ಹಾಸನ ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆಗಳ ಉಪಟಳ: ಶಾಸಕ ಹೆಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ

Updated By: ಗಂಗಾಧರ​ ಬ. ಸಾಬೋಜಿ

Updated on: May 16, 2022 | 11:13 AM

ಜಿಲ್ಲೆಯ ಹನೂರು ತಾಲೋಕು ಉಯಿಲನತ್ತ ಸುತ್ತಮುತ್ತ ಬೆಳ್ಳಂಬೆಳಿಗ್ಗೆ ಜಮೀನಿಗೆ ಕಾಡಾನೆಗಳು ಲಗ್ಗೆಯಿಟ್ಟಿವೆ. ಮೇವನ್ನರಸಿ ಬಂದ ಆನೆಗಳಿಂದ ರೈತರ ಬೆಳೆ ಹಾನಿ. ಎರಡು ಎಕರೆ ಮುಸುಕಿನ ಜೋಳ ತಿಂದು ಹಾಕಿರುವ ಕಾಡಾನೆಗಳು.

ಹಾಸನ : ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದೆ. ಬೆಳ್ಳಂಬೆಳಿಗ್ಗೆ ಗ್ರಾಮಗಳ ಒಳಗೆ ಒಂಟಿ ಸಲಗಗಳು (Elephant) ಎಂಟ್ರಿ ಕೊಟ್ಟಿವೆ. ಸಕಲೇಶಪುರ ತಾಲ್ಲೂಕಿನ ಕಿರುಹುಣಸೆ ಸರ್ಕಲ್ ಹಾಗೂ ವಡೂರು ಗ್ರಾಮದಲ್ಲಿ ಗಜರಾಜ ಹಾದು ಹೋಗಿದ್ದು, ಕಾಡಾನೆ ಕಂಡು ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಕಾಡಾನೆ ರಸ್ತೆಯಲ್ಲಿ ಎದುರು ಬರುತ್ತಿದ್ದಂತೆ ಬೈಕ್ ನಿಲ್ಲಿಸಿ ಸವಾರ ಓಡಿ ಹೋಗಿದ್ದಾನೆ. ಎರಡು ಸಲಗಗಳು ಗ್ರಾಮದೊಳಗೆ ಸಂಚಾರ ಮಾಡುವ ವಿಡಿಯೋ ವೈರಲ್ ಕೂಡ ಆಗಿದೆ. ಇಂದು ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಒತ್ತಾಯಿಸಿ ಶಾಸಕ‌ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇನ್ನೊಂದೆಡೆ ಕಾಡಾನೆಗಳ ಇರುವ ಮಾಹಿತಿ ಕುರಿತು ಮೈಕ್ ಮೂಲಕ ಅನೌನ್ಸ್ ಮಾಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ, ಮಠಸಾಗರ, ಟಾಟಾ ಎಸ್ಟೇಟ್ ಬಳಿ ಕಾಡಾನೆಗಳಿದ್ದು ಜನರು ಸುರಕ್ಷಿತವಾಗಿ ಹಾಗೂ ಎಚ್ಚರಿಕೆಯಿಂದ ಓಡಾಡುವಂತೆ ಸೂಚನೆ ನೀಡಲಾಗಿದೆ.

ಚಾಮರಾಜನಗರ: ಜಿಲ್ಲೆಯ ಹನೂರು ತಾಲೋಕು ಉಯಿಲನತ್ತ ಸುತ್ತಮುತ್ತ ಬೆಳ್ಳಂಬೆಳಿಗ್ಗೆ ಜಮೀನಿಗೆ ಕಾಡಾನೆಗಳು ಲಗ್ಗೆಯಿಟ್ಟಿವೆ. ಮೇವನ್ನರಸಿ ಬಂದ ಆನೆಗಳಿಂದ ರೈತರ ಬೆಳೆ ಹಾನಿ. ಎರಡು ಎಕರೆ ಮುಸುಕಿನ ಜೋಳ ತಿಂದು ಹಾಕಿರುವ ಕಾಡಾನೆಗಳು. ಪಿ.ಜಿ.ಪಾಳ್ಯ ಅರಣ್ಯವಲಯ ವ್ಯಾಪ್ತಿಯ ಉಯಿಲನತ್ತ ಮಹದೇಶ್ವರ ವನ್ಯಧಾಮದಿಂದ ಕಾಡಾನೆಗಳು ಬಂದಿವೆ. ಅರಣ್ಯ ಸಿಬ್ಬಂದಿಯಿಂದ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಮಾಡಲಾಗಿದೆ.

YouTube video player
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.