ಅಂಬರೀಷ್​ ಎದುರು ಎಲೆಕ್ಷನ್​ ನಿಲ್ಲೋಕೆ ಪ್ರೇಮ್​ಗೆ ಬಂದಿತ್ತು ಆಫರ್​; ನಿರಾಕರಿಸಿದ್ದಕ್ಕೆ ಕಾರಣ ತಿಳಿಸಿದ ಡೈರೆಕ್ಟರ್​

ಅಂಬರೀಷ್​ ಎದುರು ಎಲೆಕ್ಷನ್​ ನಿಲ್ಲೋಕೆ ಪ್ರೇಮ್​ಗೆ ಬಂದಿತ್ತು ಆಫರ್​; ನಿರಾಕರಿಸಿದ್ದಕ್ಕೆ ಕಾರಣ ತಿಳಿಸಿದ ಡೈರೆಕ್ಟರ್​

| Updated By: ಮದನ್​ ಕುಮಾರ್​

Updated on: Feb 19, 2022 | 6:14 PM

ಚಿತ್ರರಂಗದವರು ರಾಜಕೀಯಕ್ಕೆ ಬರೋದು ಕಾಮನ್​. ನಿರ್ದೇಶಕ ಪ್ರೇಮ್​ ಅವರು ರಾಜಕೀಯದ ಕುರಿತು ತಮ್ಮ ನಿಲುವು ಏನು ಎಂಬುದನ್ನು ತಿಳಿಸಿದ್ದಾರೆ.

​ನಟ/ನಿರ್ದೇಶಕ ‘ಜೋಗಿ’ ಪ್ರೇಮ್ (Director Prem) ಅವರು ಚಿತ್ರರಂಗದ ಹಲವು ವಿಭಾಗಗಳಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಅವರು ಸಾಮಾಜಿಕ ಕೆಲಸಗಳನ್ನೂ ಮಾಡುತ್ತಾರೆ. ರಾಜಕೀಯದ ಕುರಿತಂತೆ ಅವರಿಗೆ ಮುಂದಾಲೋಚನೆಗಳಿವೆ. ಈ ಹಿಂದೆ ಕೂಡ ಅವರು ಚುನಾವಣೆಗೆ ನಿಲ್ಲುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಮಂಡ್ಯದಲ್ಲಿ ‘ರೆಬಲ್​ ಸ್ಟಾರ್​’ ಅಂಬರೀಷ್​ (Ambareesh) ಎದುರು ಎಲೆಕ್ಷನ್​ಗೆ ನಿಲ್ಲುವಂತೆ ಪ್ರೇಮ್​ ಅವರಿಗೆ ಆಫರ್​ ಕೂಡ ಬಂದಿತ್ತು. ಆದರೆ ಅದನ್ನು ಪ್ರೇಮ್​ ಒಪ್ಪಿಕೊಂಡಿರಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಪ್ರೇಮ್​ ನಿರ್ದೇಶನ ಮಾಡಿರುವ ‘ಏಕ್​ ಲವ್​ ಯಾ’ (Ek Love Ya Movie) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫೆ.25ರಂದು ಈ ಚಿತ್ರ ರಾಜ್ಯದ್ಯಾಂತ ರಿಲೀಸ್​ ಆಗಲಿದೆ. ಪ್ರೇಮ್​ ಪತ್ನಿ ರಕ್ಷಿತಾ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಅವರ ಸಹೋದರ ರಾಣ ‘ಏಕ್​ ಲವ್​ ಯಾ’ ಮೂಲಕ ಬಣ್ಣದ ಲೋಕಕ್ಕೆ ಹೀರೋ ಆಗಿ ಎಂಟ್ರಿ ನೀಡುತ್ತಿದ್ದಾರೆ. ರಾಣಗೆ ನಾಯಕಿಯರಾಗಿ ರೀಷ್ಮಾ ನಾಣಯ್ಯ, ರಚಿತಾ ರಾಮ್​ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡುಗಳು ಧೂಳೆಬ್ಬಿಸಿವೆ. ಚಿತ್ರಮಂದಿರದಲ್ಲಿ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ:

‘ಏಕ್​ ಲವ್​ ಯಾ’ ಸುದ್ದಿಗೋಷ್ಠಿಯಲ್ಲಿ ಪ್ರೇಮ್​ ಮಾತು; ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ..

‘ಏಕ್​ ಲವ್​ ಯಾ’ ಮ್ಯೂಸಿಕ್​ಗಾಗಿ ಒಂದೂವರೆ ಕೋಟಿ ಖರ್ಚು ಮಾಡಿದೀನಿ ಎಂದ ಜೋಗಿ ಪ್ರೇಮ್​