ಹತ್ತು ವರ್ಷಗಳ ಹಿಂದೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ವೃದ್ಧ ದಂಪತಿ ನ್ಯಾಯಾಧೀಶರ ಕೌನ್ಸೆಲಿಂಗ್ ಬಳಿಕ ನಿರ್ಧಾರ ಬದಲಿಸಿಬಿಟ್ಟರು!
ನ್ಯಾಯಾಧೀಶರಾದ ಕೆ ಬಿ ಗೀತಾ ಅವರು ಅದೆಷ್ಟು ಅರ್ಥಗರ್ಭಿತವಾಗಿ, ಮಾರ್ಮಿಕವಾಗಿ ಹಿರಿಯ ದಂಪತಿಗೆ ಕೌನ್ಸೆಲಿಂಗ್ ನಡೆಸಿದರೆಂದರೆ, ಅವರಿಬ್ಬರು ಪುನಃ ಒಂದಾಗಿ ಬಾಳಲು ನಿರ್ಧರಿಸಿಬಿಟ್ಟರು!
ತುಮಕೂರಿನ ನ್ಯಾಯಾಲಯದಲ್ಲಿ ಕಂಡ ಅಪರೂಪದ ಹಾಗೂ ಹೃದಯಸ್ಪರ್ಶಿ ಸನ್ನಿವೇಶ ಇದು. ಇಲ್ಲಿ ಕಾಣುತ್ತಿದ್ದಾರಲ್ಲ ವೃದ್ಧ ದಂಪತಿಗಳು, ಅಸಲಿಗೆ 10 ವರ್ಷಗಳಷ್ಟು ಹಿಂದೆಯೇ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಬೇರ್ಪಟ್ಟಿದ್ದರು. ಆದರೆ, ನ್ಯಾಯಾಲಯದಿಂದ ಅಧಿಕೃತವಾಗಿ ಡಿವೋರ್ಸ್ ಸಿಕ್ಕಿರಲಿಲ್ಲ. ಕೌಟುಂಬಿಕ ನ್ಯಾಯಾಲಯದಲ್ಲಿ ಮಂಗಳವಾರ ಅವರ ಅರ್ಜಿ ವಿಚಾರಣೆಗೆ ಬಂದಾಗ ನ್ಯಾಯಾಧೀಶರಾದ ಕೆ ಬಿ ಗೀತಾ ಅವರು ಅದೆಷ್ಟು ಅರ್ಥಗರ್ಭಿತವಾಗಿ, ಮಾರ್ಮಿಕವಾಗಿ ಹಿರಿಯ ದಂಪತಿಗಳಿಗೆ ಕೌನ್ಸೆಲಿಂಗ್ ನಡೆಸಿದರೆಂದರೆ, ಅವರಿಬ್ಬರು ಪುನಃ ಒಂದಾಗಿ ಬಾಳಲು ನಿರ್ಧರಿಸಿಬಿಟ್ಟರು! ಅವರ ಹಾಗೆಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಇನ್ನೂ 4 ದಂಪತಿ ಒಂದಾಗಿ ಬಾಳುವ ನಿರ್ಧಾರಕ್ಕೆ ಬಂದರು. ನ್ಯಾಯಾಧೀಶರು, ವಕೀಲರು ಮತ್ತು ಎಲ್ಲ ದಂಪತಿಗಳಿಗೆ ನಮ್ಮದೊಂದು ಸಲಾಂ!
Published on: Nov 16, 2022 10:05 AM
