ಶಾಸಕ ನಾಗನಗೌಡ ಕಂದ್ಕೂರ್ ವಿಧಾನ ಸೌಧ ಬಳಿ ಬೀಳುತ್ತಾರೆ, ಪಕ್ಕದಲ್ಲೇ ಮಾತಾಡುತ್ತ ನಿಂತಿದ್ದ ಬಿಜೆಪಿ ಧುರೀಣನಿಗೆ ಅದು ಗೊತ್ತೇ ಆಗುವುದಿಲ್ಲ!
ಶಾಸಕರು ನೆಲಕ್ಕೆ ಬೀಳುವ ವಿಧಾನ ಸಭೆಯ ಕೆಂಗಲ್ ಗೇಟ್ ಬಳಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಶಾಲಾ ಸಮವಸ್ತ್ರಗಳ ಬಗ್ಗೆ ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದಾರೆ. ಅವರು ಮಾತಿನಲ್ಲಿ ಎಷ್ಟು ಮಗ್ನರಾಗಿದ್ದಾರೆಂದರೆ, ಹಿಂಭಾಗದಲ್ಲಿ ನಡೆಯುವ ಸಂಗತಿ ಅವರ ಗಮನಕ್ಕೆ ಬರುವುದೇ ಇಲ್ಲ.
ಗುರುಮಠಕಲ (Gurmitkal) ಶಾಸಕ ನಾಗನಗೌಡ ಕಂದ್ಕೂರ್ (Nagangouda Kandkoor) ಅವರಿಗೆ ವಯಸ್ಸು ಜಾಸ್ತಿಯಾಗಿದೆಯೋ ಅಥವಾ ಯಾವುದಾದರೂ ಅನಾರೋಗ್ಯ ಅವರನ್ನು ಕಾಡುತ್ತಿದೆಯೋ ಗೊತ್ತಿಲ್ಲ ಮಾರಾಯ್ರೇ. ಅವರಿಗೆ ಒಂಟಿಯಾಗಿ ಮೆಟ್ಟಿಲು ಹತ್ತುವುದು ಸಹ ಸಾಧ್ಯವಾಗುತ್ತಿಲ್ಲ. ನಾಗನಗೌಡ ಕೊರೋನಾ ವೈರಸ್ ನಿಂದ ಸೋಂಕಿತರಾದ ಬಳಿಕ ಚೇತರಿಸಿಕೊಂಡು ಬಹಳ ದಿನಗಳಾಗಿವೆ. ಮುಂದಿನ ವಿಧಾನ ಸಭೆ ಚುನಾವಣೆಗೆ ಜೆಡಿ(ಎಸ್) (JDS) ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡ (HD Deve Gowda) ಅವರು ನಾಗನಗೌಡಗೆ ಪ್ರಾಯಶಃ ಟಿಕೆಟ್ ಕೊಡಲಾರರು. ಹಾಗಾಗೇ, ಅವರು ತಮ್ಮ ಮಗನಿಗೆ ಗುರುಮಠಕಲ ಕ್ಷೇತ್ರದಿಂದ ಟಿಕೆಟ್ ದಕ್ಕಿಸಿಕೊಳ್ಳುವ ಪ್ರಯತ್ನ ಮಾಡತ್ತಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕ್ಷೇತ್ರದಲ್ಲಿ ನಾಗನಗೌಡ ಅವರ ಮಗ ಈಗಾಗಲೇ ಸಕ್ರಿಯರಾಗಿದ್ದಾರೆ. ಓಕೆ ವಿಷಯಕ್ಕೆ ಬರೋಣ. ಸೋಮವಾರ ಆರಂಭವಾದ ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ಭಾಗಿಯಾಗಲು ವಿಧಾನ ಸೌಧಕ್ಕೆ ಆಗಮಿಸುವ ನಾಗನಗೌಡ ಮೆಟ್ಟಿಲು ಹತ್ತುವ ಸಂದರ್ಭದಲ್ಲಿ ಒಮ್ಮೆಯಲ್ಲ ಎರಡು ಬಾರಿ ಜಾರುತ್ತಾರೆ. ಎರಡನೇ ಸಲ ನೆಲಕ್ಕೆ ಬೀಳುವುದು ವಿಡಿಯೋನಲ್ಲಿ ಕಾಣುತ್ತದೆ.
ಕೈಯಲ್ಲಿ ಫೈಲು ಹಿಡಿದಿರುವ ಒಬ್ಬ ವ್ಯಕ್ತಿ ಮತ್ತು ಅಲ್ಲಿಯೇ ನಿಂತಿದ್ದ ಒಬ್ಬ ಕಾನ್ಸ್ಟೇಬಲ್ ಕೂಡಲೇ ನಾಗನಗೌಡರ ನೆರವಿಗೆ ಧಾವಿಸುತ್ತಾರೆ. ಅವರಿಬ್ಬರು ಶಾಸಕರನ್ನು ಮೇಲೆತ್ತಿ ಮೆಟ್ಟಿಲು ಹತ್ತಲು ಸಹಾಯ ಮಾಡುತ್ತಾರೆ.
ಈ ವಿಡಿಯೋದ ಮತ್ತೊಂದು ಪ್ರಮುಖ ಅಂಶವನ್ನು ನೀವು ಗಮನಿಸಿ. ಶಾಸಕರು ನೆಲಕ್ಕೆ ಬೀಳುವ ವಿಧಾನ ಸಭೆಯ ಕೆಂಗಲ್ ಗೇಟ್ ಬಳಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಶಾಲಾ ಸಮವಸ್ತ್ರಗಳ ಬಗ್ಗೆ ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದಾರೆ. ಅವರು ಮಾತಿನಲ್ಲಿ ಎಷ್ಟು ಮಗ್ನರಾಗಿದ್ದಾರೆಂದರೆ, ಹಿಂಭಾಗದಲ್ಲಿ ನಡೆಯುವ ಸಂಗತಿ ಅವರ ಗಮನಕ್ಕೆ ಬರುವುದೇ ಇಲ್ಲ.
ನಾಗನಗೌಡ ಕೆಳಗೆ ಬಿದ್ದು, ಬೇರೆಯವರ ಸಹಾಯದಿಂದ ಮೇಲೆದ್ದು ಮೆಟ್ಟಿಲು ಹತ್ತಿ ವಿಧಾನ ಸಭೆಯೊಳಗೆ ಹೋದರೂ ರವಿ ಕುಮಾರ್ ಒಮ್ಮೆಯೂ ತಿರುಗಿ ನೋಡುವುದಿಲ್ಲ!
ಇದನ್ನೂ ಓದಿ: ಚಂಪಾ ಅವರಿಂದ ಬಹಳ ಪ್ರಭಾವಿತನಾಗಿದ್ದೆ, ಕೇವಲ ಅವರನ್ನು ನೋಡುವ ಉದ್ದೇಶದಿಂದ ಒಮ್ಮೆ ಧಾರವಾಡಕ್ಕೆ ಹೋಗಿದ್ದೆ: ಸಿದ್ದರಾಮಯ್ಯ