ನಾಳಿನ ಪ್ರಜೆಗಳಾಗಿರುವ ಮಕ್ಕಳಿಗೆ ಶಾಲೆಗಳಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವ ವಾತಾವರಣ ಸೃಷ್ಟಿಸಬೇಕು: ಪೇಜಾವರ ಶ್ರೀ ವಿಶ್ವಪ್ರಸನ್ನ ಶ್ರೀಪಾದರು
ವಿದ್ಯೆಗೆ ಹೊರತಾದ ವಿಷಯಗಳ ಕಡೆ ಮಕ್ಕಳ ಗಮನ ಹರಿಯದಂತೆ ಶಿಕ್ಷಣ ಸಂಸ್ಥೆಗಳು ಎಚ್ಚರವಹಿಸ ಬೇಕು ಎಂದು ಹೇಳಿದ ಶ್ರೀಗಳು ಅದಕ್ಕಾಗಿ ಕೇವಲ ಶಿಕ್ಷಣ ಸಂಸ್ಥೆಗಳು ಶ್ರಮವಹಿಸಿದರೆ ಸಾಲದು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಹ ಪ್ರಯತ್ನಿಸಬೇಕು ಎಂದರು.
ಇಂದಿನ ಮಕ್ಕಳ ನಾಳಿನ ಪ್ರಜೆಗಳಾಗಿರುವುದರಿಂದ ಶಾಲೆಗಳಲ್ಲಿ ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕಿರುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದರು (Sri Vishwa Prasanna Sripada) ಹೇಳಿದರು. ಸೋಮವಾರ ಬೆಳಗ್ಗೆ ಉಡುಪಿಯ (Udupi) ಟಿವಿ9 ವರದಿಗಾರರೊಂದಿಗೆ ಮಾತಾಡಿದ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಸದರಿ ಜಿಲ್ಲಾ ಕೇಂದ್ರದಿಂದ ಆರಂಭವಾದ ಹಿಜಾಬ್ ವಿವಾದದ (hijab row) ಇತರ ಆಯಾಮಗಳ ಬಗ್ಗೆ ಮಾತಾಡದೆ ವಿದ್ಯಾರ್ಥಿಗಳು ಮತ್ತು ಅವರ ಭವಿಷ್ಯದ ಬಗ್ಗೆ ಮಾತ್ರ ಚುಟುಕಾಗಿ ಅರ್ಥಗರ್ಭಿತವಾಗಿ ಮಾತಾಡಿದರು. ಜ್ಞಾನಾರ್ಜನೆಗೆ ಶಾಲೆಗಳಿಗೆ ಹೋಗುವ ಮಕ್ಕಳೇ ನಾಳೆ ಬೆಳೆದು ನಮ್ಮ ನಾಡಿನ ಉತ್ತಮ ಪ್ರಜೆಗಳು (citizens) ಆಗುತ್ತಾರೆ. ನಮಗೆಲ್ಲ ಅವರ ಭವಿಷ್ಯ ಮುಖ್ಯವಾಗಬೇಕು. ಅವರು ಉತ್ತಮವಾದ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಲು ನಾವು ಅವರಿಗೆ ನೆರವಾಗಬೇಕು. ಅವರ ಜ್ಞಾನದ ಭಂಡಾರ ಹೆಚ್ಚಾಗಲು ಪೂರಕವಾದ ವಾತಾವರಣವನ್ನು ಕಲ್ಪಿಸಬೇಕು ಎಂದ ಶ್ರೀಗಳು ಹೇಳಿದರು.
ವಿದ್ಯೆಗೆ ಹೊರತಾದ ವಿಷಯಗಳ ಕಡೆ ಮಕ್ಕಳ ಗಮನ ಹರಿಯದಂತೆ ಶಿಕ್ಷಣ ಸಂಸ್ಥೆಗಳು ಎಚ್ಚರವಹಿಸ ಬೇಕು ಎಂದು ಹೇಳಿದ ಶ್ರೀಗಳು ಅದಕ್ಕಾಗಿ ಕೇವಲ ಶಿಕ್ಷಣ ಸಂಸ್ಥೆಗಳು ಶ್ರಮವಹಿಸಿದರೆ ಸಾಲದು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಹ ಪ್ರಯತ್ನಿಸಬೇಕು ಎಂದರು. ದೊಂಬಿ, ಗಲಾಟೆಗೆ ಅವಕಾಶ ನೀಡಬಾರದು, ಶಾಂತಿಯುತ ಮತ್ತು ಸೌಹಾರ್ದಯುತ ಸಮಾಜವನ್ನು ನಿರ್ಮಿಸುವ ಅವಶ್ಯಕತೆಯಿದೆ ಅಂತ ಅವರು ಹೇಳಿದರು.
ಹಿಜಾಬ್-ಕೇಸರಿ ಶಾಲು-ನೀಲಿ ಶಾಲು ವಿವಾದ ಅತಿರೇಕಕ್ಕೆ ಹೋದ ಬಳಿಕ ಕಳೆದ ವಾರ ಶಾಲೆಗಳಿಗೆ ಕರ್ನಾಟಕ ಸರ್ಕಾರ ಸೋಮವಾರದಿಂದ ಅವುಗಳನ್ನು ಪುನರಾಂಭಿಸಿದೆ. ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ರಾಜ್ಯ ಹೈಕೋರ್ಟ್ ಅದನ್ನು ಮಂಗಳವಾರಕ್ಕೆ ಮುಂದೂಡಿದೆ.