ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ

ಸಫಾರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಕಾಡಿನ ಮಧ್ಯೆ ಸಫಾರಿ ಹೋಗುತ್ತಿದ್ದರೆ ಅದರ ಮಜಾನೇ ಬೇರೆ. ಆದರೆ, ಸಫಾರಿ ವೇಳೆ ಅದೆಷ್ಟೊ ವೇಳೆ ಪ್ರಾಣಿಗಳು ದಾಳಿ ಮಾಡಿವೆ. ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ದಮ್ಮನಕಟ್ಟೆ ಸಫಾರಿಗೆ ತೆರಳಿದ ವೇಳೆ ಪ್ರವಾಸಿಗರಿಗೆ ಶಾಕ್​ ಕಾದಿತ್ತು.

ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
| Updated By: ವಿವೇಕ ಬಿರಾದಾರ

Updated on: Jul 07, 2024 | 8:23 AM

ಮೈಸೂರು, ಜುಲೈ 07: ಸಫಾರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಕಾಡಿನ ಮಧ್ಯೆ ಸಫಾರಿ ಹೋಗುತ್ತಿದ್ದರೆ ಅದರ ಮಜಾನೇ ಬೇರೆ. ಸಫಾರಿ ಮಾಡುತ್ತಿರುವಾಗ ಪ್ರಾಣಿಗಳು ಕಂಡರಂತೂ ಪೋಟೋ, ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವವರೆಗೂ ಸಮಾಧಾನ ಆಗಲ್ಲ. ಆದರೆ, ಸಫಾರಿ ವೇಳೆ ಪ್ರಾಣಿಗಳು ಅಟ್ಯಾಕ್​ ಮಾಡಿದರೆ ಏನು ಗತಿ? ಹೌದು, ಸಫಾರಿ ವೇಳೆ ಅದೆಷ್ಟೋ ವೇಳೆ ಪ್ರಾಣಿಗಳು ದಾಳಿ ಮಾಡಿವೆ. ಇದೇರೀತಿ, ಹೆಚ್.ಡಿ ಕೋಟೆ (HD Kote) ತಾಲೂಕಿನ ದಮ್ಮನಕಟ್ಟೆ (Dumannakatte) ಸಫಾರಿಗೆ (Safari) ತೆರಳಿದ ವೇಳೆ ಆನೆ ಆಟ್ಯಾಕ್ ಮಾಡಿದೆ, ಮತ್ತೊಂದು ಕಡೆ ಎರಡೆರಡು ಹುಲಿಗಳ ದರ್ಶನವಾಗಿದೆ. ಪ್ರವಾಸಿಗರು ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಸಫಾರಿಗೆ ತೆರಳಿದರು. ಈ ವೇಳೆ ಟೆಂಪಲ್‌ ಟ್ಯಾಂಕ್ ಬಳಿ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ. ಚಾಲಕ ಒಂಟಿ‌ ಸಲಗ ಕಂಡು ಸಫಾರಿ ವಾಹನ ನಿಲ್ಲಿಸಿದ್ದಾನೆ. ಈ ವೇಳೆ ಗಜರಾಜ ಏಕಾಏಕಿ ಆಟ್ಯಾಕ್ ಮಾಡಿದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಇದೇ ವೇಳೆ ಎರಡು ಹುಲಿಗಳ ದರ್ಶನ ಕೂಡ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us
ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ಅಶೋಕ್ , ಅಶ್ವಥ್ ಅನುಸರಿಸಿದ ವಿಧಾನ ಇದು!
ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ಅಶೋಕ್ , ಅಶ್ವಥ್ ಅನುಸರಿಸಿದ ವಿಧಾನ ಇದು!
ಶಾಲಾ ಮಕ್ಕಳೊಂದಿಗೆ ಮೆಟ್ಟಿಲ ಮೇಲೆ ಕುಳಿತು ಉಪಹಾರ ಸೇವಿಸಿದ ಸಂತೋಷ ಲಾಡ್
ಶಾಲಾ ಮಕ್ಕಳೊಂದಿಗೆ ಮೆಟ್ಟಿಲ ಮೇಲೆ ಕುಳಿತು ಉಪಹಾರ ಸೇವಿಸಿದ ಸಂತೋಷ ಲಾಡ್
ಯಡಿಯೂರಪ್ಪ, ವಿಜಯೇಂದ್ರ ಸತ್ಯ ಹರಿಶ್ಚಂದ್ರನ ವಂಶಸ್ಥರೇ? ಮೊಹಮ್ಮದ್ ನಲಪಾಡ್
ಯಡಿಯೂರಪ್ಪ, ವಿಜಯೇಂದ್ರ ಸತ್ಯ ಹರಿಶ್ಚಂದ್ರನ ವಂಶಸ್ಥರೇ? ಮೊಹಮ್ಮದ್ ನಲಪಾಡ್
ಮುಡಾ ಹಗರಣ ಬಿಜೆಪಿಯ ಸೃಷ್ಟಿ, ಅಧಿವೇಶನದಲ್ಲಿ ಉತ್ತರಿಸಲು ರೆಡಿ; ಶಿವಕುಮಾರ್
ಮುಡಾ ಹಗರಣ ಬಿಜೆಪಿಯ ಸೃಷ್ಟಿ, ಅಧಿವೇಶನದಲ್ಲಿ ಉತ್ತರಿಸಲು ರೆಡಿ; ಶಿವಕುಮಾರ್
ಲೇಟೆಸ್ಟ್​ ಗ್ಯಾಲಕ್ಸಿ ಫೋಲ್ಡ್​ ಫೋನ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಲೇಟೆಸ್ಟ್​ ಗ್ಯಾಲಕ್ಸಿ ಫೋಲ್ಡ್​ ಫೋನ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಮಂಗಳೂರು: ಸಾಕು ನಾಯಿಯನ್ನ ಹೊತ್ತೊಯ್ದ ಚಿರತೆ; ವಿಡಿಯೋ ಸೆರೆ
ಮಂಗಳೂರು: ಸಾಕು ನಾಯಿಯನ್ನ ಹೊತ್ತೊಯ್ದ ಚಿರತೆ; ವಿಡಿಯೋ ಸೆರೆ
ತುಮಕೂರಿನ ಅಂಗನವಾಡಿಯಲ್ಲಿ ಕುಕ್ಕರ್ ಸಿಡಿತ: ತಪ್ಪಿದ ಭಾರೀ ಅನಾಹುತ
ತುಮಕೂರಿನ ಅಂಗನವಾಡಿಯಲ್ಲಿ ಕುಕ್ಕರ್ ಸಿಡಿತ: ತಪ್ಪಿದ ಭಾರೀ ಅನಾಹುತ
ಮಜಾ ಟಾಕೀಸ್​​ನಿಂದ ಅಪರ್ಣಾ ಕರೀಯರ್​ನಲ್ಲಿ ಭಾರೀ ಬದಲಾವಣೆ: ಇಂದ್ರಜಿತ್
ಮಜಾ ಟಾಕೀಸ್​​ನಿಂದ ಅಪರ್ಣಾ ಕರೀಯರ್​ನಲ್ಲಿ ಭಾರೀ ಬದಲಾವಣೆ: ಇಂದ್ರಜಿತ್
‘ನಮ್ಮ ಮೆಟ್ರೋ ಇರುವ ತನಕ ಅಪರ್ಣಾ ಧ್ವನಿ ಇರಬೇಕು’: ಸೃಜನ್​ ಲೋಕೇಶ್​ ಮನವಿ
‘ನಮ್ಮ ಮೆಟ್ರೋ ಇರುವ ತನಕ ಅಪರ್ಣಾ ಧ್ವನಿ ಇರಬೇಕು’: ಸೃಜನ್​ ಲೋಕೇಶ್​ ಮನವಿ
ಮಗನ ಮದುವೆಯ ಶುಭ ಸಂದರ್ಭದಲ್ಲಿ ವಾರಣಾಸಿಗೆ ಗೌರವ ಸಲ್ಲಿಸಿದ ನೀತಾ ಅಂಬಾನಿ
ಮಗನ ಮದುವೆಯ ಶುಭ ಸಂದರ್ಭದಲ್ಲಿ ವಾರಣಾಸಿಗೆ ಗೌರವ ಸಲ್ಲಿಸಿದ ನೀತಾ ಅಂಬಾನಿ