ದಾವಣಗೆರೆಯಲ್ಲಿ ಬುರ್ಖಾ ಧರಿಸಿ ಓಡಾಡುತ್ತಿದ್ದ ಯುವಕನಿಗೆ ಧರ್ಮದೇಟು!

ದಾವಣಗೆರೆಯಲ್ಲಿ ಬುರ್ಖಾ ಧರಿಸಿ ಓಡಾಡುತ್ತಿದ್ದ ಯುವಕನಿಗೆ ಧರ್ಮದೇಟು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 15, 2022 | 6:58 PM

ಯುವಕ ಮುಸ್ಲಿಂ ಮಹಿಳೆಯರ ಹಾಗೆ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ತಿರುಗಾಡುವಾಗ ಜನ ಗಮನಿಸಿ ಧರ್ಮದೇಟು ನೀಡಿದ್ದಾರೆ.

ದಾವಣಗೆರೆ: ಇವನೊಬ್ಬ ವಿಚಿತ್ರ ವ್ಯಕ್ತಿ ಮಾರಾಯ್ರೇ. ದಾವಣಗೆರೆಯ (Davanagere) ಆಜಾದ್ ಮತ್ತು ಬಾಷಾ ನಗರ ಪ್ರದೇಶಗಳಲ್ಲಿ ಇವನು ಮುಸ್ಲಿಂ (Muslim) ಮಹಿಳೆಯರ ಹಾಗೆ ಬುರ್ಖಾ (burka) ಧರಿಸಿ ಅನುಮಾನಾಸ್ಪದವಾಗಿ ತಿರುಗಾಡುವಾಗ ಜನ ಗಮನಿಸಿ ಧರ್ಮದೇಟು ನೀಡಿದ್ದಾರೆ. ಯಾಕೆ ಹಾಗೆ ಮಾಡಿದ್ದು ಅಂತ ಕೇಳಿದರೆ ಹೊಲದಲ್ಲಿ ಬೆದರುಬೊಂಬೆಯಾಗಿ ಬಳಸಲು ಬುರ್ಖಾ ಖರೀದಿಸಿದ್ದೆ ಎಂದು ಹೇಳುತ್ತಾನೆ. ಜನ ಜೋರು ಮಾಡಿದಾಗ ‘ತಪ್ಪಾಯ್ತು ಅಣ್ಣಾ ಬಿಟ್ಬಿಡಿ’ ಅನ್ನುತ್ತಾನೆ.