ಹಿಜಾಬ್ ಧರಿಸಿದರೆ ರೇಪ್ ಆಗಲ್ಲ ಅಂತ ಹೇಳಿಲ್ಲವೆಂದು ತಮ್ಮನ್ನು ಸಮರ್ಥಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದರು ಜಮೀರ್ ಅಹ್ಮದ್!

ಹಿಜಾಬ್ ಧರಿಸಿದರೆ ರೇಪ್ ಆಗಲ್ಲ ಅಂತ ಹೇಳಿಲ್ಲವೆಂದು ತಮ್ಮನ್ನು ಸಮರ್ಥಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದರು ಜಮೀರ್ ಅಹ್ಮದ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 14, 2022 | 9:51 PM

ಅವರು ರವಿವಾರ ಹೇಳಿದ್ದಕ್ಕೂ ಸೋಮವಾರ ಹೇಳುತ್ತಿರುವುದಕ್ಕೂ ವ್ಯತ್ಯಾಸವೇ ಇಲ್ಲ. ಒಂದು ವ್ಯತ್ಯಾಸವನ್ನು ನಾವು ಗುರುತಿಸಬಹುದು. ರವಿವಾರ ಅವರು ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ಮಾತಾಡಿದ್ದರೆ ಸೋಮವಾರದ ಸಮಾಜಾಯಿಷಿಯನ್ನು ಕನ್ನಡದಲ್ಲಿ ನೀಡಿದ್ದಾರೆ!

ಒಂದು ಕಾಲೇಜಿನಿಂದ ಶುರುವಾದ ಹಿಜಾಬ್ ವಿವಾದ (hijab row) ಎಲ್ಲೆಲ್ಲಿಗೋ ಹೋಗುತ್ತಿದೆ. ಮೊದಲು ಜೆಡಿ(ಎಸ್) ಪಕ್ಷದಲ್ಲಿದ್ದು ನಂತರ ಕಾಂಗ್ರೆಸ್ಗೆ (Congress) ವಲಸೆ ಬಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ (Siddaramaiah) ಬಲಗೈ ಬಂಟನಂತೆ ವರ್ತಿಸುತ್ತಿರುವ ಶಾಸಕ ಜಮೀರ್ ಅಹ್ಮದ್ (Zameer Ahmed) ಅವರು ಬಾಯಿಗೆ ಬಂದಂತೆ ಹೇಳಿಕ ನೀಡಿ ಆಮೇಲೆ ತಿಪ್ಪೆ ಸಾರಿಸುವ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ಹಿಜಾಬ್ ಧರಿಸದ ಕಾರಣ ನಮ್ಮ ದೇಶದಲ್ಲಿ ಅತ್ಯಾಚಾರದ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂದು ಅವರು ರವಿವಾರ ಸುದ್ದಿಸಂಸ್ಥೆಯೊಂದರ ಜೊತೆ ಮಾತಾಡುವಾಗ ಜಮೀರ್ ಹೇಳಿದ್ದರು. ಆದರೆ, ಸೋಮವಾರ ಅವರಿಗೆ ತಾನು ಹೇಳಿದ್ದು ತಪ್ಪು ಅಂತ ಜ್ಞಾನೋದಯವಾಗಿದೆ. ಆದರೆ ಹೇಳಿದ್ದು ಹೇಳಿಯಾಗಿದೆ, ಈಗ ಮಾಡೋದೇನು? ಮಾಧ್ಯಮದವರ ಮೇಲೆಯೇ ಗೂಬೆ ಕೂರಿಸಿದರಾಯ್ತು! ಹುಬ್ಬಳ್ಳಿಯಲ್ಲಿ ಜಮೀರ್ ಮಹಾನುಭಾವರು ಮಾಡಿದ್ದು ಅದನ್ನೇ. ನಾನು ಹೇಳಿದ್ದೇ ಒಂದು, ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿರುವುದು ಮತ್ತೊಂದು ಎಂದೇ ಅವರು ಮಾತು ಆರಂಭಿಸುತ್ತಾರೆ ಮತ್ತು ನಂತರ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದು ಹೇಗೆ ಅಂತ ಗೊತ್ತಾಗದೆ ತೊದಲತೊಡುಗುತ್ತಾರೆ.

ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ, ಕ್ಲಿಪ್ಪಿಂಗ್ ತೆಗೆದು ನೋಡಿ, ನಾನು ಹೇಳಿದ್ದು ಹಿಜಾಬ್ ಧರಿಸಿದರೆ, ಅದು ಮಹಿಳೆಯರಿಗೆ ಸೇಫ್ಟಿ. ಅದನ್ನು ಧರಿಸಿದರೆ, ಅವರ ಸೌಂದರ್ಯ ಬೇರೆಯವರಿಗೆ ಕಾಣಿವುದಿಲ್ಲ. ಕೆಟ್ಟ ದೃಷ್ಟಿ ಅವರ ಮೇಲೆ ಬೀಳುವುದಿಲ್ಲ. ಹಿಜಾಬ್ ಧರಿಸಿದರೆ ರೇಪ್ ಅಗಲ್ಲ ಅಂತ ಹೇಳಿಲ್ಲ. ಭಾರತದಲ್ಲಿ ಅತ್ಯಾಚಾರದ ಪ್ರಕರಣಗಳು ಜಾಸ್ತಿ ಅಗುತ್ತಿವೆ. ಹಾಗಾಗಿ ಮಹಿಳೆಯರು ಸುರಕ್ಷತೆಯ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಬೇಕು ಅಂತ ಹೇಳಿದ್ದೇನೆ ಅನ್ನುತ್ತಾರೆ ಗೊಂದಲಮೂರ್ತಿ ಜಮೀರ್ ಅಹ್ಮದ್!

ತಾನು ಏನು ಹೇಳಿದ್ದೇನೆ, ಏನು ಹೇಳುತ್ತಿದ್ದೇನೆ ಎನ್ನುವ ಸ್ಪಷ್ಟತೆಯೇ ಅವರಲ್ಲಿ ಇಲ್ಲ. ಅವರು ರವಿವಾರ ಹೇಳಿದ್ದಕ್ಕೂ ಸೋಮವಾರ ಹೇಳುತ್ತಿರುವುದಕ್ಕೂ ವ್ಯತ್ಯಾಸವೇ ಇಲ್ಲ. ಒಂದು ವ್ಯತ್ಯಾಸವನ್ನು ನಾವು ಗುರುತಿಸಬಹುದು. ರವಿವಾರ ಅವರು ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ಮಾತಾಡಿದ್ದರೆ ಸೋಮವಾರದ ಸಮಾಜಾಯಿಷಿಯನ್ನು ಕನ್ನಡದಲ್ಲಿ ನೀಡಿದ್ದಾರೆ!

ಇದನ್ನೂ ಓದಿ:   ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತೆ: ಜಮೀರ್ ಅಹ್ಮದ್ ​ಖಾನ್​ ವಿವಾದಾತ್ಮಕ ಹೇಳಿಕೆ