ಎದುರಗಡೆ ಆನೆ, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಸಫಾರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಕಾಡಿನ ಮಧ್ಯೆ ಸಫಾರಿ ಹೋಗುತ್ತಿದ್ದರೆ ಅದರ ಮಜಾನೇ ಬೇರೆ. ಆದರೆ, ಸಫಾರಿ ವೇಳೆ ಅದೆಷ್ಟೊ ವೇಳೆ ಪ್ರಾಣಿಗಳು ದಾಳಿ ಮಾಡಿವೆ. ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ದಮ್ಮನಕಟ್ಟೆ ಸಫಾರಿಗೆ ತೆರಳಿದ ವೇಳೆ ಪ್ರವಾಸಿಗರಿಗೆ ಶಾಕ್ ಕಾದಿತ್ತು.
ಮೈಸೂರು, ಜುಲೈ 07: ಸಫಾರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಕಾಡಿನ ಮಧ್ಯೆ ಸಫಾರಿ ಹೋಗುತ್ತಿದ್ದರೆ ಅದರ ಮಜಾನೇ ಬೇರೆ. ಸಫಾರಿ ಮಾಡುತ್ತಿರುವಾಗ ಪ್ರಾಣಿಗಳು ಕಂಡರಂತೂ ಪೋಟೋ, ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವವರೆಗೂ ಸಮಾಧಾನ ಆಗಲ್ಲ. ಆದರೆ, ಸಫಾರಿ ವೇಳೆ ಪ್ರಾಣಿಗಳು ಅಟ್ಯಾಕ್ ಮಾಡಿದರೆ ಏನು ಗತಿ? ಹೌದು, ಸಫಾರಿ ವೇಳೆ ಅದೆಷ್ಟೋ ವೇಳೆ ಪ್ರಾಣಿಗಳು ದಾಳಿ ಮಾಡಿವೆ. ಇದೇರೀತಿ, ಹೆಚ್.ಡಿ ಕೋಟೆ (HD Kote) ತಾಲೂಕಿನ ದಮ್ಮನಕಟ್ಟೆ (Dumannakatte) ಸಫಾರಿಗೆ (Safari) ತೆರಳಿದ ವೇಳೆ ಆನೆ ಆಟ್ಯಾಕ್ ಮಾಡಿದೆ, ಮತ್ತೊಂದು ಕಡೆ ಎರಡೆರಡು ಹುಲಿಗಳ ದರ್ಶನವಾಗಿದೆ. ಪ್ರವಾಸಿಗರು ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಸಫಾರಿಗೆ ತೆರಳಿದರು. ಈ ವೇಳೆ ಟೆಂಪಲ್ ಟ್ಯಾಂಕ್ ಬಳಿ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ. ಚಾಲಕ ಒಂಟಿ ಸಲಗ ಕಂಡು ಸಫಾರಿ ವಾಹನ ನಿಲ್ಲಿಸಿದ್ದಾನೆ. ಈ ವೇಳೆ ಗಜರಾಜ ಏಕಾಏಕಿ ಆಟ್ಯಾಕ್ ಮಾಡಿದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಇದೇ ವೇಳೆ ಎರಡು ಹುಲಿಗಳ ದರ್ಶನ ಕೂಡ ಆಗಿದೆ.