ಮಾವ ಈಶ್ವರಪ್ಪಗಾಗಿ ಮನೆಮನೆ ತಿರುಗಿ ಕರಪತ್ರ ಹಂಚುತ್ತಾ ವೋಟು ಕೇಳುತ್ತಿರುವ ಶಾಲಿನಿ ಕಾಂತೇಶ್!

|

Updated on: Apr 27, 2024 | 6:00 PM

ನಮ್ಮ ಶಿವಮೊಗ್ಗ ಪ್ರತಿನಿಧಿಯೊಂದಿಗೆ ಮಾತಾಡಿರುವ ಅವರು ತನ್ನ ಮಾವನವರಿಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಮತ್ತು ಅವರ ಸಕಾರಾತ್ಮಕ ಪ್ರತಿಕ್ರಿಯೆ ಅತ್ಮವಿಶ್ವಾಸವನ್ನು ಹೆಚ್ಚಿಸಿ ಅತ್ಮಸ್ಥೈರ್ಯ ತುಂಬುತ್ತಿದೆ, ಧೈರ್ಯದಿಂದ ಮತ ಯಾಚನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ (KS Eshwarappa) ಒಂದು ಕಡೆ ತಮ್ಮ ಬೆಂಬಲಿಗರೊಂದಿಗೆ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿ ತಮಗಅಗಿ ಮತ ಯಾಚಿಸುತ್ತಿದ್ದರೆ ಮತ್ತೊಂದಡೆ ಅವರ ಸೊಸೆ ಅಂದರೆ ಕಾಂತೇಶ್ (Kanthesh) ಅವರ ಪತ್ನಿ ಶಾಲಿನಿ (Shalini) ಕೆಲ ಮಹಿಳಾ ಕಾರ್ಯಕರ್ತೆಯರೊಂದಿಗೆ ಮನೆಮನೆ ತಿರುಗಿ ಕರಪತ್ರಗಳನ್ನು ಹಂಚುತ್ತಾ ವೋಟು ಕೇಳುತ್ತಿದ್ದಾರೆ. ಜನರ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ ಈಶ್ವರಪ್ಪನವರಿಗೆ ಉತ್ತಮ ಬೆಂಬಲ ಸಿಗುತ್ತಿದೆ ಅನಿಸುತ್ತೆ. ನಮ್ಮ ಶಿವಮೊಗ್ಗ ಪ್ರತಿನಿಧಿಯೊಂದಿಗೆ ಮಾತಾಡಿರುವ ಅವರು ತನ್ನ ಮಾವನವರಿಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಮತ್ತು ಅವರ ಸಕಾರಾತ್ಮಕ ಪ್ರತಿಕ್ರಿಯೆ ಅತ್ಮವಿಶ್ವಾಸವನ್ನು ಹೆಚ್ಚಿಸಿ ಅತ್ಮಸ್ಥೈರ್ಯ ತುಂಬುತ್ತಿದೆ, ಧೈರ್ಯದಿಂದ ಮತ ಯಾಚನೆ ಮಾಡುತ್ತಿದ್ದೇವೆ ಎಂದು ಹೇಳಿದರು. ಈಶ್ವರಪ್ಪನವರಿಂದ ತಮಗೆ ಬಹಳ ಸಹಾಯವಾಗಿದೆ, ಯಾವುದೇ ಕೆಲಸಕ್ಕಾಗಿ ಹೋದರೂ ಅವರು ಅದನ್ನು ಮಾಡಿಕೊಟ್ಟಿದ್ದಾರೆ ಎಂದು ಜನ ಹೇಳುತ್ತಿದ್ದಾರೆ ಎಂದ ಶಾಲಿನಿ, ತಮ್ಮ ಮಾವ ಹಿಂದೂತ್ವವಾದಿಯಾಗಿರುವ ಅಂಶವೂ ನೆರವಾಗುತ್ತಿದೆ ಅಂತ ಹೇಳಿದರು. ಈಶ್ವರಪ್ಪನವರಿಗೆ ಸಿಕ್ಕಿರುವ ಚಿಹ್ನೆಯ ಬಗ್ಗೆಯೂ ಜನರಲ್ಲಿ ಗೊಂದಲ್ಲವಿಲ್ಲ, ಕಬ್ಬು ಹೊತ್ತ ರೈತ ಅಂತ ಅವರೇ ಹೇಳುತ್ತಿದ್ದಾರೆ ಎನ್ನುವ ಶಾಲಿನಿ ಬಿಜೆಪಿ ಯವತ್ತಿಗೂ ತಮ್ಮ ಕುಟಂಬಕ್ಕೆ ತಾಯಿಯ ಹಾಗೆ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಇದು ಮೋದಿಗಾಗಿ ನಡೆಯುತ್ತಿರುವ ಚುನಾವಣೆ, ಈಶ್ವರಪ್ಪ ನಿರ್ಧಾರ ದುರದೃಷ್ಟಕರ: ಕೆ ಅಣ್ಣಾಮಲೈ