AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ

ಕೊಪ್ಪಳ: ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ

ಸಂಜಯ್ಯಾ ಚಿಕ್ಕಮಠ
| Updated By: ವಿವೇಕ ಬಿರಾದಾರ|

Updated on: Jul 07, 2024 | 9:26 AM

Share

ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಶರಣಬಸಪ್ಪ ತೋಂಡಿಹಾಳ ಎಂಬುವರು 25 ಕಿಲೋ ತೂಕದ ಅಕ್ಕಿ ಮೂಟೆ ಹೊತ್ತು ಬರೋಬ್ಬರಿ 200 ಕಿಮೀ ಪಾದಯಾತ್ರೆ ಮೂಲಕ ಮಂತ್ರಾಲಯಕ್ಕೆ ತಲುಪಿದ್ದಾರೆ. ಶ್ರೀಗುರು ರಾಯರ ದರ್ಶನ ಪಡೆದು ಪುನೀತರಾಗಿದ್ದಾರೆ.

ಕೊಪ್ಪಳ, ಜುಲೈ 07: ಸಕಲ ಭಕ್ತ ಜನರಿಗೆ ಕಲ್ಪವೃಕ್ಷ ದಂತಿರುವವರು ಹಾಗೂ ಸಕಲ ಇಷ್ಟಾರ್ಥವನ್ನು ನೀಡುವ ಕಾಮಧೇನುವಿನ ಸ್ವರೂಪದಂತಿರುವವರು ಪೂಜ್ಯರಾದ ಶ್ರೀ ಗುರುರಾಘವೇಂದ್ರರಾಯರು. ಕಲಿಯುಗದ ಕಾಮಧೇನು ಎಂದೇ ಸದೃಶರಾದ ಮತ್ತು ಪ್ರಹ್ಲಾದ ರಾಜರ ಅವತಾರ ಪುರುಷ ಮಂತ್ರಾಲಯದ ಶ್ರೀಗುರು ರಾಘವೇಂದ್ರ ಸ್ವಾಮಿಗಳು (Raghavendra Swamy). ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavati) ಪಟ್ಟಣದ ಶರಣಬಸಪ್ಪ ತೋಂಡಿಹಾಳ ಎಂಬುವರು 25 ಕಿಲೋ ತೂಕದ ಅಕ್ಕಿ ಮೂಟೆ (Rice Bag) ಹೊತ್ತು ಬರೋಬ್ಬರಿ 200 ಕಿಮೀ ಪಾದಯಾತ್ರೆ (Padayatra) ಮೂಲಕ ಮಂತ್ರಾಲಯಕ್ಕೆ ತಲುಪಿದ್ದಾರೆ. ಶ್ರೀಗುರು ರಾಯರ ದರ್ಶನ ಪಡೆದು ಪುನೀತರಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಆರ್ಯವೈಶ್ಯ ಸಮಾಜ ಮತ್ತು ನವವೃಂದಾವನ ಭಜನಾ ಮಂಡಳಿಯಿಂದ ಮಂತ್ರಾಲಯದವರೆಗು ಪಾದಯಾತ್ರೆ ಆಯೋಜಿಸಲಾಗಿತ್ತು. ಈ ತಂಡದೊಂದಿಗೆ ಶರಣಬಸಪ್ಪ ಅವರು ಐದು ದಿನಗಳ ಕಾಲ ಪಾದಯಾತ್ರೆ ಮೂಲಕ ಮಂತ್ರಾಲಯಕ್ಕೆ ತೆರಳಿದ್ದಾರೆ. ಈ ಪಾದಯಾತ್ರೆಯಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು.

ಇದನ್ನೂ ನೋಡಿ: ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ