ಕಾಂಗ್ರೆಸ್ ನಾಯಕರೊಂದಿಗೆ ಈಗಲೂ ಆತ್ಮೀಯ ಒಡನಾಟವಿದೆ: ವಿ ಶ್ರೀನಿವಾಸ್ ಪ್ರಸಾದ್, ಸಂಸದ

|

Updated on: Mar 29, 2024 | 10:24 AM

ಜನರು ತಮ್ಮ ಪ್ರತಿನಿಧಿಯನ್ನು ಮುಕ್ತವಾಗಿ ಅಂದರೆ ಯಾವುದೇ ಆಸೆ-ಆಮಿಶಗಳಿಗೆ ಒಳಗಾಗದೆ ಆರಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಪ್ರಸಾದ್ ಹೇಳಿದರು. ಸಚಿವ ಹೆಚ್ ಸಿ ಮಹದೇವಪ್ಪ ನಿನ್ನೆ ತಮ್ಮನ್ನು ಭೇಟಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸಂಸದ, ಕಾಂಗ್ರೆಸ್ ಪಕ್ಷದೊಂದಿಗಿರುವ ತಮ್ಮ ಸಂಬಂಧವನ್ನು ಹೇಳಿಕೊಂಡರು.

ಮೈಸೂರು: ಹಿರಿಯ ಬಿಜೆಪಿ ನಾಯಕ ಮತ್ತು ಚಾಮರಾಜನರ ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ (V Srinivas Prasad) ಇಂದು ನಗರದ ತಮ್ಮ ನಿವಾಸದಲ್ಲಿ ಮಾತಾಡುವಾಗ ಪ್ರಸ್ತುತ ರಾಜಕೀಯ ವಾತಾವರಣ ಕಲುಷಿತಗೊಂಡಿದೆ ಅದರಲ್ಲಿ ಸುಧಾರಣೆ (reforms) ತರುವ ಅವಶ್ಯಕತೆ ಇದೆ ಎಂದು ಹೇಳಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ (democratic system) ಎಲ್ಲ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಅಭ್ಯರ್ಥಿಗಳನ್ನು ಮತದಾನದ ಮೂಲಕ ಅಯ್ಕೆ ಮಾಡಬೇಕು ಮತ್ತು ಜನರು ತಮ್ಮ ಪ್ರತಿನಿಧಿಯನ್ನು ಮುಕ್ತವಾಗಿ ಅಂದರೆ ಯಾವುದೇ ಆಸೆ-ಆಮಿಶಗಳಿಗೆ ಒಳಗಾಗದೆ ಆರಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಪ್ರಸಾದ್ ಹೇಳಿದರು. ಸಚಿವ ಹೆಚ್ ಸಿ ಮಹದೇವಪ್ಪ ನಿನ್ನೆ ತಮ್ಮನ್ನು ಭೇಟಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸಂಸದ, ಕಾಂಗ್ರೆಸ್ ಪಕ್ಷದೊಂದಿಗಿರುವ ತಮ್ಮ ಸಂಬಂಧವನ್ನು ಹೇಳಿಕೊಂಡರು.

ತಾನು ಸಂಸತ್ತಿಗೆ 6 ಬಾರಿ ಆಯ್ಕೆಯಾಗಿದ್ದು ಅರದಲ್ಲಿ 4 ಬಾರಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದಾಗಿ ಹೇಳಿದ ಅವರು ವಿಧಾನ ಸಭೆಗೂ ಎರಡು ಬಾರಿ ಕಾಂಗ್ರೆಸ್ ಶಾಸಕನಾಗಿ ಆಯ್ಕೆಯಾಗಿದ್ದನ್ನು ನೆನಪು ಮಾಡಿಕೊಂಡರು. ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರ ಜೊತೆ ತಮಗೆ ಆತ್ಮೀಯ ಸಂಬಂಧವಿದೆ ಎಂದು ಪ್ರಸಾದ್ ಹೇಳಿದರು. ತಾವು ರಾಜಕೀಯದಲ್ಲಿ ಅರ್ಧ ಶತಮಾನ ಪೂರೈಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನಗೆ ಕರೆ ಮಾಡಿ ಅಭಿನಂದಿಸಲಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾಜಕೀಯ ವೈರತ್ವ ಮರೆತು ಬಿಜೆಪಿ ಎಂಪಿ ಶ್ರೀನಿವಾಸ್ ಪ್ರಸಾದ್ ಮನೆಗೆ ಸಚಿವ ಮಹದೇವಪ್ಪ ಭೇಟಿ