ಸರ್ಕಾರ ಹಿಜಾಬ್ ಧರಿಸಲು ಅವಕಾಶ ನೀಡಿದರೆ ಏನೆಲ್ಲ ಆಗಬಹುದು ಅನ್ನೋದನ್ನು ಸಂಸದ ಪ್ರತಾಪ್ ಸಿಂಹ ಭವಿಷ್ಯ ನುಡಿದಿದ್ದಾರೆ!
ಅದಾದ ಮೇಲೆ ಪ್ರತಾಪ್ ಸಿಂಹ ಅವರು ರಾಜ್ಯ ಸರ್ಕಾರ ಸಮವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಿ ಎಂದು ಹೇಳುತ್ತಾರೆ. ಈ ವಿಚಾರ ನ್ಯಾಯಾಂಗದ ಸುಪರ್ದಿಯಲ್ಲಿದೆ ಮತ್ತು ರಾಜ್ಯದ ಉಚ್ಚ ನ್ಯಾಯಾಲಯ ಅದರ ಪರಾಮರ್ಶೆ ನಡೆಸುತ್ತಿದೆ. ಸ್ಥಿತಿ ಹಾಗಿರುವಾಗ ವಿಷಯದ ಬಗ್ಗೆ ಮಾತಾಡುವುದು ಉಚಿತವಲ್ಲ ನಮ್ಮ ನಾಯಕರಿಗೆ ಗೊತ್ತಿಲ್ಲದಿರುವುದು ಬೇಸರದ ಸಂಗತಿ.
ಹಿಜಾಬ್ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಬೆಳವಣಿಗೆಗಳು ಮಕ್ಕಳ ವಿದ್ಯಾಭ್ಯಾಸದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿರುವುದು ಒಂದೆಡೆಯಾದರೆ, ಅದರ ಕಾವಿನಲ್ಲಿ ಪಕ್ಷಾತೀತವಾಗಿ ರಾಜಕಾರಣಿಗಳು (politicians) ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಕನ್ನಡಿಗರಲ್ಲಿ ಹೇವರಿಕೆ ಹುಟ್ಟಿಸಿದೆ ಮಾರಾಯ್ರೇ. ಹೇವರಿಕೆ, ಹೇಸಿಗೆ, ಅಸಹ್ಯ ಭಾವ ಮೊದಲಾದ ಶಬ್ದಗಳು ಅವರ ಮಾತಾಡುತ್ತಿರುವ ಧಾಟಿ ಎದುರು ಬಹಳ ಚಿಕ್ಕವೆನಿಸುತ್ತಿವೆ. ಸಂಸದ ಪ್ರತಾಪ್ ಸಿಂಹ (Pratap Simha) ಅವರು ವಿಧಾಧ ಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾಗಿರುವ ಕಾಂಗ್ರೆಸ್ ನಾಯಕ ಯು ಟಿ ಖಾದರ್ (UT Khader) ಅವರನ್ನು ಉಳ್ಳಾಲದ ಮುಲ್ಲಾ, ಮೈಸೂರು ಇತಿಹಾಸದ (history) ಬಗ್ಗೆ ಜ್ಞಾನವಿಲ್ಲದವರು ಅಂತೆಲ್ಲ ಹೇಳುತ್ತಿದ್ದಾರೆ. ಖಾದರ್ ಅವರಿಗೆ ಇತಿಹಾಸ ಬಗ್ಗೆ ಇರುವ ಅಥವಾ ಇಲ್ಲದಿರುವ ಜ್ಞಾನದ ಬಗ್ಗೆ ಪ್ರತಾಪ್ ನೂರು ಪ್ರಶ್ನೆ ಕೇಳಲಿ ಯಾರದ್ದೂ ಆಭ್ಯಂತರವಿರೋದಿಲ್ಲ. ಆದರೆ ಆಡುವ ಭಾಷೆಯ ಮೇಲೂ ಸ್ವಲ್ಪ ಗಮನವಿರಲಿ. ಖಾದರ್ ಮತ್ತು ಪ್ರತಾಪ್ ಸಾರ್ವಜನಿಕ ಬದುಕಿನಲ್ಲಿರುವವರು. ಇಬ್ಬರಿಗೂ ಅಸಂಖ್ಯಾತ ಅಭಿಮಾನಿಗಳು ಮತ್ತು ಬೆಂಬಲಿಗರಿರುತ್ತಾರೆ. ಕೇವಲ ಖಾದರ್ ಮತ್ತ್ತು ಪ್ರತಾಪ ಮಾತ್ರ ಅಲ್ಲ; ನಮ್ಮ ಎಲ್ಲ ಧುರೀಣರು ತಮ್ಮ ಸ್ಥಾನದ ಘನತೆಗೆ ಧಕ್ಕೆಯಾಗದಂಥ ಭಾಷೆ ಬಳಸಲಿ ಅನ್ನೋದು ಕನ್ನಡಿಗರ ಅಪೇಕ್ಷೆ.
ಅದಾದ ಮೇಲೆ ಪ್ರತಾಪ್ ಸಿಂಹ ಅವರು ರಾಜ್ಯ ಸರ್ಕಾರ ಸಮವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಿ ಎಂದು ಹೇಳುತ್ತಾರೆ. ಈ ವಿಚಾರ ನ್ಯಾಯಾಂಗದ ಸುಪರ್ದಿಯಲ್ಲಿದೆ ಮತ್ತು ರಾಜ್ಯದ ಉಚ್ಚ ನ್ಯಾಯಾಲಯ ಅದರ ಪರಾಮರ್ಶೆ ನಡೆಸುತ್ತಿದೆ. ಸ್ಥಿತಿ ಹಾಗಿರುವಾಗ ವಿಷಯದ ಬಗ್ಗೆ ಮಾತಾಡುವುದು ಉಚಿತವಲ್ಲ ನಮ್ಮ ನಾಯಕರಿಗೆ ಗೊತ್ತಿಲ್ಲದಿರುವುದು ಬೇಸರದ ಸಂಗತಿ ಮಾರಾಯ್ರೇ.
ಸರ್ಕಾರ ಸಮವಸ್ತ್ರ ಸಂಹಿತೆಯನ್ನು ಜಾರಿಗೆ ತರದಿದ್ದರೆ ಏನೇನಾಗುತ್ತದೆ ಅಂತ ಪ್ರತಾಪ ಒಬ್ಬ ಜ್ಯೋತಿಷಿಯಂತೆ ಭವಿಷ್ಯ ನುಡಿಯುತ್ತಾರೆ. ಈಗ ಹಿಜಾಬ್ ಧರಿಸಲು ಅವಕಾಶ ಕೇಳುವವರು ನಾಳೆ ಬುರ್ಖಾ ಧರಿಸಿ ಬರಲು ಅನುಮತಿ ಕೇಳುತ್ತಾರಂತೆ. ಅಮೇಲೆ ಶುಕ್ರವಾರದಂದು ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ಕೇಳುತ್ತಾರೆ, ನಂತರ ನಮಾಜ್ ಮಾಡಲು ಶಾಲೆಯ ಅವರಣದಲ್ಲಿ ಒಂದು ಪ್ರತ್ಯೇಕ ಕೊಠಡಿ ಕಟ್ಟಿಸಿಕೊಡಿ ಅನ್ನುತ್ತಾರೆ ಮತ್ತು ಕೊನೆಗೆ ನಮ್ಮ ಸಂಖ್ಯೆ ಜಾಸ್ತಿಯಾಗಿದೆ, ಹಾಗಾಗಿ ದೇಶವನ್ನು ಇಬ್ಭಾಗಿಸಿ ನಮಗೊಂದು ಭಾಗ ಕೊಡಿ ಅಂತ ಕೇಳುತ್ತಾರಂತೆ,70 ವರ್ಷಗಳ ಹಿಂದೆ ಆಗಿದ್ದು ಇದೇ, ಅವರ ಒತ್ತಡಕ್ಕೆ ಮಣಿದು ದೇಶವನ್ನು ಮತ್ತೊಮ್ಮೆ ಎರಡು ಭಾಗ ಮಾಡುವುದು ಸಾಧ್ಯವಿಲ್ಲ ಎಂದು ಸಂಸದ ಪ್ರತಾಪ್ ಹೇಳುತ್ತಾರೆ!
ಹೇಗಿದೆ ನೋಡಿ ಅವರ ವಾದಸರಣಿ. ಇತಿಹಾಸದ ವಿದ್ಯಾರ್ಥಿಗಳು ಸಂಸದರ ವ್ಯಾಖ್ಯಾನಗಳಿಂದ ಇಂಪ್ರೆಸ್ ಅಗಿರಬಹುದು!
ಇದನ್ನೂ ಓದಿ: ಎಲ್ಲರೂ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ; ಪ್ರತಾಪ್‌ಸಿಂಹ ಸಮಸ್ಯೆ ಸೃಷ್ಟಿ ಮಾಡುತ್ತಾರೆ: ಯುಟಿ ಖಾದರ್ ಟೀಕೆ