ ಸುತ್ತವೇ ಗಿರಕಿ ಹೊಡೆಯುತ್ತಿರುತ್ತದೆ. ತಾನೇ ಎಲ್ಲ, ತನ್ನಿಂದಲೇ ಎಲ್ಲ ಅಂತ ಅವನು ಭಾವಿಸಿರುತ್ತಾನೆ. ಅವನು ಒಂದರ್ಥದಲ್ಲಿ ಸ್ವಾರ್ಥಿ. ನಮ್ಮನ್ನು ಸೃಷ್ಟಿ ಮಾಡಿದ ದೇವರು ಪ್ರತಿಯೊಬ್ಬರಿಗೂ ಒಂದೊಂದು ಬಗೆಯ ಪ್ರತಿಭೆ ಕೊಟ್ಟಿರುತ್ತಾನೆ.
ಕೆಲವರು ಆ ಪ್ರತಿಭೆಯನ್ನು ಸೂಕ್ತವಾಗಿ ಉಪಯೋಗಿಸಿಕೊಂಡು ಬದುಕಿನಲ್ಲಿ ಬಹಳ ಮುಂದೆ ಸಾಗಿಬಿಡುತ್ತಾರೆ, ಉಳಿದವರಿಗೆ ಅದು ಸಾಧ್ಯವಾಗುವುದಿಲ್ಲ ಎಂದು ಸೌಜನ್ಯ ಹೇಳುತ್ತಾರೆ.
ಖುದ್ದು ದೇವರೇ ತನ್ನ ಸೃಷ್ಟಿಯ ವಿಷಯದಲ್ಲಿ ತಾರತಮ್ಯ ಮಾಡಿದವನಲ್ಲ. ಮತ್ತೊಂದು ಗಮನಾರ್ಹ ಸಂಗತಿಯೇನೆಂದರೆ, ನಮ್ಮ ಬುದ್ಧಿವಂತಿಕೆ, ಶ್ರೀಮಂತಿಕೆ ಯಾವುದೂ ಶಾಶ್ವತವಲ್ಲ. ಸತ್ತಾಗ ಅವು ನಮ್ಮೊಂದಿಗೆ ಬರಲಾರವು.
ಮಾನವ ಗತಿಸಿದ ನಂತರ ಜನ ನೆನಪು ಮಾಡಿಕೊಳ್ಳುವುದು ಅವನ ಒಳ್ಳೆಯ ಗುಣಗಳನ್ನು ಮಾತ್ರ. ಹೀಗಾಗಿ ನಾವು ಬದುಕಿರುವಾಗ ಇಗೋ ಬದಿಗಿಟ್ಟು ಬೇರೆಯವರಿಗೆ ಪ್ರೀತಿ ಮತ್ತು ಕಾಳಜಿ ತೋರುತ್ತಾ ಬದುಕಬೇಕು ಎಂದು ಸೌಜನ್ಯ ಹೇಳುತ್ತಾರೆ.
ಇದನ್ನೂ ಓದಿ : ಮೃತಪಟ್ಟಿದ್ದ ಜಾನುವಾರುಗಳನ್ನು ವಾಹನಕ್ಕೆ ಕಟ್ಟಿಹಾಕಿ ಎಳೆದೊಯ್ದ ಐಆರ್‌ಬಿ ಟೋಲ್ ಸಿಬ್ಬಂದಿ; ಅಮಾನವೀಯ ವಿಡಿಯೋ ವೈರಲ್