ಆ ಒಂದು ಮಾತಿಗೆ ಪ್ರೇಮ್ ಕಾಲಿಗೆ ನಮಸ್ಕರಿಸಿದ ರಾಣ
ಪ್ರೇಮ್ ಅವರು ಯಾರನ್ನಾದರೂ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ಎಂದರೆ ಅವರ ಬಗ್ಗೆ ಅಭಿಮಾನಿಗಳಿಗೆ ಸಹಜವಾಗಿಯೇ ಹೆಚ್ಚು ನಿರೀಕ್ಷೆ ಇರುತ್ತದೆ. ಹೀಗಾಗಿ, ರಾಣ ನಟನೆಯಲ್ಲಿ ಹೇಗೆ ಪಳಗಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ.
ನಟಿ ರಕ್ಷಿತಾ (Rakshita) ಸಹೋದರ ರಾಣ ಅವರು ‘ಏಕ್ ಲವ್ ಯಾ’ ಚಿತ್ರದ (Ek Love Ya Movie) ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ. ಪ್ರೇಮ್ ಅವರು ಯಾರನ್ನಾದರೂ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ಎಂದರೆ ಅವರ ಬಗ್ಗೆ ಅಭಿಮಾನಿಗಳಿಗೆ ಸಹಜವಾಗಿಯೇ ಹೆಚ್ಚು ನಿರೀಕ್ಷೆ ಇರುತ್ತದೆ. ಹೀಗಾಗಿ, ರಾಣ (Rana) ನಟನೆಯಲ್ಲಿ ಹೇಗೆ ಪಳಗಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್, ಟ್ರೇಲರ್, ಸಾಂಗ್ಗಳು ಗಮನ ಸೆಳೆದಿವೆ. ಈ ಸಿನಿಮಾದ ಸುದ್ದಿಗೋಷ್ಠಿ ವೇಳೆ ಪ್ರೇಮ್ ಅವರು ರಾಣ ಅವರ ಕಾಲೆಳಿದಿದ್ದಾರೆ. ಸಿನಿಮಾ ಆಫರ್ಗಳು ಬರುತ್ತಿವೆಯೇ ಎನ್ನುವ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಲು ರಾಣ ತೆರಳುತ್ತಿದ್ದಂತೆ, ‘ಮಾಡಿ, ಮಾಡಿ, ಆಮೇಲೇ ನಾವು ಕೇಳಿದಾಗ ಡೇಟ್ ಕೊಡಲಿ’ ಎಂದರು ಪ್ರೇಮ್. ಆಗ ಪ್ರೇಮ್ ಕಾಲಿಗೆ ರಾಣ ನಮಸ್ಕರಿಸಿದರು.
ಇದನ್ನೂ ಓದಿ: ‘ಏಕ್ ಲವ್ ಯಾ’ ಮ್ಯೂಸಿಕ್ಗಾಗಿ ಒಂದೂವರೆ ಕೋಟಿ ಖರ್ಚು ಮಾಡಿದೀನಿ ಎಂದ ಜೋಗಿ ಪ್ರೇಮ್
‘ಆಫೀಸ್ಗೆ ಬಂದು ಒಂದು ಚಾನ್ಸ್ ಕೊಡಿ ಎಂದಿದ್ರು’; ‘ಏಕ್ ಲವ್ ಯಾ’ ನಾಯಕಿ ರೀಷ್ಮಾ ಬಗ್ಗೆ ಪ್ರೇಮ್ ಮಾತು