Video: ಓಡಿ ಬಂದು ರೈಲು ಹತ್ತುವ ಭರದಲ್ಲಿ ಬಾಗಿಲಲ್ಲಿ ನಿಂತಿದ್ದ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ

Updated on: May 20, 2025 | 1:00 PM

ಓಡಿ ಬಂದು ರೈಲು ಹತ್ತುವ ಭರದಲ್ಲಿ ವ್ಯಕ್ತಿಯೊಬ್ಬರು ಬಾಗಿಲ ಬಳಿ ನಿಂತಿದ್ದ ಪ್ರಯಾಣಿಕನನ್ನು ಕೆಳಗೆ ಬೀಳಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ರೈಲು ಹೊರಟ ಮೇಲೆ ಓಡಿ ಹೋಗಿ ಹತ್ತುವಾಗ ಉಂಟಾಗುವ ಅಪಾಯಗಳ ಕುರಿತು ಹೊಸ ಕಳವಳವನ್ನು ಸೃಷ್ಟಿ ಮಾಡಿದೆ. ವೃದ್ಧರೊಬ್ಬರು ರೈಲು ಹತ್ತಲು ಪ್ರಯತ್ನಿಸುವಾಗ ಬೀಳುವುದನ್ನು ಕಾಣಬಹುದು ಜತೆಗೆ ಮತ್ತೊಬ್ಬ ಪ್ರಯಾಣಿಕನನ್ನು ಕೂಡ ಎಳೆದು ಬೀಳಿಸಿದ್ದಾರೆ.

ದಾವಣಗೆರೆ, ಮೇ 20: ಓಡಿ ಬಂದು ರೈಲು ಹತ್ತುವ ಭರದಲ್ಲಿ ವ್ಯಕ್ತಿಯೊಬ್ಬರು ಬಾಗಿಲ ಬಳಿ ನಿಂತಿದ್ದ ಪ್ರಯಾಣಿಕನನ್ನು ಕೆಳಗೆ ಬೀಳಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ರೈಲು ಹೊರಟ ಮೇಲೆ ಓಡಿ ಹೋಗಿ ಹತ್ತುವಾಗ ಉಂಟಾಗುವ ಅಪಾಯಗಳ ಕುರಿತು ಹೊಸ ಕಳವಳವನ್ನು ಸೃಷ್ಟಿ ಮಾಡಿದೆ. ವೃದ್ಧರೊಬ್ಬರು ರೈಲು ಹತ್ತಲು ಪ್ರಯತ್ನಿಸುವಾಗ ಬೀಳುವುದನ್ನು ಕಾಣಬಹುದು ಜತೆಗೆ ಮತ್ತೊಬ್ಬ ಪ್ರಯಾಣಿಕನನ್ನು ಕೂಡ ಎಳೆದು ಬೀಳಿಸಿದ್ದಾರೆ.

ಆ ಸಮಯದಲ್ಲಿ ರೈಲಿನ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದ ವ್ಲಾಗರ್, ಆ ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಆ ಕ್ಷಣವನ್ನು ಭಯಾನಕ ಮತ್ತು ಹೃದಯ ವಿದ್ರಾವಕ ಎಂದು ವಿವರಿಸಿದ್ದಾರೆ.ದಾವಣಗೆರೆಯಲ್ಲಿ ಚಲಿಸುವ ರೈಲಿನ ಚಿತ್ರೀಕರಣ ಮಾಡುವಾಗ,ನಾನು ಎಂದಿಗೂ ಮರೆಯಲಾಗದ ಒಂದು ಘಟನೆಗೆ ಸಾಕ್ಷಿಯಾದೆ.

ನನ್ನ ಕಣ್ಣೆದುರೇ ಒಬ್ಬ ವ್ಯಕ್ತಿ ರೈಲಿನಿಂದ ಬಿದ್ದಿದ್ದಾರೆ. ಈ ಘಟನೆಯು ಭಾರತದಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಸವಾಲುಗಳತ್ತ ಗಮನ ಸೆಳೆದಿದೆ. ಪ್ರಯಾಣಿಕರು ರೈಲುಗಳು ಹೊರಟಿರುವಾಗ ಹತ್ತುವುದನ್ನು ತಪ್ಪಿಸಿ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಗರೂಕರಾಗಿರಬೇಕು ಎಂದು ರೈಲ್ವೆ ಇಲಾಖೆಯು ಸದಾ ಎಚ್ಚರಿಕೆ ನೀಡುತ್ತಲೇ ಇರುತ್ತದೆ ಎಂದು ಬರೆದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ