ಭ್ರಷ್ಟಾಚಾರ ರಾಜ್ಯದೆಲ್ಲೆಡೆ ತಾಂಡವಾಡುತ್ತಿದೆ, ಮುಖ್ಯಮಂತ್ರಿ ಬೊಮ್ಮಾಯಿ ವಸೂಲಿ ಕೆಲಸ ಶುರುವಿಟ್ಟುಕೊಂಡಿದ್ದಾರೆ: ಡಿಕೆ ಶಿವಕುಮಾರ್
ಚುನಾವಣೆ ಹತ್ತಿರವಾಗುತ್ತಿರುವುದರಿಂದ ಮುಖ್ಯಮಂತ್ರಿ ಅಲ್ಪಾವಧಿಯ ಟೆಂಡರ್ ಮತ್ತು ಕಾರ್ಯಾದೇಶಗಳನ್ನು ಪಾಸ್ ಮಾಡುವ ಮೂಲಕ ವಸೂಲಿ ಕೆಲಸ ಶುರುಮಾಡಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದರು.
ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj S Bommai) ಅವರ ಸರ್ಕಾರದಲ್ಲಿ ರಾಜ್ಯದೆಲ್ಲೆಡೆ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಹೇಳಿದರು. ಚುನಾವಣೆ ಹತ್ತಿರವಾಗುತ್ತಿರುವುದರಿಂದ ಮುಖ್ಯಮಂತ್ರಿ ಅಲ್ಪಾವಧಿಯ ಟೆಂಡರ್ (short term tenders) ಮತ್ತು ಕಾರ್ಯಾದೇಶಗಳನ್ನು ಪಾಸ್ ಮಾಡುವ ಮೂಲಕ ವಸೂಲಿ ಕೆಲಸ ಶುರುಮಾಡಿದ್ದಾರೆ. ತಾಲ್ಲೂಕು ಮತ್ತು ಎಲ್ಲಾಮಟ್ಟದ ಅಧಿಕಾರಿಗಳ ಒತ್ತಡ ಹೇರಲಾಗುತ್ತಿದೆ, ಅಧಿಕಾರಿಗಳು ತಮ್ಮಲ್ಲಿಗೆ ಬಂದು ದೂರುಗಳನ್ನು ಹೇಳಿಕೊಳ್ಳುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 06, 2023 12:17 PM