AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರಿನ ಒಂದು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲೂ ಹಿಜಾಬ್ ಧರಿಸಿದ ಮಕ್ಕಳು; ಶಾಲಾ ವ್ಯವಸ್ಥಾಪಕ ಮಂಡಳಿ ಮೌನ!

ರಾಯಚೂರಿನ ಒಂದು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲೂ ಹಿಜಾಬ್ ಧರಿಸಿದ ಮಕ್ಕಳು; ಶಾಲಾ ವ್ಯವಸ್ಥಾಪಕ ಮಂಡಳಿ ಮೌನ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Feb 14, 2022 | 6:11 PM

Share

ಒಂದು ಚಿಕ್ಕ ಮಗು ತಲೆಮೇಲೆ ಟೋಪಿ ಧರಿಸಿ ಶಾಲೆಗೆ ಬಂದಿದೆ. ಆ ಮಗುವಿಗೆ ಧಾರ್ಮಿಕತೆಯ ಸಂಕೇತ, ನ್ಯಾಯಾಲಯದ ಆದೇಶ ಅರ್ಥವಾದೀತೆ? ಇಲ್ಲ. ಆದರೆ ಪಾಲಕರಿಗೆ ಅರ್ಥವಾಗುತ್ತದೆ. ಮಗುವಿಗೆ ಅದನ್ನೆಲ್ಲ ಅರ್ಥ ಮಾಡಿಸುವ ಜವಾಬ್ದಾರಿ ಮತ್ತು ಕರ್ತವ್ಯ ಅವರದಲ್ಲವೇ?

ಹುಬ್ಬಳ್ಳಿಯ ಕೌಲ್ ಪೇಟೆಯಲ್ಲಿರುವ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯಂತೆಯೇ ಬಿಸಿಲು ನಾಡು ರಾಯಚೂರು ನಗರದ ಮೌಲಾನಾ ಆಜಾದ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ (Maulana Azad English Medium School) ವಿದ್ಯಾರ್ಥಿನಿಯರು ಹಿಜಾಬ್ (hijab) ಧರಿಸಿಯೇ ಶಾಲೆಗೆ ಬಂದಿದ್ದಾರೆ. ಮಕ್ಕಳನ್ನು ದೂಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾಕೆ ಅಂತ ನಿಮಗೆ ಗೊತ್ತು. ಅವರು ತಂದೆ-ತಾಯಿಗಳಿಂದ, (parents) ಪೋಷಕರಿಂದ (guardians) ನ್ಯಾಯಾಲಯ ಆದೇಶದ ಉಲ್ಲಂಘನೆಯಾಗುತ್ತಿದೆ. ಅವರು ತಮ್ಮ ಮಕ್ಕಳಿಗೆ; ಏನೂ ಆಗೋದಿಲ್ಲ, ಏನೇ ಆದರೂ ನಾವು ನೋಡಿಕೊಳ್ತೀವಿ ಅಂತ ತಮ್ಮ ಮಕ್ಕಳಿಗೆ ಶಾಲೆಗೆ ಕಳಿಸಿರುತ್ತಾರೆ. ತಮ್ಮಿಂದ ಆಗುತ್ತಿರುವ ಅಪರಾಧದ ಪರಿವೆಯೇ ಅವರಿಗೆ ಇದ್ದಂತಿಲ್ಲ. ಅದಲ್ಲದೆ, ಮಕ್ಕಳಲ್ಲೂ ನ್ಯಾಯಾಂಗದ ವ್ಯವಸ್ಥೆಯ ಬಗ್ಗೆ ಅವರು ಉಡಾಫೆ ಮನೋಭಾವ ಬೆಳೆಯಲು ಕಾರಣರಾಗುತ್ತಿದ್ದಾರೆ. ರಾಜ್ಯ ಉಚ್ಚ ನ್ಯಾಯಾಲಯದ ಅದೇಶವನ್ನು ಅವರು ಕಡೆಗಣಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಶಾಲೆಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೂ ಜನರಲ್ಲಿ ಈ ಬಗೆಯ ಅಸಡ್ಡೆ ಮತ್ತು ನಿರ್ಲಕ್ಷ್ಯ ಮನೋಭಾವ. ಈ ಮಕ್ಕಳ ಪಾಲಕರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾದರೆ, ಕೆಲಸ ಕಾರ್ಯ ಬಿಟ್ಟು ಕೋರ್ಟ್ಗೆ ಅಲೆದಾಡಬೇಕಾಗುತ್ತದೆ ಎಂಬ ಅರಿವು ಸಹ ಅವರಿಲ್ಲದಿರುವುದು ದಿಗ್ಭ್ರಮೆ ಮೂಡಿಸುತ್ತದೆ.

ಈ ವಿಡಿಯೋದ ಆರಂಭದಲ್ಲಿ ಗಂಡು ವಿದ್ಯಾರ್ಥಿಗಳ ಒಂದು ತರಗತಿಯನ್ನು ತೋರಿಸಲಾಗಿದೆ. ಅದರಲ್ಲಿ ಒಂದು ಚಿಕ್ಕ ಮಗು ತಲೆಮೇಲೆ ಟೋಪಿ ಧರಿಸಿ ಶಾಲೆಗೆ ಬಂದಿದೆ. ಆ ಮಗುವಿಗೆ ಧಾರ್ಮಿಕತೆಯ ಸಂಕೇತ, ನ್ಯಾಯಾಲಯದ ಆದೇಶ ಅರ್ಥವಾದೀತೆ? ಇಲ್ಲ. ಆದರೆ ಪಾಲಕರಿಗೆ ಅರ್ಥವಾಗುತ್ತದೆ. ಮಗುವಿಗೆ ಅದನ್ನೆಲ್ಲ ಅರ್ಥ ಮಾಡಿಸುವ ಜವಾಬ್ದಾರಿ ಮತ್ತು ಕರ್ತವ್ಯ ಅವರದಲ್ಲವೇ?

ಈ ಶಾಲೆಯ ವರ್ತನೆ ಸಹ ಪ್ರಶ್ನಾರ್ಹ. ಶಾಲೆಯ ಪ್ರಿನ್ಸಿಪಾಲ್ ಅಥವಾ ಹೆಡ್ ಮಾಸ್ಟರ್/ಮಿಸ್ಟ್ರೆಸ್​ಗೆ ಕೋರ್ಟು ಹೇಳಿರುವುದು ಚೆನ್ನಾಗಿ ಗೊತ್ತಿದೆ. ಆದರೂ ಮಕ್ಕಳಿಗೆ ಧಾರ್ಮಿಕ ಸಂಕೇತಗಳನ್ನು ಸೂಚಿಸುವ ವಸ್ತ್ರಗಳನ್ನು ಶಾಲಾ ಆವರಣದಲ್ಲಿ ಧರಿಸುವ ಅವಕಾಶ ನೀಡಲಾಗಿದೆ. ನ್ಯಾಯಾಲಯ ತನ್ನ ಆದೇಶದಲ್ಲಿ ಶಿಕ್ಷಕಿಯರ ಬುರ್ಖಾ ಧರಿಸುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹಾಗಾಗಿ ಅದನ್ನು ಪ್ರಶ್ನಿಸುವುದು ಉಚಿತವಲ್ಲ.

ಇದನ್ನೂ ಓದಿ:   Karnataka Hijab Row: ಹಿಜಾಬ್ ವಿವಾದ; ವಿಚಾರಣೆ ಮುಂದೂಡಿದ ಕರ್ನಾಟಕ ಹೈಕೋರ್ಟ್