ಹುಬ್ಬಳ್ಳಿಯ ತಮ್ಮ ನೆಚ್ಚಿನ ಹೋಟೆಲ್ಗೆ ಪತ್ನಿ ಸಮೇತರಾಗಿ ಆಗಮಿಸಿ ಇಷ್ಟದ ತಿಂಡಿ ಸವಿದರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಜೋಶಿ ಅವರು ಪತ್ನಿಯೊಂದಿಗೆ ಒಂದು ಟೇಬಲ್ ಆರಿಸಿಕೊಂಡು ಕುಳಿತುಕೊಳ್ಳುತ್ತಿದ್ದಂತೆ ಬಿಸಿಬಿಸಿ ಪೂರಿ ದಂಪತಿಗಳಿಗೆ ಸರ್ವ್ ಮಾಡಲಾಗುತ್ತದೆ. ಸುತ್ತ ನೆರೆದಿರುವ ಜನರೊಂದಿಗೆ ಮಾತಾಡುತ್ತಾ ಜೋಶಿ ತಿಂಡಿ ತಿನ್ನುತ್ತಾರೆ.
ಸಂಸತ್ತಿನ ಅಧಿವೇಶನ ನಡೆಯುವಾಗ ಸದಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹಿಂದೆ ಕುಳಿತುಕೊಳ್ಳುವ ಧಾರವಾಡ ಲೋಕಸಭಾ ಸದಸ್ಯ ಮತ್ತು ಮೋದಿ ಅವರ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಪ್ರಲ್ಹಾದ್ ಜೋಶಿ ಅವರು ಮಂಗಳವಾರ ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ತಮ್ಮ ಪತ್ನಿಯ ಮುಂದೆ ಕೂತಿದ್ದರು! ಸಂಸತ್ತಿನ ಬಜೆಟ್ ಅಧಿವೇಶನ ಮುಗಿಸಿಕೊಂಡು ಸಚಿವರು ದೆಹಲಿಯಿಂದ ತಮ್ಮ ತವರೂರಿಗೆ ವಾಪಸ್ಸಾಗಿದ್ದಾರೆ. ಜನ ಸ್ವಂತ ಊರಿಗೆ ಹೋದಾಗ ತಮಗೆ ಇಷ್ಟವಾಗುವ ಕೆಲಸಗಳನ್ನು ಮಾಡಲು ತವಕಿಸುತ್ತಾರೆ. ಕೆಲವರು ತಮ್ಮ ಹೊಲಗದ್ದೆಗಳಿಗೆ ಹೋಗಿ ಕೆಲಸ ಮಾಡುತ್ತಾರೆ. ಬೇರೆ ಕೆಲವರು ತಾವು ಬಾಲ್ಯದಲ್ಲಿ ಈಜಲು ಹೋಗುತ್ತಿದ್ದ ತಮ್ಮೂರಿನ ಬಾವಿಗೆ ಹೋಗಿ ದೇಹ ದಣಿಯುವರೆಗೆ ಈಜುತ್ತಾರೆ. ಇನ್ನೂ ಕೆಲವರು ತಮ್ಮ ಬಂಧುಗಳ ನೆಂಟರಿಷ್ಟರ ಭೇಟಿಗೆ ತೆರಳುತ್ತಾರೆ.
ಅದರೆ ಸಚಿವ ಜೋಶಿಯವರು ಇದನ್ನು ಮಾಡಿದರು. ಹುಬ್ಬಳ್ಳಿಯಲ್ಲಿರುವ ಗುರುದತ್ ಹೋಟೆಲ್ ಅವರು ಹ್ಯಾಂಗ್ ಔಟ್ ಸ್ಥಳವಂತೆ. ಹಾಗಾಗಿ, ಅವರು ತಮ್ಮ ಪತ್ನಿ ಜ್ಯೋತಿ ಜೋಶಿಯವರನ್ನು ಕರೆದುಕೊಂಡು ಕಾರಲ್ಲಿ ಗುರುದತ್ ಹೋಟೆಲ್ಗೆ ದೌಡಾಯಿಸಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಈ ಹೋಟೆಲ್ ನಲ್ಲಿ ಅವರ ಫೇವರಿಟ್ ತಿಂಡಿ ಪೂರಿ-ಸಾಗು. ಹೋಟೆಲ್ ನವರಿಗೆ ಅದು ಚೆನ್ನಾಗಿ ಗೊತ್ತಿದೆ.
ಜೋಶಿ ಅವರು ಪತ್ನಿಯೊಂದಿಗೆ ಒಂದು ಟೇಬಲ್ ಆರಿಸಿಕೊಂಡು ಕುಳಿತುಕೊಳ್ಳುತ್ತಿದ್ದಂತೆ ಬಿಸಿಬಿಸಿ ಪೂರಿ ದಂಪತಿಗಳಿಗೆ ಸರ್ವ್ ಮಾಡಲಾಗುತ್ತದೆ. ಸುತ್ತ ನೆರೆದಿರುವ ಜನರೊಂದಿಗೆ ಮಾತಾಡುತ್ತಾ ಜೋಶಿ ತಿಂಡಿ ತಿನ್ನುತ್ತಾರೆ.
ಸತತ ನಾಲ್ಕನೇ ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಪ್ರಲ್ಹಾದ್ ಜೋಶಿ ಅವರು ಹೋಟೆಲ್ ಗೆ ತೆರಳುವ ವಿಷಯ ಅದರ ಮಾಲೀಕರಿಗೆ ಮೊದಲೇ ಗೊತ್ತಿತ್ತು ಅಂತ ಕಾಣುತ್ತೆ. ಸಚಿವರ ಕಾರು ಹೋಟೆಲ್ ಬಳಿ ಬರುತ್ತಿದ್ದಂತೆ ಪ್ರಾಯಶಃ ಮಾಲೀಕರಿರಬಹುದು-ಒಬ್ಬ ಮಹಿಳೆ ಹೊರಗಡೆ ಬಂದು ದಂಪತಿಯನ್ನು ಸ್ವಾಗತಿಸುತ್ತಾರೆ.
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!

