ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ

Updated By: ಗಂಗಾಧರ​ ಬ. ಸಾಬೋಜಿ

Updated on: Jul 26, 2025 | 1:14 PM

ಬನ್ನೇರುಘಟ್ಟ ಜೈವಿಕ ಉದ್ಯಾನದ ನಾಲ್ಕು ಆನೆಗಳು ಯಶಸ್ವಿಯಾಗಿ ಜಪಾನ್‌ಗೆ ಸ್ಥಳಾಂತರಗೊಂಡಿವೆ. ಕತಾರ್ ಏರ್‌ವೇಸ್ ಸರಕು ವಿಮಾನದ ಮೂಲಕ ಬೆಂಗಳೂರಿನಿಂದ ಓಸಾಕಾಕ್ಕೆ ರವಾನೆಯಾದ ಆನೆಗಳು, ನಂತರ ಹಿಮೇಜಿ ಸೆಂಟ್ರಲ್ ಪಾರ್ಕ್‌ಗೆ ತಲುಪಿವೆ. ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿರುವ ಆನೆಗಳು ಈಗ ಸ್ವಚ್ಛಂದವಾಗಿ ಓಡಾಡುತ್ತಿವೆ. ವಿಡಿಯೋ ನೋಡಿ.

ಬೆಂಗಳೂರು, ಜುಲೈ 26: ಬನ್ನೇರುಘಟ್ಟ ಆನೆಗಳು (Elephants) ಯಶಸ್ವಿಯಾಗಿ ಜಪಾನ್​ಗೆ ಹೋಗಿ ತಲುಪಿವೆ. ಶುಕ್ರವಾರದಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕತಾರ್ ಏರ್​​ವೇಸ್
ಸರಕು ಸಾಗಾಣೆ ವಿಮಾನದ ಮೂಲಕ ಜಪಾನ್​ಗೆ ರವಾನಿಸಲಾಗಿತ್ತು. ಸುರೇಶ್ (8), ಗೌರಿ (9), ಶ್ರುತಿ(7) ಮತ್ತು ತುಳಸಿ (5) ಜಪಾನ್​​ಗೆ ತೆರಳಿದ ಆನೆಗಳು. ಸದ್ಯ ಜಪಾನ್​ ತಲುಪಿರುವ ಬನ್ನೇರುಘಟ್ಟ ಆನೆಗಳು ಕೇಜ್​ನಿಂದ ಹೊರಬಂದು ಹೊಸ ವಾತಾವರಣದಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿವೆ. ಆನೆಗಳ ಜೊತೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿಗಳು ಜಪಾನ್​ಗೆ ಹೋಗಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jul 26, 2025 01:09 PM